ಐಪಿಎಲ್ 20-20ಯ 55ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ, ಡೆಲ್ಲಿ ಕ್ಯಾಪಿಟಲ್ಸ್ ತಂಡ ಮುನ್ನಡೆ ಸಾಧಿಸಿತು.
ದುಬೈನ ಶೇಕ್ ಜಯೇದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡಿಸಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಆರ್‌ಸಿಬಿ ತಂಡದಿಂದ ಓಪನಿಂಗ್ ಬ್ಯಾಟ್ಸ್‌ಮನ್‌ಗಳಾಗಿ ಜೆ. ಫಿಲಿಪ್ ಹಾಗೂ ದೇವದತ್ ಪಡಿಕ್ಕಲ್ ಸ್ಕ್ರೀಸ್‌ಗಿಳಿದರು. ಇವರ ಜೋಡಿಯಾಟ ಕಳೆದ ಬಾರಿಯಂತೆ ಕಳಪೆಯಾಗಿತ್ತು. ಫಿಲಿಪ್ 17 ಎಸೆತಗಳಿಗೆ 12 ರನ್ ಗಳಿಸಿದರೆ, ಪಡಿಕ್ಕಲ್ 41 ಎಸೆತಗಳಿಗೆ 50 ರನ್‌ಗಳ ಮೊತ್ತವನ್ನು ತಂಡಕ್ಕೆ ನೀಡಿದರು. ನಂತರ ಬಂದ ವಿರಾಟ್ ಕೊಹ್ಲಿ 24 ಎಸೆತಗಳಿಗೆ 29 ರನ್‌ಗಳ ಸಾಧಾರಣ ಮೊತ್ತವನ್ನು ನೀಡಿದರು. ಆದರೆ ನಿರೀಕ್ಷಿತ ಆಟಗಾರರಾದ ಎಬಿ ಡೀ ವಿಲಿಯರ್ಸ್ ಅವರ ಆಟ ಆಕರ್ಷಕವಾಗಿರಲಿಲ್ಲ. ಎಬಿ ಡೀ 21 ಎಸೆತಗಳಿಗೆ 35 ರನ್ ಮಾತ್ರ ಗಳಿಸಿದರು. ಆರ್‌ಸಿಬಿ ತಂಡ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 152 ರನ್‌ಗಳನ್ನು ಮಾತ್ರ ಗಳಿಕೆ ಮಾಡಿತು.
ಆರ್‌ಸಿಬಿ ತಂಡದ ಪ್ರತಿ ತಂಡವಾದ ಡಿಸಿ ತಂಡದಿಂದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಮೈದಾನಕ್ಕಿಳಿದರು. ಶಾ ಕೇವಲ 9 ರನ್‌ಗಳಿಗೇ ಪೆವಿಲಿಯನ್ ಸೇರಿದರೆ, ಧವನ್ 41 ಎಸೆತಗಳಿಗೆ 54 ರನ್ ಗಳಿಸಿದರು. ತದನಂತರ ಬಂದ ಅಜಿಂಕ್ಯ ರಹಾನೆ ಅವರು 46 ಎಸೆತಗಳಿಗೆ 60 ರನ್‌ಗಳ ದೊಡ್ಡ ಮೊತ್ತವನ್ನು ತಂಡಕ್ಕೆ ನೀಡಿದರು. ಡಿಸಿ ತಂಡ 19 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 154 ರನ್ ಗಳಿಸಿ ಪಂದ್ಯದಲ್ಲಿ ಗೆಲುವಿನ ಕಿರೀಟವನ್ನು ತನ್ನದಾಗಿಸಿಕೊಂಡಿತು.
ಆರ್‌ಸಿಬಿ ಹಾಗೂ ಡಿಸಿ ಪ್ಲೇ ಆಫ್ ನಲ್ಲಿ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡರು
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ