November 25, 2024

Newsnap Kannada

The World at your finger tips!

IT,raid,assets

ಮಹಾರಾಷ್ಟ್ರದಲ್ಲಿ ಐಟಿ ದಾಳಿ; 56 ಕೋಟಿನಗದು, 32 ಕೆಜಿ ಚಿನ್ನ, 16 ಕೋಟಿ ಮೌಲ್ಯದ ವಜ್ರ ಸೇರಿ 390 ಕೋಟಿ ಅಕ್ರಮ ಆಸ್ತಿ ಪತ್ತೆ!

Spread the love

ಮಹಾರಾಷ್ಟ್ರದಲ್ಲಿ ಬೃಹತ್ ಐಟಿ ದಾಳಿ ನಡೆದಿದೆ 56 ಕೋಟಿ ನಗದು, 32 ಕೆಜಿ ಚಿನ್ನ, 16 ಕೋಟಿ ಮೌಲ್ಯದ ವಜ್ರ ಸೇರಿ 390 ಕೋಟಿ ಅಕ್ರಮ ಆಸ್ತಿಯನ್ನು ತೆರಿಗೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಮಹಾರಾಷ್ಟ್ರದ ಜಲ್ನಾದಲ್ಲಿ ತೆರಿಗೆ ವಂಚನೆಗೆ ಸಂಬಂಧಿಸಿದಂತೆ ಕೆಲವು ವ್ಯಾಪಾರಿಗಳ ಗುಂಪುಗಳಿಗೆ ಸಂಬಂಧಿಸಿದ ಅನೇಕ ಸ್ಥಳಗಳಲ್ಲಿ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಇದನ್ನು ಓದಿ –ದ್ವಿತೀಯ ಪಿಯು ಪೂರಕ ಪರೀಕ್ಷೆ ವೇಳಾಪಟ್ಟಿ ಪ್ರಕಟ: ನಾಳೆಯಿಂದ ಆ.25ರವರೆಗೆ ಪರೀಕ್ಷೆ 

ಈ ವೇಳೆ ಸುಮಾರು 390 ಕೋಟಿ ರೂಗಳಷ್ಟು ಬೇನಾಮಿಆಸ್ತಿ ಅಥವಾ ಲೆಕ್ಕ ರಹಿತ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

56 ಕೋಟಿ ರೂ ನಗದು ಮತ್ತು 14 ಕೋಟಿ ರೂ ಮೌಲ್ಯದ 32 ಕೆಜಿ ಚಿನ್ನ, ಮುತ್ತುಗಳು ಮತ್ತು ವಜ್ರಗಳು ಸೇರಿವೆ. ದಾಳಿಯ ವೇಳೆ ಅಧಿಕಾರಿಗಳು ಕೆಲವು ಆಸ್ತಿ ದಾಖಲೆಗಳು ಮತ್ತು ಡಿಜಿಟಲ್ ಡೇಟಾವನ್ನು ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಉಕ್ಕು, ಬಟ್ಟೆ ಮತ್ತು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಎರಡು ವ್ಯಾಪಾರ ಗುಂಪುಗಳಿಗೆ ಸಂಬಂಧಿಸಿದ ವಸತಿ ಮತ್ತು ಅಧಿಕೃತ ಆವರಣದಲ್ಲಿ ಆಗಸ್ಟ್ 1 ಮತ್ತು 8 ರ ನಡುವೆ ದಾಳಿಗಳನ್ನು ನಡೆಸಲಾಗಿತ್ತು. ಇದೀಗ ಈ ದಾಳಿಯಲ್ಲಿ ವಶಕ್ಕೆ ಪಡೆಯಲಾದ ಸ್ವತ್ತುಗಳ ದತ್ತಾಂಶವನ್ನು ಅಧಿಕಾರಿಗಳು ಬಿಡುಗಡೆ ಮಾಡಿದ್ದಾರೆ. ದಾಳಿಯ ವೇಳೆ ವಶಪಡಿಸಿಕೊಂಡ ನಗದನ್ನು ನಿಖರವಾಗಿ ಲೆಕ್ಕ ಹಾಕಲು ಅಧಿಕಾರಿಗಳಿಗೆ ಸುಮಾರು 13 ಗಂಟೆಗಳು ಬೇಕಾಯಿತು ಎನ್ನಲಾಗಿದೆ.

ಈ ವ್ಯಾಪಾರ ಗುಂಪುಗಳಿಂದ ಆಪಾದಿತ ತೆರಿಗೆ ವಂಚನೆಯ ಬಗ್ಗೆ ಮಾಹಿತಿ ಪಡೆದ ನಂತರ, ಆದಾಯ ತೆರಿಗೆ ಇಲಾಖೆಯು ಶೋಧ ಕಾರ್ಯಾಚರಣೆಗಾಗಿ ರಾಜ್ಯದಾದ್ಯಂತ 260 ಅಧಿಕಾರಿಗಳನ್ನು ಒಳಗೊಂಡ ಐದು ತಂಡಗಳನ್ನು ರಚಿಸಿತ್ತು. ಕಾರ್ಯಾಚರಣೆಯಲ್ಲಿ 120 ಕ್ಕೂ ಹೆಚ್ಚು ವಾಹನಗಳನ್ನು ಬಳಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!