March 13, 2026

Newsnap Kannada

The World at your finger tips!

DEATH, fever

ಮೈಸೂರಿನಲ್ಲಿ H1N1 ಜ್ವರಕ್ಕೆ ತುಂಬು ಗರ್ಭಿಣಿ ಸಾವು – ಜನರಲ್ಲಿ ಆತಂಕ

Spread the love

2ನೇ ಮಗುವಿನ ನಿರೀಕ್ಷೆಯಲ್ಲಿದ್ದ ತುಂಬು ಗರ್ಭಿಣಿಯೊಬ್ಬರಿಗೆ ಹಂದಿಜ್ವರಕ್ಕೆ ಬಲಿಯಾಗಿದ್ದಾರೆ ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿ ಶುರುವಾಗಿದೆ.

ಹುಣಸೂರು ತಾಲ್ಲೂಕಿನ ಕೋಣನ ಹೊಸಳ್ಳಿ ಗ್ರಾಮದ ಸ್ವಾಮಿ ನಾಯ್ಕ ಎಂಬುವವರ ಪುತ್ರಿ ಛಾಯಾ H1N1 ನಿಂದ ಮೃತಪಟ್ಟಿದ್ದಾರೆ. ಇದನ್ನು ಓದಿ – ರೇಪ್‌ ಕೇಸ್‌ – ಮುರುಘಾ ಮಠದ ಆಡಳಿತಾಧಿಕಾರಿ ಬಸವರಾಜನ್‌, ಪತ್ನಿಗೆ ಜಾಮೀನು

ಛಾಯಾ ಅವರಿಗೆ ಈಗಾಗಲೇ 4 ವರ್ಷದ ಗಂಡು ಮಗುವಿದೆ 2ನೇ ಮಗುವಿನ ನಿರೀಕ್ಷೆಯಲ್ಲಿದ್ದರು. ಇನ್ನು ಕೆಲವೇ ದಿನಗಳಲ್ಲಿ ಮಗುವಿಗೆ ಜನ್ಮ ನೀಡಬೇಕಿದ್ದ ಛಾಯಾ ಹಂದಿಜ್ವರಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಛಾಯಾ ಅವರನ್ನು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಛಾಯಾ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ.

error: Content is protected !!