November 23, 2024

Newsnap Kannada

The World at your finger tips!

manjunath

ಮೈಸೂರಿನಲ್ಲಿ ಸರ್ವೇಯರ್ ಮಂಜುನಾಥ್ 35 ಸಾವಿರ ರು ಲಂಚ ಸ್ವೀಕಾರ – ACB ಟ್ರ್ಯಾಪ್ : ನೌಕರನ ಬಂಧನ

Spread the love

ಮೈಸೂರು ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ರ ಭೂದಾಖಲೆಗಳ ಉಪ-ನಿರ್ದೇಶಕರ ನ್ಯಾಯಾಲಯ (ಡಿ.ಡಿ.ಎಲ್‌.ಆರ್‌) ಸರ್ವೇಯರ್‌ ಮಂಜುನಾಥ್ ಎಂಬುವವರು 35 ಸಾವಿರ ರು ಲಂಚ ಸ್ವೀಕರಿಸುವಾಗ ACB ಪೋಲಿಸರು ಟ್ರ್ಯಾಪ್ ಮಾಡಿ, ನಂತರ ಬಂಧಿಸಿದ್ದಾರೆ.

ಸರ್ವೇಯರ್ ಮಂಜುನಾಥ್ ಎಂಬುವವರು 35 ಸಾವಿರ ರು ಲಂಚ ಸ್ವೀಕರಿಸುವ ಮುನ್ನ ಎಸಿಬಿ ಬಲೆಗೆ ಬಿದ್ದಿದ್ದಾರೆ

ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕು ರಾವಂದೂರು ಹೋಬಳಿ ಹೆಮ್ಮಿಗೆ ಗ್ರಾಮದ
ವಾಸಿಯೋರ್ವರರು (ಪಿರ್ಯಾದುದಾರರು) ಬಾಬ್ತು ಅದೇ ಗ್ರಾಮದ ಸರ್ವೆ ನಂ-60/ ಮತ್ತು 60/2 ರ ಜಮೀನಿನ
ಹಳೆಯ ಪೋಡಿಯನ್ನು ರದ್ದುಪಡಿಸಿ, ಅನುಭವದಂತೆ ಪೋಡಿ ಮಾಡಿಕೊಡಲು ಜಿಲ್ಲಾಧಿಕಾರಿಗಳ ತಾಂತ್ರಿಕ
ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ-ನಿರ್ದೇಶಕರ ನ್ಯಾಯಾಲಯ, ಮೈಸೂರು ರವರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು

ಸರ್ವೇಯರ್ ಮಂಜುನಾಥ್‌ 19-07-2022, 25-07-2022 ರ 35,000/- ರು ಲಂಚದ ಹಣ ಕೊಡುವಂತೆ ಬೇಡಿಕೆ ಇಟ್ಟು, ಒತ್ತಾಯಿಸಿದ್ದಾರೆ.ಇಂದು ನಡೆದ ಟ್ರ್ಯಾಪ್‌ ಕಾರ್ಯಾಚರಣೆಯಲ್ಲಿ ಆರೋಪಿತ ಸರ್ಕಾರಿ ಅಧಿಕಾರಿ ಮ೦ಜುನಾಥ್‌.

ಮೈಸೂರು-ಬನ್ನೂರು ರಸ್ತೆಯಲ್ಲಿರುವ ಮೈಸೂರು ನಗರದ ರಕ್ಷಣಾ ಆಹಾರ ಕೇಂದ್ರದ ಬಳಿ
ಪಿರ್ಯಾದುದಾರರಿಂದ 35,000/- ರು ಲಂಚದ ಹಣವನ್ನು ಸ್ಟೀಕರಿಸುವಾಗ ಮೈಸೂರು ವಿಭಾಗದ ಎಸಿಬಿ ಎಸ್ಪಿ ಸಜಿತ್ ಮಾರ್ಗದರ್ಶನ ದಲ್ಲಿ ಎ.ಸಿ.ಬಿ ಪೊಲೀಸ್‌ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಡೆಸಿದ ಟ್ರ್ಯಾಪ್‌ ಕಾರ್ಯಾಚರಣೆಯಲ್ಲಿ ಆರೋಪಿ ಮಂಜುನಾಥ್ ಸಿಕ್ಕಿ ಬಿದ್ದ ನಂತರ ದಸ್ತಗಿರಿ ಮಾಡಿದ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಪ್ರಕಟಣೆ ತಿಳಿಸಿದರು.

Copyright © All rights reserved Newsnap | Newsever by AF themes.
error: Content is protected !!