December 19, 2024

Newsnap Kannada

The World at your finger tips!

knowledge, book, library

ಗ್ಯಾನವಾಪಿ ಪ್ರಕರಣ : ‘ಕಾರ್ಬನ್ ಡೇಟ್​’ ಪರೀಕ್ಷೆಗೆ ವಾರಣಾಸಿ ಕೋರ್ಟ್ ನಕಾರ

Spread the love

ಗ್ಯಾನವಾಪಿ ಮಸೀದಿ ಪ್ರಕರಣದಲ್ಲಿ ಕಾರ್ಬನ್ ಡೇಟ್​ ಪರೀಕ್ಷೆಗೆ ಅನುಮತಿ ನೀಡಲು ವಾರಣಸಿ ಕೋರ್ಟ್​ ನಿರಾಕರಿಸಿದೆ.

ಗ್ಯಾನ್​ವಾಪಿ ಮಸೀದಿಯ ವಜೂಖಾನಾದಲ್ಲಿ ಪತ್ತೆಯಾಗಿರುವ ಶಿವಲಿಂಗ ಮಾದರಿಯ ನೈಜತೆ ಅರಿಯಲು ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸುವಂತೆ ಕೋರಿ ವಾರಣಸಿ ಕೋರ್ಟ್​ಗೆ ನಾಲ್ವರು ಮಹಿಳೆಯರು ಅರ್ಜಿ ಸಲ್ಲಿಸಿದ್ದರು . ಈ ಅರ್ಜಿಗಳ ವಿಚಾರಣೆಯನ್ನು ನಡೆಸಿ ಇಂದು ಕೋರ್ಟ್​ ತೀರ್ಪು ನೀಡಿದ್ದು, ಶಿವಲಿಂಗದ ವೈಜ್ಞಾನಿಕ ಪರೀಕ್ಷೆಗೆ ಅವಕಾಶ ಇಲ್ಲ ಎಂದು ಹೇಳಿದೆ. ಮುರುಘಾ ಸ್ವಾಮಿ ಮಕ್ಕಳ ಅಶ್ಲೀಲ ವೀಡಿಯೋ ನೋಡುವ ಚಟವಿದೆ : ಒಡನಾಡಿ ಆರೋಪ

ಕಾರ್ಬನ್ ಡೇಟ್ ಅಂದ್ರೆ ಪ್ರಾಚೀನ ವಸ್ತುಗಳ ಕಾಲ ನಿರ್ಧರಿಸುವ ವೈಜ್ಞಾನಿಕ ಪರೀಕ್ಷೆಯಾಗಿದೆ. ಕಾರ್ಬನ್ ಡೇಟಿಂಗ್​ನಿಂದ ವಿಗ್ರಹಗಳ ಕಾಲಾವಧಿ ತಿಳಿಯುತ್ತದೆ. 50 ಸಾವಿರ ವರ್ಷಗಳ ಹಿಂದಿನ ಕಾಲಮಾನ ತಿಳಿಯಬಹುದು.

ವಸ್ತುವಿನ ಮೇಲೆ ಉಳಿದಿರುವ ಕಾರ್ಬನ್ ಆಧರಿಸಿ ಪರೀಕ್ಷೆ ಮಾಡಲಾಗುತ್ತೆ. ಗಟ್ಟಿಯಾಗಿರುವ ವಸ್ತು ಮೇಲೆ ಪ್ರಯೋಗ ಮಾಡುವ ವಿಧಾನವಾಗಿದೆ. ಮೂಳೆ, ಮರದ ಮೇಲೆ ಪ್ರಯೋಗ ಮಾಡಲಾಗುತ್ತೆ, ಕಾರ್ಬನ್ ಡೇಟಿಂಗ್​ನಿಂದ 90% ರಷ್ಟು ಕಾಲಮಾನ ನಿರ್ಧಾರ ಆಗಲಿದೆ.

ಅಮೆರಿಕದ ಚಿಕಾಗೋ ವಿವಿಯಲ್ಲಿ ವಿಲ್ಲಾರ್ಡ್ ಲಿಬ್ಬಿಯಿಂದ ಅಭಿವೃದ್ಧಿ ಆಗಿದ್ದು 1940ರಿಂದಲೇ ಕಾರ್ಬನ್ ಡೇಟಿಂಗ್ ವಿಧಾನ ದೃಢಪಟ್ಟಿದೆ. ಅಯೋಧ್ಯೆ ರಾಮಮಂದಿರ ಬಳಿಕ ಭಾರೀ ಸುದ್ದಿ ಮಾಡಿದ್ದು ಕಾಶಿಯ ಗ್ಯಾನವಾಪಿ ಮಸೀದಿ ಪ್ರಕರಣ. ಮಸೀದಿಯಲ್ಲಿ ಪತ್ತೆಯಾಗಿರುವ ಕಲ್ಲಿನಮೂರ್ತಿ ಶಿವಲಿಂಗ ಹೌದೋ, ಅಲ್ಲವೋ ಎನ್ನುವ ಬಗ್ಗೆ ಕಾರ್ಬನ್‌ ಡೇಟಿಂಗ್ ಪರೀಕ್ಷೆ ನಡೆಸುವಂತೆ ಹಿಂದೂ ಪರ ಅರ್ಜಿದಾರರು ಕೋರ್ಟ್ ಗೆ ​ಮನವಿ ಮಾಡಿಕೊಂಡಿದ್ದರು.

Copyright © All rights reserved Newsnap | Newsever by AF themes.
error: Content is protected !!