ಕಾಬೂಲ್ ವಿಶ್ವವಿದ್ಯಾಲಯದಲ್ಲಿ ಗುಂಡಿನ ದಾಳಿ: 19 ಸಾವು 22 ಜನಕ್ಕೆ ಗಾಯ

Team Newsnap
1 Min Read

ಅಫ್ಘಾನಿಸ್ತಾನದ ಕಾಬೂಲ್ ವಿಶ್ವವಿದ್ಯಾನಿಲಯದಲ್ಲಿ ಆಯೊಜಿಸಲಾಗಿದ್ದ ಪುಸ್ತಕ ಮೇಳಕ್ಕೆ ಇರಾನಿನ ರಾಯಭಾರಿ ಬಹದ್ದೂರ್ ಅಮಿನಿಯನ್ ಉದ್ಘಾಟಕರಾಗಿ ಭಾಗವಹಿಸಿದ್ದ ಸಮಯದಲ್ಲಿ ಬಂದೂಕುಧಾರಿಗಳು ನುಗ್ಗಿ ಸುಮಾರು 1 ಗಂಟೆಗಳ ಕಾಲ ಗುಂಡಿನ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಕನಿಷ್ಠ 19 ಮಂದಿ ಸತ್ತಿದ್ದಾರೆ ಮತ್ತು 22 ಮಂದಿ ಗಾಯಗೊಂಡಿದ್ದಾರೆ.

‘ದಾಳಿಯಲ್ಲಿ ಮೂವರು ದಾಳಿಕೋರರು ಭಾಗಿಯಾಗಿದ್ದರು. ಇವರೆಲ್ಲರೂ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾರೆ. ತಾಲಿಬಾನ್‌ನವರು ದಾಳಿಯಲ್ಲಿ ತಮ್ಮ ಭಾಗವಹಿಸುವಿಕೆಯನ್ನು ನಿರಾಕರಿಸಿರೂ, ದಾಳಿಯಲ್ಲಿ ತಾಲಿಬಾನ್ ಪಾತ್ರ ಇದೆ ಎಂಬುದಕ್ಕೆ ಪೂರಕವಾದ ಕೆಲವು ವಿವರಗಳಿವೆ. ಯು.ಎಸ್ ಬೆಂಬಲಿತ ಸರ್ಕಾರದೊಂದಿಗೆ ದಂಗೆಕೋರರು ಶಾಂತಿ ಮಾತುಕತೆ ನಡೆಯುತ್ತಿರುವ ವೇಳೆಯಲ್ಲಿಯೇ ಈ ದಾಳಿ ನಡೆದಿದೆ’ ಎಂದು ಅಫಘಾನಿಸ್ತಾನ ಸಚಿವಾಲಯದ ವಕ್ತಾರ ತಾರಿಕ್ ಏರಿಯನ್ ಹೇಳಿದರು.

ಗಲ್ಫ್ ಅರಬ್ ರಾಜ್ಯವಾದ ಖತಾರ್‌ನಲ್ಲಿ ನಡೆಯುತ್ತಿರುವ ಆ ಮಾತುಕತೆಗಳು ಅಮೇರಿಕಾ ಹಾಗೂ ಇಸ್ಲಾಮಿಕ್ ರಾಷ್ಟ್ರಗಳ ನಡೆವೆ ನಡೆಯುತ್ತಿರುವ ರಕ್ತಪಾತವನ್ನು ನಿಲ್ಲಿಸಲು ಪ್ರಯತ್ನಿಸುತ್ತಿವೆ. ಈ ವೇಳೆಯಲ್ಲಿಯೇ ಬಂದೂಕು, ಹ್ಯಾಂಡ್ ಗ್ರೆನೇಡ್‌ಗಳೊಂದಿಗೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.

ದಾಳಿ ನಡೆಯಿತ್ತಿದ್ದಂತೆ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆವರಣದಿಂದ ಪಲಾಯನಗೈದರು ಮತ್ತು ಅಫ್ಘನ್ ಭದ್ರತಾ ಪಡೆಗಳು ಕಾವಲು ನಿಂತವಾದರೂ ಸಾವು ನೋವುಗಳು ಸಂಭವಿಸಿವೆ ಎಂದು ಏರಿಯನ್ ಹೇಳಿದರು.

ವಿಶ್ವವಿದ್ಯಾಲಯದ ಕಾನೂನು ಮತ್ತು ಪತ್ರಿಕೋದ್ಯಮ ಭಾಗದಲ್ಲಿ ಈ ದಾಳಿ ನಡೆದಿದೆ. ಅಫ್ಘಾನ್ ಮಾಧ್ಯಮವು ವಿಶ್ವವಿದ್ಯಾಲಯದಲ್ಲಿ ಪುಸ್ತಕ ಪ್ರದರ್ಶನವನ್ನು ನಡೆಸುತ್ತಿದ್ದ ಸಮಯದಲ್ಲಿ ಇರಾನ್‌ನ ಸಾಂಸ್ಕೃತಿಕ ಬಾಂಧವ್ಯ ಮೊಜ್ತಾಬಾ ನೊರೂಜಿ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಿದ್ದರು.

ತಾಲಿಬಾನ್ ಸಂಘಟನೆ ಘಟನೆಯಲ್ಲಿ ತಾನು ಭಾಗಿಯಾಗಿಲ್ಲ ಎಂದು ಹೇಳಿಕೆ ನೀಡಿದ್ದರೂ ಸಹ ಯಾವುದೇ ಗುಂಪು ತಕ್ಷಣ ನಡೆಯುತ್ತಿರುವ ದಾಳಿಯ ಜವಾಬ್ದಾರಿಯನ್ನು ತೆಗೆದುಕೊಳ್ಳಲಿಲ್ಲ. ಆದರೆ, ತಕ್ಷಣದ ಅನುಮಾನ ಇಸ್ಲಾಮಿಕ್ ಸ್ಟೇಟ್ ಗುಂಪಿನ ಮೇಲೆ ಬಿದ್ದಿದೆ.

Share This Article
Leave a comment