February 22, 2026

Newsnap Kannada

The World at your finger tips!

kolar, lokayukta , SDA

ಲೋಕಾಯುಕ್ತಕ್ಕೆ ಫುಲ್ ಪವರ್: ಭ್ರಷ್ಟಾಚಾರದ ದೂರು ದಾಖಲಿಸಲು ಎಡಿಜಿಪಿ ಆದೇಶ

Spread the love

ಹೈಕೋರ್ಟ್ ರಾಜ್ಯ ಸರ್ಕಾರ ಸ್ಥಾಪಿಸಿದ್ದ ಎಸಿಬಿಯನ್ನು ರದ್ದುಗೊಳಿಸಿ, ಲೋಕಾಯುಕ್ತಕ್ಕೆ ಎಲ್ಲಾ ಪ್ರಕರಣ ವರ್ಗಾವಣೆ ಮಾಡುವಂತೆ ಆದೇಶಿಸಿತ್ತು. ಈ ಹಿನ್ನಲೆಯಲ್ಲಿ ಇನ್ಮುಂದೆ ಭ್ರಷ್ಟಾಚಾರ ಸಂಬಂಧದ ದೂರುಗಳನ್ನು ಲೋಕಾಯುಕ್ತದಲ್ಲಿ ದಾಖಲಿಸಿಕೊಳ್ಳುವಂತೆ ಎಡಿಜಿಪಿ ಆದೇಶಿಸಿದ್ದಾರೆ.

ಸುತ್ತೋಲೆ ಹೊರಡಿಸಿ ಕರ್ನಾಟಕ ಲೋಕಾಯುಕ್ತದ ಎಡಿಜಿಪಿ, ಹೈಕೋರ್ಟ್ ಆದೇಶದಂತೆ ಎಲ್ಲಾ ಲೋಕಾಯುಕ್ತ ಎಸ್ಪಿ, ಡಿಎಸ್ಪಿ ಹಾಗೂ ಪೊಲೀಸ್ ಇನ್ಸ್ ಪೆಕ್ಟರ್ ಗಳು, 1988ರ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಂತೆ ಸಾರ್ವಜನಿಕರಿಂದ ಭ್ರಷ್ಟಾಚಾರ ಸಂಬಂಧದ ದೂರನ್ನು ದಾಖಲಿಸುವಂತೆ ಸೂಚಿಸಿದ್ದಾರೆ. ಈ ಮೂಲಕ ಲೋಕಾಯುಕ್ತಕ್ಕೆ ಪವರ್ ನೀಡಿ ಆದೇಶಿಸಿದ್ದಾರೆ.

error: Content is protected !!