December 19, 2024

Newsnap Kannada

The World at your finger tips!

youth,death,hospital

Heart attack without treatment at Terkanambi Hospital: Death of a young man - Locals uproar

ತೆರಕಣಾಂಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಹೃದಯಘಾತ : ಯುವಕನ ಸಾವು – ಸ್ಥಳೀಯರ ಗಲಾಟೆ

Spread the love

ಆಸ್ಪತ್ರೆಯಲ್ಲಿ ವೈದ್ಯರ ಕೊರತೆಯಿಂದ ಓರ್ವ ರೋಗಿ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿಯಲ್ಲಿ ನಡೆದಿದೆ.

ಮಹೇಶ್ (36) ಮೃತ ದುರ್ದೈವಿ. ಎದೆ ನೋವು ಸಮಸ್ಯೆಯಿಂದ ಬೆಳಗ್ಗೆ ತೆರಕಣಾಂಬಿ ಆಸ್ಪತ್ರೆಗೆ ಮಹೇಶ್ ಬಂದಿದ್ದರು.ಇದನ್ನು ಓದಿ –ಶೀಘ್ರವೇ ರಾಜ್ಯ ಸಚಿವ ಸಂಪುಟ ವಿಸ್ತರಣೆ ಫಿಕ್ಸ್ : ಸಚಿವ ಸ್ಥಾನ ಭರ್ತಿಗೆ ಸಿಎಂ ಸಿದ್ದತೆ 

ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೆ, ಚಿಕಿತ್ಸೆಯೂ ಇಲ್ಲದೇ ವ್ಯಕ್ತಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಇದರಿಂದ ಆಕ್ರೋಶಗೊಂಡ ಸಾರ್ವಜನಿಕರು ದಿಢೀರ್ ಪ್ರತಿಭಟನೆ ನಡೆಸಿದ್ದಾರೆ.

ಶವದ ಜೊತೆಗೆ ರಸ್ತೆ ತಡೆ ನಡೆಸಿ ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಮೃತ ವ್ಯಕ್ತಿಯು ತೆರಕಣಾಂಬಿ ಗ್ರಾಮದ ನಿವಾಸಿ. ಸದ್ಯ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಸಾರ್ವಜನಿಕರು ಸ್ಥಳಕ್ಕೆ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಬರುವಂತೆ ಆಗ್ರಹಿಸುತ್ತಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!