‘ ಜೊತೆ ಜೊತೆಯಲಿ’ ಧಾರಾವಾಹಿಯಿಂದ ಅನಿರುದ್ಧ್ ಅವರನ್ನು ಕೈಬಿಟ್ಟಿರುವುದಾಗಿ ಮೇಲ್ ಮೂಲಕ ಅನಿರುದ್ಧ್ಗೆ ನಿರ್ಮಾಣ ಸಂಸ್ಥೆ ತಿಳಿಸಿದೆ.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಜೊತೆಜೊತೆಯಲಿ’ ಧಾರಾವಾಹಿಯಲ್ಲಿ ನಾಯಕ ಆರ್ಯವರ್ಧನ್ರ ಪಾತ್ರವನ್ನು ಅನಿರುದ್ಧ್ ನಿರ್ವಹಿಸುತ್ತಿದ್ದರು.ಇದನ್ನು ಓದಿ –ಮಂಡ್ಯ ಮೂಲದ ಯುವತಿ ಮೇಲೆ ಗ್ಯಾಂಗ್ ರೇಪ್ : ಮೋಸದ ಜಾಲಕ್ಕೆ ತಳ್ಳಿದ ಪ್ರಿಯಕರ
ನಟ ಅನಿರುದ್ಧ್ ಸುದ್ದಿಗೋಷ್ಠಿ ನಡೆಸಿ, ಶೂಟಿಂಗ್ ಸೆಟ್ನಲ್ಲಿ ಏನಾಯ್ತು? ಎಂದು ವಿವರಿಸುತ್ತಾ ಮನದ ನೋವನ್ನು ಹೊರಹಾಕಿದ್ದಾರೆ.
‘ಜೊತೆ ಜೊತೆಯಲಿ’ ಧಾರಾವಾಹಿ ನನಗೆ ವೈಯಕ್ತಿಕವಾಗಿ ತುಂಬಾ ಕೊಟ್ಟಿದೆ. ಇದು ನನ್ನ ಅದೃಷ್ಟ ಅಂತ ಭಾವಿಸುವೆ. ‘ಜೊತೆ ಜೊತೆಯಲಿ’ ನನ್ನಿಂದ ಅಂತ ನಾನು ಭಾವಿಸಿಲ್ಲ. ದೇವರ ಸ್ವರೂಪ ಆಗಿರುವ ಪ್ರೇಕ್ಷಕರಿಂದ ಈ ಯಶಸ್ಸು ಸಿಕ್ಕಿದೆ.
ನನಗೆ ದುರಂಹಕಾರ ಬಂತು ಅನ್ನೋ ಆರೋಪವಿದೆ. ನನ್ನ ಅಭಿನಯದಲ್ಲಿ ಯಾವುದಾದ್ರೂ ಸೀನ್ ನೋಡಿ ನಿಮಗೆ ಗೊತ್ತಾಗುತ್ತೆ. ಫ್ಲಾಶ್ ಬ್ಯಾಕ್ ಕತೆಗಾಗಿ 12 ಕೆಜಿ ತೂಕ ಕಡಿಮೆ ಮಾಡಿಕೊಂಡೆ. ಸಾಕಷ್ಟು ಶ್ರಮ ಪಟ್ಟಿದ್ದೀನಿ. ಹಿಂದಿನ ದಿನ ಸೀನ್ ಪೇಪರ್ಸ್ ಕಳುಹಿಸಿ ಅಂತ ಸಿರೀಯಲ್ ಶುರುವಾದಾಗಿನಿಂದ ಕೇಳ್ತಾ ಇದ್ದೀನಿ. ಇವತ್ತು ಅಧಿಕೃತವಾಗಿ ಮಾಹಿತಿ ಬಂದಿದೆ.
ಭಿನ್ನಾಭಿಪ್ರಾಯ ಆಗೋದು ಸರ್ವೇ ಸಾಮಾನ್ಯ. ಇಲ್ಲಿ ಆಗಿರೋದು ಕತೆಗೋಸ್ಕರ. ಆ ಭಿನ್ನಾಭಿಪ್ರಾಯ ಹೊರಗಡೆ ಹೇಳೋ ಅವಶ್ಯಕತೆ ಇರಲಿಲ್ಲ. ಇವತ್ತು ಅವರು ಆರೋಪಗಳ ಪಟ್ಟಿ ಮಾಡಿದ್ದಾರೆ. ಹಾಗಾಗಿ ಆರೋಪಗಳ ಬಗ್ಗೆ ಇವತ್ತು ಮಾತನಾಡುತ್ತಿದ್ದೀನಿ… ಎನ್ನುತ್ತಲೇ
ಸುದ್ದಿಗೋಷ್ಠಿಯಲ್ಲಿ ಹಲವು ವಿಚಾರಗಳನ್ನು ಬಿಚ್ಚಿಟ್ಟರು ಅನಿರುದ್ಧ್.
‘ಕ್ಯಾರವಾನ್ ಇಲ್ಲದಿದ್ರೆ ನಾನು ನಟನೆ ಮಾಡಲ್ಲ ಅಂದೆ’ ಎಂದು ಅವರು ದೂರಿದ್ದಾರೆ. ಹೌದು, ಅಂದು ಶೂಟಿಂಗ್ ನಡೆಯುತ್ತಿದ್ದ ಆಸುಪಾಸಿನಲ್ಲಿ ಯಾವುದೇ ಮನೆ ಇರಲಿಲ್ಲ. ಮೊದಲನೇ ದಿನ ಕ್ಯಾರವಾನ್ ಇತ್ತು. ಎರಡನೇ ದಿನ ಇರಲಿಲ್ಲ. ಎದುರುಗಡೆ ಕಾಡಿನಲ್ಲಿ ಮೂರು ಬಾರಿ ಬಾತ್ ರೂಂಗೆ ಹೋಗಿದ್ದೀನಿ. ಸೆಟ್ನಲ್ಲಿ ಹೆಂಗಸರು ಇರ್ತಾರೆ. ಅವರಿಗೆ ಸಮಸ್ಯೆ ಆಗುತ್ತೆ ಅಂತ ಹಠ ಮಾಡಿ ಕ್ಯಾರವಾನ್ ತರಿಸಿದ್ದೀನಿ. ಅಭಿಮಾನಿಗಳ ಮನೆಗೆ ಪದೇಪದೆ ಬಾತ್ ರೂಮ್ಗೆ ಹೋಗೋಕೆ ಮುಜುಗರ ಆಗುತ್ತೆ ಎಂದು ಅನಿರುದ್ಧ್ ಶೂಟಿಂಗ್ ವೇಳೆ ಅನುಭವಿಸುತ್ತಿದ್ದ ಸಮಸ್ಯೆಗಳ ಬಗ್ಗೆ ವಿವರಿಸಿದರು.
‘ಸೀನ್ಗಳನ್ನು ತುಂಬಾ ತಡವಾಗಿ ಕಳುಹಿಸುತ್ತಾರೆ. ಎಲ್ಲಾ ಸೀನ್ಗಳನ್ನು ಏಕಾಏಕಿಆಗಿ ಕಳುಹಿಸುತ್ತಾರೆ. ಅವರು ಆರೋಪಗಳನ್ನು ಮಾಡಿದ್ದಾರೆ ಅಲ್ವಾ? ಅವರ ಮಕ್ಕಳ ಮೇಲೆ ಕೈಯಿಟ್ಟು ಹೇಳಲಿ.
ಈ ಕತೆಯನ್ನು ಒಂದು ಎಳೆಯಾಗಿ ತಯಾರಿಸಿ ಅಂತ ಹೇಳಿದ್ದಿನಿ. ಪದೇಪದೆ ಕತೆ ಚೇಂಜ್ ಮಾಡಿದ್ದಾರೆ. ನಾನು ಹೋರಾಡಿದ್ದು ಸ್ಕ್ರಿಪ್ಟ್ ಗಾಗಿ ಮಾತ್ರ. ಆರ್ಯವರ್ಧನ್ ಪಾತ್ರ ನೆಗೆಟಿವ್ ಇರೋಲ್ಲ ಅಂತ ಹೇಳಿದ್ರು. ಆದ್ರೂ ಕೂಡ ನೆಗೆಟಿವ್ ಪಾತ್ರ ಮಾಡಿದೆ. ಅಭಿಮಾನಿಗಳು ಬಯ್ಯೋಕೆ ಶುರು ಮಾಡಿದ್ರು. ಅವರಿಗೂ ಸಮಾಧಾನ ಮಾಡಿದ್ದೀನಿ. ನಾನು ಜಗಳ ಮಾಡಿದ್ದು ಸ್ಕ್ರಿಪ್ಟ್ಗಾಗಿ. ನಂದು ಕೊಲೆ ಮಾಡೋ ಸೀನ್ ಇದೆ. ಚಾನೆಲ್ ಬಗ್ಗೆ ಜಗ್ಗಿ ಅವ್ರು ತುಂಬಾ ಕೆಟ್ಟದಾಗಿ ಮಾತನಾಡ್ತಾರೆ. ಅದ್ರಲ್ಲಿ ಏನೆನೋ ಕತೆ ಹೇಳಿದ್ದಾರೆ… ಪಾಯಿಂಟ್ ಆಫ್ ವಿವ್ಯೂನಲ್ಲಿ ಮಾಡಿ ಅಂತ ಚಾನಲ್ ಅವ್ರೇ ಹೇಳ್ತಾರೆ. ಲಾಸ್ಟ್ ಮೂಮೆಂಟ್ ಸೀನ್ ಪೇಪರ್ ಬಂದ್ರೆ ಕೋಪ ಬಂದೇ ಬರುತ್ತೆ. ಹೈ ಪಿಚ್ನಲ್ಲೇ ಜಗಳ ಮಾಡಿದ್ದೀನಿ. ಇದ್ರಿಂದ ಅವ್ರ ಮಾನಹಾನಿಯಾಗಿಲ್ಲ, ನನ್ನ ಮಾನ ಹಾನಿಯಾಗಿದೆ. ಒಂದೂವರೆ ವರ್ಷ ಡೇ ಆಯಂಡ್ ನೈಟ್ ವರ್ಕ್ ಮಾಡಿದ್ದೇನೆ.
ರಾಜನಕುಂಟೆಯಲ್ಲಿ ಯಾವಾಗ್ಲಾದ್ರೂ ಒಂದು ಬಾರಿ ಶೂಟಿಂಗ್ ಇರುತ್ತೆ ಅಂತ ಹೇಳಿದ್ರಿ. ರಾತ್ರಿ ಬಂದು ಒಂದು ಹಣ್ಣು ತಿಂದು ಮಲಗ್ತಿದೆ. ಒಂದು ಹನಿ ನೀರನ್ನೂ ಪ್ರೊಡಕ್ಷನ್ ಕಡೆಯಿಂದ ಕುಡಿಯೋಲ್ಲ. ಬೆಳಗ್ಗೆ ನನ್ನ ತಾಯಿ ಎದ್ದು ಊಟ-ತಿಂಡಿ ಎಲ್ಲವನ್ನೂ ಮಾಡಿಕೊಳ್ತಿದ್ದಾರೆ’ ಎಂದು ಅನಿರುದ್ಧ್ ಹೇಳಿದರು.
- ರಾಜ್ಯಾದ್ಯಂತ ಡಿ. 31 ರಿಂದ ಸಾರಿಗೆ ನೌಕರರ ಮುಷ್ಕರ
- ಮಂಡ್ಯ ಕನ್ನಡ ಸಾಹಿತ್ಯ ಸಮ್ಮೇಳನ: ಬೆಂ-ಮೈ ಎಕ್ಸ್ಪ್ರೆಸ್ವೇ ಸಂಚಾರ ಮಾರ್ಗದಲ್ಲಿ ಬದಲಾವಣೆ
- ದೇವತೆಗಳ ಆರಾಧನೆಗೆ ಮೀಸಲಾದ ದೇವಮಾಸ ಮಾರ್ಗಶಿರಮಾಸ
- ಬೊಲೆರೋ ಡಿಕ್ಕಿಯಿಂದ ಐವರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ
- ಗೃಹಲಕ್ಷ್ಮಿ ಯೋಜನೆ ಸ್ಥಗಿತ ಮಾಡುವ ಪ್ರಶ್ನೆಯೇ ಇಲ್ಲ: ಸಿಎಂ ಸಿದ್ದರಾಮಯ್ಯ
- 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಇತಿಹಾಸ ಸೃಷ್ಟಿಸಲಿದೆ: ಸಚಿವ ಚಲುವರಾಯಸ್ವಾಮಿ
More Stories
ಬಿಗ್ ಬಾಸ್ ತೆಲುಗು ಗೆದ್ದ ಮೈಸೂರಿನ ನಿಖಿಲ್ ಮಳಿಯಕ್ಕಲ್
ವಿಶ್ವದಾಖಲೆ ತಬಲಾ ವಾದಕ ಉಸ್ತಾದ್ ಜಾಕಿರ್ ಹುಸೇನ್ ವಿಧಿವಶ
ಕಾಲ್ತುಳಿತದಲ್ಲಿ ಮಹಿಳೆ ಸಾವು: ನಟ ಅಲ್ಲು ಅರ್ಜುನ್ ಬಂಧನ