December 19, 2024

Newsnap Kannada

The World at your finger tips!

ED , business , honeytrap

ED shocked to find the money business of honeytrap queen Archana who trapped 18 MLAs 18 ಶಾಸಕರನ್ನು ಬಲೆಗೆ ಹಾಕಿಕೊಂಡ ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಹಣದ ವ್ಯವಹಾರ ಕಂಡು ಬೆರಗಾದ ED

18 ಶಾಸಕರನ್ನು ಬಲೆಗೆ ಹಾಕಿಕೊಂಡ ಹನಿಟ್ರ್ಯಾಪ್​ ಕ್ವೀನ್​ ಅರ್ಚನಾಳ ಹಣದ ವ್ಯವಹಾರ ಕಂಡು ಬೆರಗಾದ ED

Spread the love

ಬೆದರಿಕೆ ಒಡ್ಡಿ ಅನೇಕ ಹೈ ಪ್ರೊಫೈಲ್​ ಜನರ ಬಳಿ ಹಣ ಸುಲಿಗೆ ಮಾಡಿದ ಆರೋಪದ ಮೇಲೆ ಮಹಿಳಾ ಬ್ಲಾಕ್​ಮೇಲರ್​ ಅರ್ಚನಾ ನಾಗ್​ ಎಂಬಾಕೆಯನ್ನು ಒಡಿಶಾ ಪೊಲೀಸರು ಬಂಧಿಸಿರುವ ಬೆನ್ನಲ್ಲೇ ಇದೀಗ ಆಕೆಯ ಹಣಕಾಸಿ ವಹಿವಾಟ ಮಾಡಿರುವುದನ್ನು ಕಂಡು ಇಡಿ ಅಧಿಕಾರಿಗಳೇ ದಂಗಾಗಿದ್ದಾರೆ.

ಅರ್ಚನಾಳ ಹನಿಟ್ರ್ಯಾಪ್​ ಮತ್ತು ಹಣ ಸುಲಿಗೆ ಪ್ರಕರಣದ ತನಿಖೆ ತನಿಖೆಯಲ್ಲಿ ಜಾರಿ ನಿರ್ದೇಶನಾಲಯ (ಇಡಿ) ಸಹ ಸೇರಿಕೊಂಡಿದೆ.ಶಿರಾಳಕೊಪ್ಪದ ಬಳಿ ರಸ್ತೆ ಅಪಘಾತ: ಮಗು ಸೇರಿ ಒಂದೇ ಕುಟುಂಬದ ಮೂವರು ಸಾವು

ಅರ್ಚನಾಳ ಹಣದ ವ್ಯವಹಾರವನ್ನು ತನಿಖೆ ನಡೆಸುತ್ತಿರುವ ಇಡಿ ಅಧಿಕಾರಿಗಳು ಆಕೆಯ ಹಣದ ವರ್ಗಾವಣೆ ಮಾಹಿತಿ ನೋಡಿ ದಂಗಾಗಿದ್ದಾರೆ.

ಒಡಿಶಾ ಹೊರಗಡೆ ಇರುವ ಅನೇಕ ಕಂಪನಿಗಳ ಜೊತೆ ಅರ್ಚನಾಗೆ ಸಂಪರ್ಕ ಇರುವುದಾಗಿ ತಿಳಿದುಬಂದಿದೆ. ಅರ್ಚನಾಳ ಸರಣಿ ಹಣಕಾಸಿನ ವಹಿವಾಟುಗಳನ್ನು ಇಡಿ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ. ದೆಹಲಿ ಮತ್ತು ಮುಂಬೈನಲ್ಲಿರುವ ಕಂಪನಿಗಳ ನಡುವೆ ಭಾರಿ ಮೊತ್ತದ ವಹಿವಾಟು ನಡೆದಿರುವುದಾಗಿ ಇಡಿ ಮೂಲಗಳು ತಿಳಿಸಿವೆ.

ತನಿಖೆಯ ಸಂದರ್ಭದಲ್ಲಿ ಇಡಿ ಅಧಿಕಾರಿಗಳು ಅರ್ಚನಾ ನಾಗ್ ಅವರ ಹಣಕಾಸಿನ ವಹಿವಾಟಿಗೆ ಸಂಬಂಧಿಸಿದ ಹಲವಾರು ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಅರ್ಚನಾಳ ಎಟಿಎಂ ಕಾರ್ಡ್‌ನಿಂದ ಹಲವಾರು ಸಂದರ್ಭಗಳಲ್ಲಿ ಭಾರಿ ಮೊತ್ತದ ಹಣ ಜಮಾ ಆಗಿರುವುದನ್ನು ತನಿಖಾ ತಂಡ ಪತ್ತೆ ಮಾಡಿದೆ.

ಸದ್ಯ ಕಂಪನಿಗಳೊಂದಿಗೆ ಅರ್ಚನಾಳ ಸಂಬಂಧ ಮತ್ತು ಹಣಕಾಸಿನ ವಹಿವಾಟಿನ ಉದ್ದೇಶವನ್ನು ತಿಳಿಯಲು ಇಡಿ ಅಧಿಕಾರಿಗಳಿಂದ ಹೆಚ್ಚಿನ ತನಿಖೆ ನಡೆಯುತ್ತಿದೆ.

ಯಾರು ಈ ಅರ್ಚನಾ?
26 ವರ್ಷದ ಅರ್ಚನಾ ಓರ್ವ ಬ್ಲಾಕ್​ಮೇಲರ್​. ಈಕೆಯ ಹನಿಟ್ರ್ಯಾಪ್​ ಬಲೆಗೆ ಬಿದ್ದ ರಾಜಕಾರಣಿಗಳು, ಉದ್ಯಮಿಗಳು ಮತ್ತು ಸಿನಿಮಾ ನಿರ್ಮಾಪಕರು ಸೇರಿದಂತೆ ಪ್ರಭಾವಿಗಳ ಅಶ್ಲೀಲ ಫೋಟೋ ಮತ್ತು ವಿಡಿಯೋಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವುದಾಗಿ ಬೆದರಿಸಿ, ಹಣ ಸುಲಿಗೆ ಮಾಡುವುದೇ ಈಕೆಯ ನಿತ್ಯದ ಕೆಲಸವಾಗಿತ್ತು. ಒಡಿಶಾದ ಚಲನಚಿತ್ರ ನಿರ್ಮಾಪಕ ಅಕ್ಷಯ್ ಪಾರಿಜಾ ಅವರನ್ನು ಹನಿಟ್ರ್ಯಾಪ್​ ಬಲೆಗೆ ಬೀಳಿಸುವ ಅರ್ಚನಾರ ಯೋಜನೆ ವಿಫಲವಾದ ಬಳಿಕ ಆಕೆ ಪೊಲೀಸರ ಅತಿಥಿಯಾಗಿದ್ದಾಳೆ.

ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಅರ್ಚನಾ ಮತ್ತು ಆಕೆಯ ಪತಿ ಜಗಬಂಧು 30 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಗಳಿಸಿದ್ದಾರೆ. ಅರ್ಚನಾ ಹೆಸರಿನಲ್ಲಿ ಮೂರು ಅಂತಸ್ತಿನ ಅರಮನೆಯಂತಹ ಬಂಗಲೆ ಇದೆ. ಮನೆಯಲ್ಲಿ ಪೀಠೋಪಕರಣಗಳ ಬೆಲೆ 40 ಲಕ್ಷ ರೂ. ಎಂಬುದು ಅಚ್ಚರಿಯ ಸಂಗತಿ.

Copyright © All rights reserved Newsnap | Newsever by AF themes.
error: Content is protected !!