March 14, 2026

Newsnap Kannada

The World at your finger tips!

drink drive

ಕುಡಿದ ಅಮಲಿನಲ್ಲಿ ಕಾರ್ ಗೆ ಡಿಕ್ಕಿ ಹೊಡೆದ ಇನ್ಸ್‌ಪೆಕ್ಟರ್ ದಂಪತಿ: ಇಬ್ಬರಿಗೂ ಧರ್ಮದೇಟು

Spread the love

ಇನ್ಸ್‌ಪೆಕ್ಟರ್ ದಂಪತಿ ಕುಡಿದ ಮತ್ತಿನಲ್ಲಿ ಅಪಘಾತ ಮಾಡಿ ಭಾರೀ ಹೈಡ್ರಾಮಾ ಮಾಡಿದ ಘಟನೆ ಬೆಂಗಳೂರಿನ ಚಾಮರಾಜಪೇಟೆ ಠಾಣೆ ಎದುರು ಕಳೆದರಾತ್ರಿ ಜರುಗಿದೆ.

ಸಿಎಆರ್ ಇನ್ಸ್‌ಪೆಕ್ಟರ್ ಸಂಜೀವ್ ಮತ್ತು ಪತ್ನಿ ಉಷಾ ಕುಡಿದ ಮತ್ತಿನಲ್ಲಿ ತಡರಾತ್ರಿ ಜಾಲಿ ರೈಡ್‍ಗೆ ಬಂದಿದ್ದರು.
ಈ ವೇಳೆ ಕಾರು ಚಲಾಯಿಸುತ್ತಿದ್ದ ಉಷಾ ಅಪಘಾತ ಮಾಡಿದ್ದಾರೆ.

ಚಾಮರಾಜಪೇಟೆಯ 6ನೇ ಮುಖ್ಯರಸ್ತೆಯಲ್ಲಿ ಕಾರಿಗೆ ಡಿಕ್ಕಿ ಹೊಡೆದು ಕಿರಿಕ್ ಮಾಡಿದ್ದಾರೆ. ಅಲ್ಲದೇ ಗಲಾಟೆ ಮಾಡಿದ್ದ ದಂಪತಿ ಮೇಲೆ ಸಾರ್ವಜನಿಕರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಚಾಮರಾಜಪೇಟೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.

ಸಿಇಟಿ ರ್ಯಾಂಕ್ ಪಟ್ಟಿ ರದ್ದು : ಹೈಕೋರ್ಟ್ ಮಹತ್ವದ ಆದೇಶ

ಘಟನೆಯ ಬಳಿಕ ತಪಾಸಣೆ ನಡೆಸಿದ ಪೊಲೀಸರಿಗೆ ಇಬ್ಬರೂ ಕುಡಿದಿರುವುದು ಪತ್ತೆ ಆಗಿದೆ. ಇನ್ಸ್‌ಪೆಕ್ಟರ್ ಸಂಜೀವ್, ಉಷಾ ಮದ್ಯಸೇವನೆ ದೃಢ ಹಿನ್ನೆಲೆ ಚಿಕ್ಕಪೇಟೆ ಸಂಚಾರಿ ಠಾಣೆಯಲ್ಲಿ ಡ್ರಂಕ್ ಅಂಡ್ ಡ್ರೈವ್ ಕೇಸ್ ದಾಖಲಾಗಿದೆ.

error: Content is protected !!