ಪ್ರಕರಣಕ್ಕೆ ತಡೆ ನೀಡಲು ಹೈಕೋರ್ಟ್ ಅಸಮ್ಮತಿ: ಸಂಪತ್ ರಾಜ್‌ಗೆ ಬಂಧನಕ್ಕೆ ಕ್ಷಣ ಗಣನೆ

Team Newsnap
1 Min Read

ಡಿಜೆ ಹಳ್ಳಿ ಗಲಭೆ ಹಾಗೂ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆಯ ಮೇಲೆ ದಾಳಿಯ ಪ್ರಕರಣಕ್ಕೆ ತಡೆ ನೀಡುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಮಾಜಿ ಮೇಯರ್ ಸಂಪತ್ ರಾಜ್ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ಹೈಕೋರ್ಟ್ ವಜಾ ಮಾಡಿದೆ.

ಸಂಪತ್ ರಾಜ್ ಅವರಿಗೆ ಬಂಧನದ ಭೀತಿ ಎದುರಾಗಿದೆ. ಬಂಧನಕ್ಕೆ ಕ್ಷಣ ಗಣನೆ ಆರಭವಾಗಿದೆ.

ಆಗಸ್ಟ್‌ನಲ್ಲಿ ಕೆಜೆ ಹಳ್ಳಿ, ಡಿಜೆ ಹಳ್ಳಿಯಲ್ಲಿ ನಡೆದ ಗಲಭೆಯಲ್ಲಿ ಸಂಪತ್ ರಾಜ್ ಕೂಡ ಒಬ್ಬ ಆರೋಪಿಯಾಗಿದ್ದರು. ಹಾಗಾಗಿ ಸಂಪತ್ ರಾಜ್ ಪ್ರಕರಣಕ್ಕೆ ತಡೆ ನೀಡುವಂತೆ ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಿರೋಧಿಸಿದ ಸಿಸಿಬಿ ಪರ ವಕೀಲರು ಪ್ರಕರಣದ ಗಂಭೀರತೆಯನ್ನು ವಿವರಿಸಿ ಯಾವುದೇ ಕಾರಣಕ್ಕೂ ಪ್ರಕರಣಕ್ಕೆ ತಡೆಯಾಜ್ಞೆ ನೀಡಬಾರದೆಂದು ಮಂದಿಸಿದ ವಾದವನ್ನು ಪುರಸ್ಕರಿಸಿದ ನ್ಯಾಯಾಲಯವು ತಡೆಯಾಜ್ಞೆಯ ಅರ್ಜಿಯನ್ನು ವಜಾಗೊಳಿಸಿತು.

ಕಳೆದ ಗುರುವಾರ ಕೊರೋನಾ ಚಿಕಿತ್ಸೆಗೆಂದು ಸೇರಿದ್ದ ಸಂಪತ್ ರಾಜ್ ಅವರು ಆಸ್ಪತ್ರೆಯಿಂದ ಪರಾರಿಯಾಗಿದ್ದರು. ನಂತರ ಪೋಲೀಸರು ಅವರ ಮನೆಗೆ ಹೋಗಿ ನೋಟಿಸ್ ಸಹ ಅಂಟಿಸಿ ಬಂದಿದ್ದರು. ತಲೆ ತಪ್ಪಿಸಿಕೊಂಡು ತಿರುಗುತ್ತಿರುವ ಸಂಪತ್ ಅವರ ಪತ್ತೆಗೆ ಪೋಲೀಸರು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಅಲ್ಲದೇ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದ ಸಂಪತ್ ರಾಜ್ ಅವರ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ 15ಕ್ಕೆ ಮುಂದೂಡಿದೆ.

Share This Article
Leave a comment