December 25, 2024

Newsnap Kannada

The World at your finger tips!

mandya, photography,exibition

Mandya News Department: Photographic exhibition of country bifurcation ಮಂಡ್ಯ ವಾರ್ತಾ ಇಲಾಖೆ: ದೇಶ ಇಬ್ಭಾಗ ಕರಾಳ ನೆನಪಿನ ಛಾಯಾಚಿತ್ರ ಪ್ರದರ್ಶನ

ಮಂಡ್ಯ ವಾರ್ತಾ ಇಲಾಖೆ: ದೇಶ ಇಬ್ಭಾಗ ಕರಾಳ ನೆನಪಿನ ಛಾಯಾಚಿತ್ರ ಪ್ರದರ್ಶನ

Spread the love

ಮಂಡ್ಯದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಗರಸಭೆ, ಕೆ.ಎಸ್.ಆರ್.ಟಿ.ಸಿ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶ ವಿಭಾಗದ ಕರಾಳದ ನೆನಪು ಛಾಯಾಚಿತ್ರಗಳ ಪ್ರದರ್ಶನಕ್ಕೆ ಮಂಡ್ಯ ನಗರಸಭೆ ಅಧ್ಯಕ್ಷ ಎಚ್.ಎಸ್. ಮಂಜು ಚಾಲನೆ ಶನಿವಾರ ನೀಡಿದರು.

ಈ ಸರಳ ಕಾರ್ಯಕ್ರಮದಲ್ಲಿ ಮಾತನಾಡಿದ ಮಂಜು ಅವರು ದೇಶ ವಿಭಜನೆಯ ಸಂದರ್ಭದಲ್ಲಿ ಅಪಾರ ಪ್ರಮಾಣದ ಸಾವು ನೋವುಗಳು ಎಂದಿಗೂ ಮರೆಯಲು ಸಾಧ್ಯವಿಲ್ಲ.ಇದನ್ನು ಓದಿ –ಕೈ ನಾಯಕರ ಬಗ್ಗೆ ಸಾಕಷ್ಟು ದಂತಕತೆ, ಸಿಡಿಗಳೂ ಇವೆ – ಪ್ರಿಯಾಂಕ್‍ಗೆ ಬಿಜೆಪಿ ತಿರುಗೇಟು


ದೇಶ ವಿಭಜನೆಯ ಸಂದರ್ಭದಲ್ಲಿ ಲಕ್ಷಾಂತರ ಜನರು ರೈಲು,ಹಡಗು,ವಾಹನಗಳ ಮೇಲೆ ಸಂಚರಿಸುವ ದೃಶ್ಯಗಳನ್ನು ಪ್ರದರ್ಶಿಸಲಾಗಿದೆ ಇವುಗಳನ್ನು ಇಂದಿನ ಯುವಜನತೆ ವೀಕ್ಷಣೆ ಮಾಡಬೇಕು ಎಂದರು.

ಭಾರತದ ವಿಭಜನೆಯು ಮನುಕುಲದ ಇತಿಹಾಸದಲ್ಲಿಯೇ ಎಂದೂ ಕೇಳರಿಯದ ಬಲವಂತದ ಮಹಾ ಮಾನವ ವಲಸೆಯ ವ್ಯಾಕುಲದ ಕಥೆಯಾಗಿದೆ.ಲಕ್ಷಾಂತರ ಜನ ಅಪರಿಚಿತ ಜಾಗದಲ್ಲಿ ತಮ್ಮ ಜೀವನಕಟ್ಟಿಕೊಳ್ಳಲು,ಹೊಸ ಬದುಕು ಅರಸಿ ಹೊರಟ ಘಟನೆಗಳನ್ನು ಈ ಪ್ರದರ್ಶನ ನೆನಪಿಸುತ್ತದೆ ಎಂದು ಹೇಳಿದರು.


ನಗರ ಸಭೆಯ ಆಯುಕ್ತ ಆರ್. ಮಂಜುನಾಥ್ ಅವರು ಮಾತನಾಡಿ ಭಾರತ ದೇಶಕ್ಕೆ ಸ್ವತಂತ್ರ ಬಂದಂತಹ ಸಂದರ್ಭದಲ್ಲಿ ದೇಶ ವಿಭಜನೆಯಾಯಿತು. ವಿಭಜನೆಯಾದಂತಹ ಸಂದರ್ಭದಲ್ಲಿ ಭಾರತ ಮತ್ತು ಪಾಕಿಸ್ತಾನ ದೇಶಗಳ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ವಲಸೆ ಹೋಗುತಿದ್ದರು.

ಅಂದಿನ ಕಾಲದಲ್ಲಿ ಸಂಚಾರದ ವ್ಯವಸ್ಥೆ ಸರಿ ಇರಲಿಲ್ಲ. ಆದಕಾರಣ ವಲಸೆ ಹೋಗುವಂತಹ ಸಂದರ್ಭದಲ್ಲಿ ಮಳೆ,ಗಾಳಿ,ಬಿಸಿಲಿಗೆ ಲಕ್ಷಾಂತರ ಜನರು ಸಾವನ್ನು ಅನುಭವಿಸುತ್ತಾರೆ.

ಆ ಘಟನೆಯನ್ನು ಜನಸಾಮಾನ್ಯರು ನೆನಪು ಮಾಡಿಕೊಂಡು ಗೌರವ ಸಲ್ಲಿಸಬೇಕು ಎಂಬ ಮೂಲ ಉದ್ದೇಶದಿಂದ ಛಾಯಾಚಿತ್ರ ಪ್ರದರ್ಶನದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ನಗರಸಭೆ ಸ್ಥಾಯಿಸಮಿತಿ ಅಧ್ಯಕ್ಷೆ ಮೀನಾಕ್ಷಿ, ಸಹಾಯಕ ಕಾರ್ಯಪಾಲಕ ಅಭಿಯಂತರಾದ (ಪರಿಸರ ವಿಭಾಗ) ರುದ್ರೇಗೌಡ,ಕೆ.ಎಸ್.ಆರ್. ಟಿ.ಸಿ ವಿಭಾಗೀಯ ನಿಯಂತ್ರಣಾಧಿಕಾರಿ ಎಸ್.ಪಿ.ನಾಗರಾಜು, ಜಿಲ್ಲಾ ವಾರ್ತಾಧಿಕಾರಿ ಎಸ್.ಹೆಚ್ ನಿರ್ಮಲ, ನಗರ ಸಭಾ ಸದಸ್ಯರುಗಳಾದ ನಾಗೇಶ್, ಶ್ರೀಧರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Copyright © All rights reserved Newsnap | Newsever by AF themes.
error: Content is protected !!