March 11, 2026

Newsnap Kannada

The World at your finger tips!

75 th ind

ನಾಡಿನೆಲ್ಲೆಡೆ ಸಂಭ್ರಮ : ಮಧ್ಯರಾತ್ರಿ ಧ್ವಜಾರೋಹಣ ನೆರವೇರಿಸಿದ ಸಿಎಂ ಬೊಮ್ಮಾಯಿ

Spread the love

ದೇಶದಲ್ಲಿ 75ನೇ ಅಮೃತ ಮಹೋತ್ಸವ ಸಂಭ್ರಮದ ಮನೆ ಮಾಡಿದೆ. ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಮದುವಣಗಿತ್ತಿಯಂತೆ ಸಿಂಗಾರಗೊಂಡಿದೆ ಕಳೆದ ಮಧ್ಯರಾತ್ರಿ ಮಲ್ಲೇಶ್ವರಂ ಗ್ರೌಂಡ್​ನಲ್ಲಿ ‘ಸ್ವಾತಂತ್ರ್ಯ’ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಮಧ್ಯರಾತ್ರಿ 12 ಗಂಟೆಗೆ ಸಿಎಂ ಬೊಮ್ಮಾಯಿ ಧ್ವಜಾರೋಹಣ ನೆರವೇರಿಸಿದ್ದಾರೆ. ಸಿಎಂ ಬೊಮ್ಮಾಯಿಗೆ ಅಶ್ವತ್ಥ್ ನಾರಾಯಣ್ ಸಾಥ್ ನೀಡಿದ್ದಾರೆ. ಧ್ವಜರೋಹಣದ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಗಾಯಕಿ ಮಂಗ್ಲಿ ಸಂಗೀತ ಹಾಗೂ ದೇಶಭಕ್ತಿ ಹಾಡುವ ಮೂಲಕ ನೆರೆದಿದ್ದ ದೇಶಾಭಿಮಾನಿಗಳಿಗೆ ಮನರಂಜಿಸಿದ್ದಾರೆ.

ಡೊಳ್ಳು ಕುಣಿತ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದವು.

error: Content is protected !!