December 19, 2024

Newsnap Kannada

The World at your finger tips!

BJP , election , politics

ನಾಳೆಯ ಬಿಜೆಪಿ ಜನೋತ್ಸವ ಕಾರ್ಯಕ್ರಮ ಭಾನುವಾರಕ್ಕೆ ಮುಂದೂಡಿಕೆ – ಸಚಿವ ಮುನಿರತ್ನ

Spread the love

ದೊಡ್ಡಬಳ್ಳಾಪುರದಲ್ಲಿ ನಾಳೆ ಆಯೋಜಿಸಲಾಗಿದ್ದ ಬಿಜೆಪಿ ಜನೋತ್ಸವ ಕಾರ್ಯಕ್ರಮ ( ಸೆಪ್ಟೆಂಬರ್ 11) ಭಾನುವಾರಕ್ಕೆ ಮುಂದೂಡಲಾಗಿದೆ.

ಸಚಿವ ಮುನಿರತ್ನ ಈ ಕುರಿತಂತೆ ಸ್ಪಷ್ಟನೆ ನೀಡಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರದಲ್ಲಿ ನಾಳೆ ಜನೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈಗ ಸಚಿವ ಕತ್ತಿಯವರು ನಮ್ಮನ್ನೆಲ್ಲ ಅಗಲಿದ್ದಾರೆ. ಬಹಳ ನೋವಿನ ಸಂಗತಿ ಇದು. ನಾವೆಲ್ಲ ಶೋಕದಲ್ಲಿದೀವಿ, ರಾಜ್ಯದಲ್ಲಿ ಶೋಕಾಚರಣೆ ಇದೆ. ಈ ಕಾರಣದಿಂದ ನಾಳೆ ಜನೋತ್ಸವ ನಡೆಯಲ್ಲ ಎಂದರು.

ಜನೋತ್ಸವ ಕಾರ್ಯಕ್ರಮವನ್ನು ಸೆಪ್ಟೆಂಬರ್ 11 ಭಾನುವಾರ ನಡೆಸಲು ನಿರ್ಧರಿಸಿದ್ದೇವೆ. ಜನೋತ್ಸವಕ್ಕೆ ಬರುವ ಕಾರ್ಯಕರ್ತರು ಮುಖಂಡರು ಭಾನುವಾರ ಬರಬೇಕಾಗಿ ವಿನಂತಿ ಮಾಡಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

ವಿವಿಧ ಮಠಾಧೀಶರಿಂದಲೂ ಲೈಂಗಿಕ ದೌರ್ಜನ್ಯ: ಆಡಿಯೋದಲ್ಲಿ ಮಾತನಾಡಿದ ಮಹಿಳೆಯರಿಬ್ಬರಿಗಾಗಿ ಶೋಧ

ಉಮೇಶ್ ಕತ್ತಿ ನಿಧನಕ್ಕೆ 3 ದಿನ ಶೋಕಾಚರಣೆ ನಡೆಸಲು ಸರ್ಕಾರ ತೀರ್ಮಾನಿಸಿದೆ. ಈ ಹಿಂದೆ 1 ದಿನ ಶೋಕಾಚರಣೆ ನಡೆಸಲು ಸರ್ಕಾರ ನಿರ್ಧರಿಸಿತ್ತು. ಉಮೇಶ್ ಕತ್ತಿ ನಿಧನದ ನಡುವೆಯೂ ನಾಳೆ ಜನೋತ್ಸವ ಬೇಡ ಎಂಬ ಅಭಿಪ್ರಾಯವನ್ನು ಹಲವು ಬಿಜೆಪಿ ನಾಯಕರು ವ್ಯಕ್ತಪಡಿಸಿದ್ದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು. ಹಾಗಾಗಿ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ.

Copyright © All rights reserved Newsnap | Newsever by AF themes.
error: Content is protected !!