January 29, 2026

Newsnap Kannada

The World at your finger tips!

child,bike,accident

Child's death in Channapatna: 34 thousand fine,1 day jail owner of bike ಚನ್ನಪಟ್ಟಣದಲ್ಲಿಬಾಲಕ ಸಾವು : ಬೈಕ್ ಕೊಟ್ಟ ಮಾಲೀಕನಿಗೆ 34 ಸಾವಿರ ದಂಡ, 1 ದಿನ ಜೈಲು

ಚನ್ನಪಟ್ಟಣದಲ್ಲಿ ಬಾಲಕ ಸಾವು : ಬೈಕ್ ಕೊಟ್ಟ ಮಾಲೀಕನಿಗೆ 34 ಸಾವಿರ ದಂಡ, 1 ದಿನ ಜೈಲು

Spread the love

ಅಪ್ರಾಪ್ತ ಬಾಲಕನಿಗೆ ಬೈಕ್ ಓಡಿಸಲು ಕೊಟ್ಟಿದ್ದ ಮಾಲೀಕನಿಗೆ ರಾಮನಗರ ಚನ್ನಪಟ್ಟಣದ ಜೆ.ಎಂ.ಎಫ್.ಸಿ. ನ್ಯಾಯಾಲಯ 34 ಸಾವಿರ ರು ದಂಡ ಹಾಗೂ ಒಂದು ದಿನ ಸಜೆ ವಿಧಿಸಿ ತೀರ್ಪು ನೀಡಿದೆ

ಚನ್ನಪಟ್ಟಣದ ಅನ್ವರ್ ಖಾನ್ ಕೋರ್ಟ್ ಶಿಕ್ಷೆಗೆ ಒಳಗಾದ ವ್ಯಕ್ತಿ.ಇದನ್ನು ಓದಿ –ಸಚಿವ ಪಾರ್ಥನ ಗೆಳತಿ ಅರ್ಪಿತಾಳ ಮತ್ತೊಂದು ಮನೆಯಲ್ಲಿ ಮತ್ತೆ 29 ಕೋಟಿ ಹಣ , 5 KG ಚಿನ್ನ ಪತ್ತೆ

ತಮ್ಮ ಸಂಬಂಧಿಕರ ಮಗನಿಗೆ ಬೈಕ್ ಕೊಟ್ಟಿದ್ದರು, ಬಾಲಕ ಮೃತಪಟ್ಟಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.

4 ತಿಂಗಳ ಹಿಂದೆ ತಮ್ಮ ದ್ವಿಚಕ್ರ ವಾಹನವನ್ನು ಬಾಲಕನಿಗೆ ಚಾಲನೆ ಮಾಡಲು ಕೊಟ್ಟಿದ್ದರು. ಚನ್ನಪಟ್ಟಣದ ಕೆಎಸ್‌ಆರ್ ಟಿಸಿ ಡಿಪೋ ಎದುರು ಬೈಕ್ ಚಾಲನೆ ವೇಳೆಯಲ್ಲಿ ಆಯತಪ್ಪಿ ಕೆಳಗೆ ಬಿದ್ದು ಬಾಲಕ ಮೃತಪಟ್ಟಿದ್ದ.

ವಿಚಾರಣೆ ನಡೆಸಿದ ನ್ಯಾಯಾಲಯ 34,000 ರೂ. ದಂಡ ಹಾಗೂ ಒಂದು ದಿನ ಸಜೆ ವಿಧಿಸಿ ಆದೇಶಿಸಿದೆ.

error: Content is protected !!