ಕೋಚಡೈಯಾನ್ ಸಿನಿಮಾ ರೈಟ್ಸ್ ಹಣಕಾಸಿನ ವಿವಾದ ಸಂಬಂಧ ನಟ ರಜನಿಕಾಂತ್ ಪತ್ನಿ ವಿರುದ್ದ ನ್ಯಾಯಾಂಗ ನಿಂದನೆಯ ಅರ್ಜಿ ಸಲ್ಲಿಸಲಾಗಿದೆ.
ಸುಪ್ರೀಂ ಕೋರ್ಟ್ ಈ ಹಿಂದೆ ಕೆಳ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುವಂತೆ ಸಿನಿಮಾ ನಿರ್ಮಾಪಕರಿಗೆ ನಿರ್ದೇಶನ ನೀಡಿತ್ತು. ಆದರೆ ಇದುವರೆಗೂ ಸಿನಿಮಾ ನಿರ್ಮಾಪಕರು ಕೋರ್ಟ್ ಸಮನ್ಸ್ ನೀಡಿದರೂ ವಿಚಾರಣೆಗೆ ಹಾಜರಾಗಿಲ್ಲ. ಆ್ಯಡ್ ಬ್ಯೂರೋ ಕಂಪನಿಯಿಂದ ಕೋಚ್ಚಡೈಯಾನ್ ಸಿನಿಮಾ ನಿರ್ಮಾಪಕರ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಕೆಯಾಗಿದೆ. ನವೆಂಬರ್ 2 ಕ್ಕೆ ಕೋರ್ಟ್ ಅರ್ಜಿ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಒಂದನೇ ಎಸಿಎಂಎಂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಕೆಯಾಗಿದೆ. ಹೀಗಾಗಿ ನಟ ರಜನಿಕಾಂತ್ ಪತ್ನಿ ಲತಾರಿಗೆ ಸಂಕಷ್ಟ ಎದುರಾಗಿದೆ.
2014 ರಲ್ಲಿ ಹಲಸೂರು ಗೇಟ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಕೋಚಡಯ್ಯಾನ್ ಚಿತ್ರದ ಸಂಬಂಧ ಆ್ಯಡ್ ಬ್ಯುರೋ ಕಂಪನಿ 6.2 ಕೋಟಿ ರೂ ವಂಚನೆ ಆರೋಪ ಮಾಡಿ ಎಫ್ಐಆರ್ ದಾಖಲಿಸಿತ್ತು. 10 ಕೋಟಿ ರೂಗೆ ಪೋಸ್ಟ್ ಪ್ರೊಡಕ್ಷನ್ ಕೆಲಸ ವಹಿಸಲಾಗಿತ್ತು. ಆದರೆ, 6.2 ಕೋಟಿ ರೂ ಬಾಕಿ ಬರಬೇಕಿದೆ ಎಂದು ಆ್ಯಡ್ ಬ್ಯೂರೋ ದೂರಿದೆ. ಲತಾ ರಜಿನಿಕಾಂತ್ ಅವರ ವೈಯಕ್ತಿಕ ಗ್ಯಾರಂಟಿ ಮೇಲೆ ತಾವು ಈ ಕಾರ್ಯ ವಹಿಸಿಕೊಂಡಿದ್ದು ಎಂದೂ ಈ ಸಂಸ್ಥೆ ವಾದಿಸಿದೆ.
ಇದೇ ವೇಳೆ, ಲತಾ ರಜನಿಕಾಂತ್ ಅವರಿಗೆ ಟ್ರಯಲ್ಗೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಬೇಕೆಂದು ವಕೀಲ ಬಾಲನ್ ಅವರಿಂದ ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಕೆ ಮಾಡಲಾಗಿದೆ.
More Stories
ಚನ್ನಪಟ್ಟಣದಲ್ಲಿ ಸಿ ಪಿ ಯೋಗೇಶ್ವರ್ ಗೆ ಭರ್ಜರಿ ಗೆಲುವು
ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವಾ ದರ ಹೆಚ್ಚಳ
ನಕ್ಸಲ್ ನಾಯಕ ವಿಕ್ರಂ ಗೌಡ ಎನ್ಕೌಂಟರ್: ಗೃಹಸಚಿವ ಪರಮೇಶ್ವರ್ ದೃಢೀಕರಣ