December 23, 2024

Newsnap Kannada

The World at your finger tips!

ganga

ಕೆ.ಕಲ್ಯಾಣ್ ದಾಂಪತ್ಯಕ್ಕೆ ಬಾಂಬ್ ಇಟ್ಟಿದ್ದ ಗಂಗಾ ಕುಲಕರ್ಣಿ ಆತ್ಮಹತ್ಯೆ!

Spread the love

ಜನಪ್ರಿಯ ಗೀತೆಗಳನ್ನು ರಚಿಸಿದ ಗೀತ ರಚನೆಕಾರ ಕೆ.ಕಲ್ಯಾಣ್ ಅವರ ದಾಂಪತ್ಯ ಕ್ಕೆ ಬಾಂಬ್ ಇಟ್ಟಿದ್ದ ಮನೆ ಕೆಲಸದಾಕೆ ಗಂಗಾ ಕುಲಕರ್ಣಿ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಕೆ. ಕಲ್ಯಾಣ್ ಬದುಕಿನಲ್ಲಿ ಆಟವಾಡಿದ್ದ ಗಂಗಾ ಅಲಿಯಾಸ್ ಜ್ಯೋತಿ ಕುಲಕರ್ಣಿ ಕಲ್ಯಾಣ್ ಅವರ ಪತ್ನಿಗೆ ಮಾಟಮಂತ್ರ ಮಾಡಿ, ಆಸ್ತಿ ಕಬಳಿಸಿದ್ದ. ಗಂಗಾ ಪ್ರಕರಣದ ಪ್ರಮುಖ ಆರೋಪಿ ಯಾಗಿದ್ದಾರೆ. 

ಕುಷ್ಟಗಿ ನ್ಯಾಯಲಯಕ್ಕೆ ಹಾಜರಾಗಿದ್ದ ಈಕೆ ವಿಷ ಸೇವಿಸಿ ನ್ಯಾಯಾಲಯ ಪ್ರವೇಶ ಮಾಡಿದ್ದಾಳೆ. ಅಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾಳೆ.

ಕುಷ್ಟಗಿ ತಾಲೂಕಿನ ಕ್ಯಾದಿಗುಂಪಾ ಗ್ರಾಮದಲ್ಲಿ ತೋಟಗಾರಿಕೆ ವಿವಿಯಲ್ಲಿ ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂ. ಹಣ ಪಡೆದಿದ್ದಳು. ಆದರೆ ಕೆಲ ದಿನ ಕಳೆದರೂ ಉದ್ಯೋಗ ಸಿಗದ ವೇಳೆ ಹಣ ಕೊಟ್ಟವರು 2016ರಲ್ಲಿ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಕುಷ್ಟಗಿ ನ್ಯಾಯಾಲಯಕ್ಕೆ ವಿಚಾರಣೆಗೆ ಆಗಮಿಸಿದ್ದಳು.

Copyright © All rights reserved Newsnap | Newsever by AF themes.
error: Content is protected !!