December 23, 2024

Newsnap Kannada

The World at your finger tips!

68e6a162 5c92 4b4c a9a0 01aa55a6dacf

source - instagram

‘ಕಸ್ತೂರಿ ಮಹಲ್‌’ ಶ್ಯೂಟಿಂಗ್ ಪೂರ್ಣ

Spread the love

ಸ್ಯಾಂಡಲ್ ವುಡ್ ನಟಿ ಶಾನ್ವಿ ಶ್ರೀವಾಸ್ತವ ಇತ್ತೀಚಿಗೆ ಕಸ್ತೂರಿ ಮಹಲ್ ಸಿನಿಮಾ ಒಪ್ಪಿಕೊಂಡಿದ್ದರು. ನಟಿ ರಚಿತಾ ರಾಮ್ ಹೊರಬಂದ ಜಾಗಕ್ಕೆ ಶಾನ್ವಿ ಎಂಟ್ರಿ ಕೊಟ್ಟಿದ್ದರು. ವಿಶೇಷ ಎಂದರೆ ಈಗಾಗಲೇ ಸಿನಿಮಾದ ಚಿತ್ರೀಕರಣ ಮಾಡಿ ಮುಗಿಸಿದ್ದಾರೆ. ಅಂದ್ಹಾಗೆ ನಿರ್ದೇಶಕ ದಿನೇಶ್ ಬಾಬು ಅವರ 50ನೇ ಸಿನಿಮಾವಿದು. ಅಕ್ಟೋಬರ್ ಮೊದಲ ವಾರದಲ್ಲಿ ಚಿತ್ರೀಕರಣ ಪ್ರಾರಂಭಮಾಡಿದ್ದ ಚಿತ್ರತಂಡ ಈಗಾಗಲೇ ಚಿತ್ರೀಕರಣ ಮುಗಿಸಿ ಅಚ್ಚರಿ ಮೂಡಿಸಿದೆ.

ಕಡಿಮೆ ಸಮಯದಲ್ಲಿ ಚಿತ್ರೀಕರಣ ಮುಗಿಸುವುದರಲ್ಲಿ ನಿರ್ದೇಶಕ ದಿನೇಶ್ ಬಾಬು ಎತ್ತಿದ ಕೈ. ಸಾಕಷ್ಟು ಸಿನಿಮಾಗಳನ್ನು ಕಡಿಮೆ ಅವಧಿಯಲ್ಲಿ ಶೂಟಿಂಗ್ ಮುಗಿಸಿ ದಾಖಲೆ ಮಾಡಿದ್ದಾರೆ. ಕಸ್ತೂರಿ ಮಹಲ್ ಸಿನಿಮಾವನ್ನು ಸಹ ಕಡಿಮೆ ಅವಧಿಯಲ್ಲಿ ಶೂಟಿಂಗ್ ಮಾಡಿ ಮುಗಿಸಿದ್ದಾರೆ.

ಈ ತಿಂಗಳ ಪ್ರಾರಂಭದಲ್ಲಿ ಚಿತ್ರತಂಡ ಚಿಕ್ಕಮಗಳೂರಿನ ಕೊಟ್ಟಿಗೆ ಹಾರ, ಬಾಲೂರು ಸುತ್ತಮುತ್ತಲಿನ ಸುಂದರ ಪರಿಸರದಲ್ಲಿ ಆರಂಭವಾಗಿತ್ತು. ಆಯುಧ ಪೂಜೆಯ ಶುಭದಿನದಂದು ಅದೇ ಸ್ಥಳದಲ್ಲಿ ಚಿತ್ರೀಕರಣ ಪೂರ್ಣಗೊಳಿಸಿ ಕುಂಬಳಕಾಯಿ ಒಡೆದಿದೆ. ಸುಮಾರು 20 ದಿನಗಳ ಕಾಲ ಒಂದೇ ಹಂತದಲ್ಲಿ ಚಿತ್ರೀಕರಣ ಮುಕ್ತಾಯಗೊಂಡಿದೆ.

ಈ ಸಿನಿಮಾದಲ್ಲಿ ನಾಯಕನಾಗಿ ಸ್ಕಂಧ ಅಶೋಕ್ ಕಾಣಿಸಿಕೊಳ್ಳುತ್ತಿದ್ದಾರೆ. ರಂಗಾಯಣ ರಘು, ಶ್ರುತಿ ಪ್ರಕಾಶ್, ನೀನಾಸಂ ಅಶ್ವಥ್, ಅಕ್ಷರ್ ಸೇರಿದಂತೆ ಅನೇಕರಿದ್ದಾರೆ. ಸೈಕಲಾಜಿಕಲ್ ಥ್ರಿಲ್ಲಲ್ ಮಾದರಿಯ ಕಸ್ತೂರಿ ಮಹಲ್ ಹೇಗಿರಲಿದೆ ಎನ್ನುವುದು ಸಿನಿಪ್ರೇಕ್ಷಕರ ಕುತೂಹಲ.

Copyright © All rights reserved Newsnap | Newsever by AF themes.
error: Content is protected !!