ಪಶ್ಚಿಮ ಬಂಗಾಳದಲ್ಲಿ ಇಡಿ ಅಧಿಕಾರಿಗಳು ದೀದಿ ನಾಡಲ್ಲಿ ಸಚಿವರಿಗೆ ಶಾಕ್ ಕೊಟ್ಟಿದೆ.
ರಾಶಿ ರಾಶಿ ಗುಡ್ಡೆ ಹಾಕಿರುವ ಹಣ. ಭ್ರಷ್ಟ ಸಚಿವನ ಆಪ್ತೆ ಮನೆಯಲ್ಲಿ ಸಿಕ್ಕಿರುವ ಅಕ್ರಮ ಸಂಪತ್ತು.
ದೀದಿ ನಾಡಲ್ಲಿ ಜನರ ತೆರಿಗೆ ದುಡ್ಡಲ್ಲಿ ತಗೊಂಡ ಐಷಾರಾಮಿಯಾಗಿದ್ದ ಮಮತಾ ಬ್ಯಾನರ್ಜಿ ಕ್ಯಾಬಿನೆಟ್ನ ಸೈನಿಕನ ಬೇಟೆಯಾಡಿದೆ.
ಬೇಟೆಗೆ ಇಳಿಯುವ ಮೊದಲು ಭ್ರಷ್ಟರ ಲಿಸ್ಟ್ ಮಾಡಿಟ್ಟುಕೊಂಡಿದ್ದ ಅಧಿಕಾರಿಗಳು ರಣಹದ್ದಿನಂತೆ ಅಖಾಡಕ್ಕಿಳಿದಿದ್ದರು. ಪಕ್ಕಾ ಪ್ಲಾನ್ ಮಾಡಿಕೊಂಡು ಏಕಾಏಕಿ ದಾಳಿ ಮಾಡಿದರು. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರದ ಕೈಗಾರಿಕೆ ಮತ್ತು ವಾಣಿಜ್ಯ ಸಚಿವ ಪಾರ್ಥ ಚಟರ್ಜಿ ಆಸ್ತಿ-ಪಾಸ್ತಿ ಮೇಲೆ ದಾಳಿ ಮಾಡಿದ್ದಾರೆ.
ದೀದಿ ಸಂಪುಟದ ಸಚಿವ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿ ಮನೆ ಮೇಲೆ ಇ.ಡಿ ದಾಳಿ ನಡೆಸಿದೆ ಈ ವೇಳೆ ಬರೋಬ್ಬರಿ 20 ಕೋಟಿ ಹಣ ಪತ್ತೆಯಾಗಿದೆ. ಬಂಗಾಳದ ನಕ್ಟಾಳಾದ ಮನೆಯಲ್ಲಿ ಇಷ್ಟೊಂದು ಪ್ರಮಾಣದ ಹಣ ಪತ್ತೆಯಾಗಿದೆ. ಅರ್ಪಿತಾ ಮುಖರ್ಜಿಗೆ ಸಂಬಂಧಿಸಿದ ಸ್ಥಳಗಳಲ್ಲಿ 20ಕ್ಕೂ ಅಧಿಕ ಮೊಬೈಲ್ ಫೋನ್‌ಗಳನ್ನೂ ಜಪ್ತಿ ಮಾಡಲಾಗಿದೆ. ಶಿಕಾರಿಪುರದಿಂದಲೇ ವಿಜಯೇಂದ್ರ ಸ್ಪರ್ಧೆ-ಕ್ಷೇತ್ರ ತ್ಯಾಗ ಮಾಡಿದ ಮಾಜಿ ಸಿಎಂ ಯಡಿಯೂರಪ್ಪ
ಶಿಕ್ಷಕರ ನೇಮಕಾತಿಯಲ್ಲಿ ಭಾರೀ ಅಕ್ರಮ ನಡೆದಿತ್ತು. ಈ ಹಗರಣದಲ್ಲಿ ಕೋಟಿ ಕೋಟಿ ಹಣ ನುಂಗಿದ್ದ ಆರೋಪದಲ್ಲಿ ಸದ್ಯ ಸಚಿವ ಪಾರ್ಥ ಚಟರ್ಜಿ ಆಪ್ತೆ ಅರ್ಪಿತಾ ಮುಖರ್ಜಿ ಮನೆ ಮೇಲೆ ದಾಳಿ ಮಾಡಿದೆ.
ಇ.ಡಿ ಅಧಿಕಾರಿಗಳಿಗೆ ಸಿಕ್ಕಿರುವ ಕಂತೆ ಕಂತೆ ಹಣ, ಕೆಜಿಗಟ್ಟಲೇ ಚಿನ್ನಾಭರಣ. ಎಕರೆ ಗಟ್ಟಲೇ ಆಸ್ತಿ ಪತ್ರಗಳು ಅಕ್ರಮವೋ? ಸಕ್ರಮವೋ ಎಂಬ ದಾಖಲೆಗಳ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
- ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
- 10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
More Stories
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು