ಡೇಟಿಂಗ್ ಆ್ಯಪ್ ಹುಚ್ಚಿಗೆ ಬಿದ್ದ ಬಿಲ್ಡರ್ ಒಬ್ಬನನ್ನು ಸುಂದರಿಯೊಬ್ಬಳು ಬಲೆಗೆ ಬೀಳಿಸಿಕೊಂಡು ಸುಲಿಗೆ ಮಾಡಿದ್ದಾಳೆ. ಹಂತ ಹಂತವಾಗಿ 7 ಲಕ್ಷ ರು ವಸೂಲಿ ಮಾಡಿದ್ದಾಳೆ.
ಬ್ಲಾಕ್ ಮೇಲ್ ಮಾಡಿ ಸುಲಿಗೆ ಮಾಡಿದ ಘಟನೆ ಸಂಬಂಧ ಬಿಲ್ಡರ್ ಜಯನಗರ ಪೋಲಿಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.
ಬೊಮ್ಮಿಶೆಟ್ಟಿ ತ್ರಿಪುರಾ ಎಂಬಾಕೆ 2019 ರಲ್ಲಿ ಬಿಲ್ಡರ್ಗೆ ಒಕೆಸಿ ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದಾಳೆ. ನಂತರ ಇಬ್ಬರೂ ವಾಟ್ಸ್ಆ್ಯಪ್ ನಂಬರ್ ಎಕ್ಸ್‌ಚೇಂಜ್ ಮಾಡಿಕೊಂಡಿದ್ದರು.
ಸೆಪ್ಟೆಂಬರ್ 12 ರಿಂದ 10 ದಿನ ವಿಧಾನಮಂಡಲ ಅಧಿವೇಶನ – ಸಚಿವ ಮಾಧುಸ್ವಾಮಿ
ಇಬ್ಬರ ನಡುವೆ ಸಲುಗೆ ಬೆಳೆದು ಶಿರಡಿ, ತಿರುಪತಿ ಎಲ್ಲಾ ಸುತ್ತಾಡಿದ್ದಾರೆ. ಇದೇ ವೇಳೆ ಇಬ್ಬರ ನಡುವೆ ದೈಹಿಕ ಸಂಪರ್ಕ ಏರ್ಪಟ್ಟಿದೆ. ಇದಾದ ನಂತರ ಹಣ ಕೀಳಲು ಶುರು ಮಾಡಿದ್ದಾಳೆ. ತನ್ನ ಬಳಿ ವಿಡಿಯೋಗಳಿವೆ. ಅದನ್ನು ಬಹಿರಂಗ ಮಾಡುತ್ತೇನೆ ಎಂದು ಬೆದರಿಸಿ ಏಳು ಲಕ್ಷ ರು ವಸೂಲಿ ಮಾಡಿದ್ದಾಳೆ.
ಅಷ್ಟು ಸಾಲದು ಎಂಬಂತೆ ಮತ್ತೆ ಒಂದು ಫ್ಲಾಟ್ ಹಾಗೂ ಹಣ ಕೊಡುವಂತೆ ಪೀಡಿಸಿದ್ದಾಳೆ. ಇದರಿಂದ ಬೇಸತ್ತ ಬಿಲ್ಡರ್ ಪೊಲೀಸರಿಗೆ ದೂರು ನೀಡಿದ್ದಾರೆ. ಸುಂದರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
- ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
- ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
- ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
- ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
- BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ


More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೌಶಲ್ಯಾಭಿವೃದ್ಧಿ ಕೋರ್ಸ್ ಆರಂಭ
BPL ಕುಟುಂಬಗಳಿಗೆ ಉಚಿತ ಅಸ್ಥಿಮಜ್ಜೆ ಕಸಿ ಚಿಕಿತ್ಸೆ