ಮಗನಂತೆ ತಂದೆಯೂ ಕೂಡ ಮತ್ತೆ ಕಾಂಗ್ರೆಸ್ ಸೇರುವ ಮುನ್ಸೂಚನೆ ನೀಡಿ ಅಡ್ಡಗೋಡೆ ಮೇಲೆ ದೀಪ ಇಟ್ಟ ಹಾಗೆ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಮಾತನಾಡಿದ್ದಾರೆ. ನನ್ನ ಝಂಡಾ ಬದಲಾಗಬಹುದು ಆದರೆ ನನ್ನ ಅಜೆಂಡಾ ಬದಲಾಗಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಹುಣಸೂರಿನಲ್ಲಿ ಕೆಂಪೇಗೌಡ ಜಯಂತಿ ವೇಳೆ ಡಿ.ಕೆ. ಶಿವಕುಮಾರ್ ಹಾಗೂ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಸ್ಥಳೀಯ ಶಾಸಕರೊಬ್ಬರ ಮನೆಯಲ್ಲಿ ಊಟ ಮಾಡಿದ ವಿಚಾರವಾಗಿ ಮಾತನಾಡಿದ ಅವರು ಅದರಲ್ಲಿ ಯಾವ ವಿಶೇಷ ಏನೂ ಇಲ್ಲ. ನಾನು, ಡಿ.ಕೆ.ಶಿವಕುಮಾರ್ ಅವರು ಮೊದಲಿನಿಂದಲೂ ಕಾಂಗ್ರೆಸ್‍ನ ಕಾರ್ಯಕರ್ತರಾಗಿದ್ದೆವು. ಈ ಪಕ್ಷದಲ್ಲೇ ಇದ್ದು ಅನೇಕ ಜನಪರ ಕೆಲಸವನ್ನು ಮಾಡಿದ್ದೇವೆ ಎಂದರು.
ಫೋಕ್ಸೋ ಕಾಯ್ದೆಅಡಿ ಮುರುಘಾ ಶ್ರೀಗಳ ಬಂಧನ : ಅಜ್ಞಾತ ಸ್ಥಳದಲ್ಲಿ ವಿಚಾರಣೆ ಸಾಧ್ಯತೆ
ಮುಂದಿನ ನಡೆ ಕಾಂಗ್ರೆಸ್ ನತ್ತವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ಯಾರಿಗೆ ಗೊತ್ತು. ಸಂಜೆ ಮಳೆ ಬರಬಹುದು ವಾತಾವರಣವೂ ಬದಲಾಗಬಹುದು. ಒತ್ತಾಯ ಬಂದರೆ ಕಾಂಗ್ರೆಸ್‍ಗೂ ಹೋಗಬಹುದು. ಹೇಳಲಾಗುವುದಿಲ್ಲ. ಹೀಗೆ ಆಗಬೇಕು ಹಾಗೇ ಆಗಬೇಕು ಎಂಬ ನಿರ್ಣಯಗಳು ರಾಜಕಾರಣದಲ್ಲಿಲ್ಲ. ರಾಜಕಾರಣ ಈಗ ಯಾವ ರೀತಿಯಾಗಿದೆ ಎಂದು ನಾವು ಮತಕ್ಕಾಗಿ ಏನನ್ನು ಬೇಕಾದರು ಮಾಡಬಹುದು ಎಂದರು.
ಈ ದೇಶದ ಜನರು, ಬಡವರ ಪರ ಕಾರ್ಯಕ್ರಮವನ್ನು ಮಾಡುವುದಾಗಿದೆ. ಜಾತ್ಯಾತೀತ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರ್ಕಾರದ ಜೊತೆ ಕೆಲಸ ಮಾಡಬೇಕು. ಇದು ನನ್ನ ಅಜೆಂಡಾವಾಗಿದೆ. ಹೀಗಾಗಿ ನನ್ನ ಅಜೆಂಡಾವನ್ನು ಯಾವುದೋ ಒಂದು ಝಂಡಾದಲ್ಲಿ ಕುಳಿತುಕೊಂಡು ಕೆಲಸ ಮಾಡುವುದು ಮುಖ್ಯವಾಗಿರುತ್ತದೆ ಎಂದು ತಿಳಿಸಿದರು.
- ವಕ್ಫ್ ಆಸ್ತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
- ರಾಜ್ಯಾದ್ಯಂತ ಡಿ. 31 ರಿಂದ ಸಾರಿಗೆ ನೌಕರರ ಮುಷ್ಕರ
- ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಂ-ಮೈ ಎಕ್ಸ್ಪ್ರೆಸ್ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ
- ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
- ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
More Stories
ವಕ್ಫ್ ಆಸ್ತಿ ಸಂಬಂಧ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯಾದ್ಯಂತ ಡಿ. 31 ರಿಂದ ಸಾರಿಗೆ ನೌಕರರ ಮುಷ್ಕರ
ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಂ-ಮೈ ಎಕ್ಸ್ಪ್ರೆಸ್ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ