January 29, 2026

Newsnap Kannada

The World at your finger tips!

jpg 1

ಕೈಗೆ ಕೈ ಕೊಟ್ಟ “ಸುಮಾಲತಾ ಮತ!”

Spread the love

ಸಂಸದೆ ಸುಮಲತಾ ಕೈ ಗೆ ಮತ ಚಲಾಯಿಸಿದರೂ ಅವರ ಮತ ಕೊನೆಗೂ ಕೈ ಕೊಟ್ಟಿದೆ. ನಾಗಮಂಗಲ ಪುರಸಭೆಯಲ್ಲಿ ಜೆಡಿಎಸ್ ಪ್ರಾಬಲ್ಯ ಸಾಧಿಸಿದೆ.

ತೀವ್ರ ಕುತೂಹಲ ಕೆರಳಿಸಿದ್ದ  ನಾಗಮಂಗಲ ಪಟ್ಟಣ ಪುರಸಭೆಯ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಜೆಡಿಎಸ್ ಯಶಸ್ವಿಯಾಗಿದೆ. ಕೇವಲ ಒಂದು ಮತದ ಅಂತರದಿಂದ ಜೆಡಿಎಸ್ ಪಕ್ಷದ ಇಬ್ಬರು ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

WhatsApp Image 2020 11 05 at 9.43.53 PM

ಕಡೇ ಕ್ಷಣದ ಕಸರತ್ತಿನ‌ ಮೂಲಕ ಸಂಸದೆ ಸುಮಲತಾರನ್ನು ಮತದಾನಕ್ಕೆ ಕರೆಸಿದ್ದ ಕಾಂಗ್ರೆಸ್ ಪಕ್ಷಕ್ಕೆ ತೀವ್ರ ಮುಖ ಭಂಗವಾಗಿದೆ. ಮತದಾನಕ್ಕೆ ಬಂದು ಅಧಿಕಾರ ಕೊಡಿಸಲಾಗದೆ ಸಂಸದೆ ಸುಮಲತಾ ಕೂಡ ತೀವ್ರ  ನಿರಾಶೆ ಅನುಭವಿಸಿದರು.

23 ಸದಸ್ಯರ ಜೊತೆಗೆ 1 ಸಂಸದೆ ಹಾಗೂ ಕ್ಷೇತ್ರದ ಶಾಸಕರ ಮತ ಸೇರಿ 25 ಮತಗಳು ಚುನಾವಣೆಗೆ ಊರ್ಜಿತವಾಗಿತ್ತು.

ಇಂದು ನಡೆದ ಅಧ್ಯಕ್ಷ ಮತ್ತು ಉಪಾಧ್ಯಕ್ಷರ  ಚುನಾವಣೆಯಲ್ಲಿ 13 ಮತ ಪಡೆದು ಜೆಡಿಎಸ್ ನ ಆಶಾ  ಅಧ್ಯಕ್ಷೆಯಾಗಿ ಆಯ್ಕೆಯಾದರು. ಜೆಡಿಎಸ್ ನ ಜಾಫರ್ ಶರೀಪ್  ಉಪಾಧ್ಯಕ್ಷರಾಗಿ  ಆಯ್ಕೆಯಾದರು. 1 ಮತದ ಅಂತರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಇಬ್ಬರು ಅಭ್ಯರ್ಥಿಗಳು ಪರಾಜಯ ಕೊಂಡಿದ್ದಾರೆ.

0e18bfd1 d470 408b bf22 54a6d0125251

ನಾಗಮಂಗಲ ಪಟ್ಟಣ ಪುರಸಭೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿದ ಸುದ್ದಿ ತಿಳಿಯುತ್ತಲೆ ಪುರಸಭೆ ಮುಂದೆ ಸೇರಿದ್ದ ನೂರಾರು ಕಾರ್ಯಕರ್ತರು ಪಟಾಕಿ  ಸಿಡಿಸಿ ಸಿಹಿ ಹಂಚಿ  ಸಂಭ್ರಮಿಸಿದರು. ಪುರಸಭೆಯಲ್ಲಿ ಜೆಡಿಎಸ್ ನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಶಾಸಕ ಸುರೇಶ್ ಗೌಡರನ್ನು ಪಟ್ಟಣ ಪುರಸಭೆಯ ಮುಂಭಾಗ  ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸಿ ಹೊತ್ತು‌ ಮೆರವಣಿಗೆ ನಡೆಸಿ ಸಂಭ್ರಮಾಚರಣೆ ನಡೆಸಿದರು.

error: Content is protected !!