February 18, 2026

Newsnap Kannada

The World at your finger tips!

muraga durga

ಮುರುಘಾ ಗೆ ಸೋಮವಾರದ ತನಕ ಜಾಮೀನು ಇಲ್ಲ – ಜಿಲ್ಲಾ ನ್ಯಾಯಾಲಯ

Spread the love

ಪೋಕ್ಸೊ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಮುರುಘಾ ಗೆ ಸೋಮವಾರದವರಿಗೆ ಜಾಮೀನಿಗೆ ಅರ್ಜಿ ಸಲ್ಲಿಸಬೇಡಿ.

ಹೀಗೆಂದು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ನೇರವಾಗಿ ಹೇಳಿ ಸೋಮವಾರದವರೆಗೂ ಅರ್ಜಿ ಸಲ್ಲಿಸಬೇಡಿ ಎಂದು ಸೂಚಿಸಿದ್ದಾರೆ.

ಲೈಂಗಿಕ ಕಿರುಕುಳ ಆರೋಪದ ಮೇಲೆ ಮುರುಘಾ ಜೈಲುಪಾಲಾಗಿದ್ದಾರೆ ಮುರುಘಾ ಮಠದ ಆಪ್ತ ವಕೀಲ ಉಮೇಶ್ 11 ಗಂಟೆಗೆ ಶ್ರೀಗಳ ಪರವಾಗಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಮಹಿಳೆ ಮೇಲೆ ಶಾಸಕ ಲಿಂಬಾವಳಿ ದರ್ಪ: ದೂರು ಇಲ್ಲದೇ ಹೋದರೂ ಗಂಟೆಗಟ್ಟಲೇ ಠಾಣೆಯಲ್ಲಿ ಕೂರಿಸಿ ಶಿಕ್ಷೆ

ಆದರೆ ಪೊಲೀಸ್ ಕಸ್ಟಡಿ ಮುಗಿಯುವವರೆಗೆ ಬೇಲ್ ಅಪ್ಲಿಕೇಷನ್ ಹಾಕಬೇಡಿ ಎಂದು ಚಿತ್ರದುರ್ಗ ಜಿಲ್ಲಾ ನ್ಯಾಯಾಲಯ ನ್ಯಾಯಾಧೀಶರು ಸೂಚಿಸಿದ್ದಾರೆ.

ಮುರುಘಾ ಅವರನ್ನು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ ಕೋಮಲಾ ಅವರ ಮುಂದೆ ಹಾಜರುಪಡಿಸಿದರು. ಶರಣರ ಪರ ಜಾಮೀನು ಕೋರಿ ಸ್ಥಳದಲ್ಲೇ ಅರ್ಜಿ ಸಲ್ಲಿಸಲಾಗಿತ್ತು. ಆಗಲೂ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕರಿಸಲಾಗಿತ್ತು.

error: Content is protected !!