ಹಿರಿಯ ನಟಿ ವಿನಯಾ ಪ್ರಸಾದ್ ಮನೆಯಲ್ಲಿ ಕಳ್ಳತನ ಮಾಡಿದ ಇಬ್ಬರು ಆರೋಪಿಗಳನ್ನು ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸರು ಬಂಧಿಸಿದ್ದಾರೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಅಯ್ಯಪ್ಪ ಅಲಿಯಾಸ್ ಮುರುಗ (36) ಹಾಗೂ ರವಿ ( 26) ಬಂಧಿತ ಆರೋಪಿಗಳು.ಮತದಾರರ ಮಾಹಿತಿ ಕಳ್ಳತನ- ಬೆಂಗಳೂರು DC, ಬಿಬಿಎಂಪಿ Spl ಆಯುಕ್ತರು, ಮೂವರು ಎಸಿಗಳ ಅಮಾನತ್ತು.
ಆರೋಪಿಗಳಿಂದ 13.53 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 261 ಗ್ರಾಂ ಚಿನ್ನಾಭರಣ ಹಾಗೂ 500 ಗ್ರಾಂ ಬೆಳ್ಳಿ ಸಾಮಗ್ರಿ ಜಪ್ತಿ ಮಾಡಲಾಗಿದೆ. ಇವರಿಬ್ಬರು ಠಾಣೆಯ ವ್ಯಾಪ್ತಿಯ 5 ಕಡೆ ಕಳ್ಳತನ ಎಸಗಿದ್ದರು
ಬೆಂಗಳೂರಿನ ನಂದಿನಿ ಲೇಔಟ್ 4 ನೇ ಬ್ಲಾಕ್ ನ ರೈಲ್ವೆ ಮೈನ್ಸ್ ಕಾಲೋನಿ ನಿವಾಸದಲ್ಲಿ ದುಷ್ಕರ್ಮಿಗಳು ಕಳ್ಳತನ ಮಾಡಿದ್ದು, ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ದುಷ್ಕರ್ಮಿಗಳ ಪತ್ತೆ ಶೋಧ ಕಾರ್ಯ ನಡೆಸಿದ್ದರು.
ದೋಚಿದ್ದು ಕೇವಲ 7 ಸಾವಿರ :
ನಟಿ ವಿನಯಾ ಪ್ರಸಾದ್ ಹಾಗೂ ಅವರ ಪತಿ ಜ್ಯೋತಿ ಪ್ರಕಾಶ್ ಅವರು ಮನೆಗೆ ಬೀಗ ಹಾಕಿಕೊಂಡು ಕಾರ್ಯ ನಿಮಿತ್ತ ಅ.22 ರಂದು ಉಡುಪಿಗೆ ತೆರಳಿದ್ದರು. ಈ ವೇಳೆ ದುಷ್ಕರ್ಮಿಗಳು ಮನೆಯ ಬಾಗಿಲ ಬೀಗವನ್ನು ಮುರಿದು ಮನೆ ಪ್ರವೇಶಿಸಿ 7 ಸಾವಿರ ರು ನಗದು ಹಣ ದೋಚಿ ಪರಾರಿಯಾಗಿದ್ದರು.
- ಸಂಕ್ರಾಂತಿ….
- ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆ
- ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತೆರಳುತ್ತಿದ್ದ ಕಾರು ಅಪಘಾತ
- ರೈತರ ಕ್ರಾಂತಿ ಸಂಕ್ರಾಂತಿ
- ಮಕರ ಸಂಕ್ರಾಂತಿ ಶಾಸ್ತ್ರ ರೀತ್ಯ ಆಚರಣೆ
- ಮಕರ ಸಂಕ್ರಾಂತಿ
More Stories
ಸಂಕ್ರಾಂತಿ….
ಆರು ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕೊಲೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತೆರಳುತ್ತಿದ್ದ ಕಾರು ಅಪಘಾತ