December 22, 2024

Newsnap Kannada

The World at your finger tips!

WhatsApp Image 2022 10 15 at 7.22.29 PM

Transfer of power in Muruga Math: Power from Shivamurthy Swami to retired justice ಮುರುಘಾಮಠದ ಅಧಿಕಾರ ಹಸ್ತಾಂತರ : ಶಿವಮೂರ್ತಿ ಸ್ವಾಮಿಯಿಂದ ನಿವೃತ್ತ ನ್ಯಾಯಮೂರ್ತಿಗೆ ಅಧಿಕಾರ

ಮುರುಘಾಮಠದ ಅಧಿಕಾರ ಹಸ್ತಾಂತರ : ಶಿವಮೂರ್ತಿ ಸ್ವಾಮಿಯಿಂದ ನಿವೃತ್ತ ನ್ಯಾಯಮೂರ್ತಿಗೆ ಅಧಿಕಾರ

Spread the love

ಹೈಕೋರ್ಟ್ ಅನುಮತಿ ನೀಡಿದ ಬಳಿಕ ವಸ್ತ್ರದಮಠ್​ ಅವರಿಗೆ ಮುರುಘಾಶ್ರೀ ಪವರ್ ಆಫ್​ ಅಟರ್ನಿ ನೀಡಿದ್ದಾರೆ.

ಎಸ್​​​​ಜೆಎಂ ವಿದ್ಯಾಪೀಠದ ಚೆಕ್ ಸಹಿ ಸೇರಿದಂತೆ ವಿವಿಧ ಆಡಳಿತಾತ್ಮಕ ನಿರ್ಧಾರಕ್ಕಾಗಿ ವಸ್ತ್ರದಮಠ್​ಗೆ ಅಧಿಕೃತವಾಗಿ ನೋಟರಿ ಮಾಡಿ ಅಧಿಕಾರ ಆಫ್​ ಅಟರ್ನಿ ಹಸ್ತಾಂತರ ಮಾಡಿದರು.ಇದನ್ನು ಓದಿ –ರಾಜ್ಯ ಮಟ್ಟದಲ್ಲಿ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ: ಕೆಯುಡಬ್ಲ್ಯೂಜೆ ಕಾರ್ಯಕ್ರಮ

ಪೋಕ್ಸೋ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾಮಠದ ಮುರುಘಾ ಸ್ವಾಮಿ ಜೈಲಿನಲ್ಲಿರುವ ಹಿನ್ನೆಲೆ ವಿವಿಧ ಆಡಳಿತಾತ್ಮಕ ನಿರ್ಧಾರಗಳನ್ನು ಕೈಗೊಳ್ಳಲು ತೊಂದರೆಯಾಗಿತ್ತು. ಹೀಗಾಗಿ ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಪವರ್ ಆಫ್ ಅಟಾರ್ನಿ ಜಾರಿಗೆ ಹೈಕೋರ್ಟ್ ಅನುಮತಿ ನೀಡಿತ್ತು.

ಈ ಹಿನ್ನೆಲೆ ಪ್ರಮುಖ ನಿರ್ಧಾರ ಕೈಗೊಳ್ಳುವ ಪವರ್ ಆಫ್​ ಅಟಾರ್ನಿಯನ್ನು ಮುರುಘಾ ಮಠದ ಎಸ್​​​​ಜೆಎಂ ವಿದ್ಯಾಪೀಠದ ಕಾರ್ಯದರ್ಶಿಯೂ ಆಗಿರುವ ನಿವೃತ್ತ ನ್ಯಾ.ಎಸ್.ಬಿ.ವಸ್ತ್ರದಮಠ್ ಅವರಿಗೆ ನೀಡಿದ್ದಾರೆ.

ಸಂಸ್ಥೆಯ ಸಿಬ್ಬಂದಿಗೆ ಸಂಬಳ ನೀಡುವುದು ತಡವಾಗಿತ್ತು. ಆಶ್ರಮದ ಮಕ್ಕಳಿಗೂ ಸರಿಯಾದ ಸಮಯಕ್ಕೆ ಸೌಲಭ್ಯಗಳು ದೊರೆಯುತ್ತಿರಲಿಲ್ಲ. ಈ ಹಿಂದೆ ಹೈಕೋರ್ಟ್ ಅನುಮತಿ ಪಡೆದು ಜೈಲಿನಲ್ಲೇ ಮುರುಘಾಶ್ರೀ ಚೆಕ್​ಗಳಿಗೆ ಸಹಿ ಮಾಡಿದ್ದರು.

ಮೂರನೇ ಆರೋಪಿಗೆ ಜಾಮೀನು:

ಚಿತ್ರದುರ್ಗದ ಮುರುಘಾ ಸ್ವಾಮಿ ವಿರುದ್ಧದ ಫೋಕ್ಸೋ ಪ್ರಕರಣದಲ್ಲಿ 3ನೇ ಆರೋಪಿಗೆ ಬಾಲ ನ್ಯಾಯ ಮಂಡಳಿ ಮಧ್ಯಂತರ ಜಾಮೀನು ನೀಡಿದೆ.

ನಾಪತ್ತೆ ಆಗಿದ್ದ 3ನೇ ಆರೋಪಿ, ಮಠದ ಉತ್ತರಾಧಿಕಾರಿ ನಿನ್ನೆ ಬಾಲ ನ್ಯಾಯಮಂಡಳಿಗೆ ಶರಣಾಗಿದ್ದ. ಆದರೆ ಪೊಲೀಸರು ಉಳಿದ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಪೊಲೀಸರೇ ಕೇಸ್​ ಬಗ್ಗೆ ವಿಳಂಬ ನೀತಿ ಅನುಸರಿಸುತ್ತಿದ್ದಾರೆ. ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರ್ತಿದೆ.

Copyright © All rights reserved Newsnap | Newsever by AF themes.
error: Content is protected !!