November 22, 2024

Newsnap Kannada

The World at your finger tips!

mask

ಬಿಬಿಎಂಪಿ ಹೊಸ ನಿಯಮ: ಕಾರು, ಬೈಕಿನಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಕಡ್ಡಾಯ

Spread the love

ಕಾರಿನಲ್ಲಿ ಒಬ್ಬರೇ ಹೋಗುವಾಗ ಮಾಸ್ಕ್ ಧರಿಸುವುದು ಕಡ್ಡಾಯವೇನಲ್ಲ ಎಂಬ ನಿಯಮವಿತ್ತು. ಆದರೆ, ಮಾಸ್ಕ್ ಧರಿಸುವ ನಿಯಮಗಳಲ್ಲಿ ಬದಲಾವಣೆಗಳನ್ನು ತಂದಿರುವ ಬಿಬಿಎಂಪಿ ಬೈಕ್, ಕಾರು ಮುಂತಾದ ವಾಹನಗಳಲ್ಲಿ ಒಬ್ಬರೇ ಇದ್ದರೂ ಮಾಸ್ಕ್ ಧರಿಸುವುದು ಕಡ್ಡಾಯ ಎಂಬ ನಿಯಮ ಜಾರಿಗೊಳಿಸಿದೆ.

ಒಬ್ಬರೇ ಇದ್ದೇವೆ, ಯಾಕೆ ಮಾಸ್ಕ್ ಹಾಕಿಕೊಳ್ಳಬೇಕು ಎಂದು ವಾದಿಸುತ್ತಿದ್ದ ವಾಹನ ಸವಾರರಿಗೆ ಬಿಬಿಎಂಪಿ ಶಾಕ್ ನೀಡಿದೆ.

ಬಿಬಿಎಂಪಿ ಮಾರ್ಷಲ್​ಗಳ ಜೊತೆ ವಾದಕ್ಕೆ ಇಳಿಯುತ್ತಿದ್ದ ಜನರಿಗೆ ಇನ್ನುಮುಂದೆ ಹೊಸ ನಿಯಮ ಜಾರಿಗೊಳಿಸಿದೆ. ನಿನ್ನೆಯಿಂದ ಹೊಸ ರೂಲ್ಸ್ ಜಾರಿ ಮಾಡಿದ ಬಿಬಿಎಂಪಿ ಒಬ್ಬರೇ ಇದ್ದರೂ ಅದು ಕಾರು ಆಗಲಿ ಬೈಕ್ ಆಗಲಿ ಮಾಸ್ಕ್ ಧರಿಸಲೇಬೇಕು ಎಂಬ ನಿಯಮ ಜಾರಿಗೊಳಿಸಿದೆ.

ಆದರೆ, 5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಬೇಕಾಗಿಲ್ಲ. ಒಂಟಿಯಾಗಿರುವ ಕಾರು, ಬೈಕ್ ಸವಾರರಿಗೆ ಮಾಸ್ಕ್ ಕಡ್ಡಾಯವಾಗಿದೆ. ಮಾಸ್ಕ್ ಹಾಕಲಿಲ್ಲ ಎಂದರೆ ದಂಡ ಗ್ಯಾರಂಟಿ. ಮಾಸ್ಕ್ ಹಾಕದಿದ್ದರೆ 250 ರೂ. ದಂಡ ಕಟ್ಟಲೇಬೇಕು. ಇಂದಿನಿಂದಲೇ ಬಿಬಿಎಂಪಿ ಈ ನಿಯಮವನ್ನು ಜಾರಿಗೊಳಿಸಿದೆ.

5 ವರ್ಷದೊಳಗಿನ ಮಕ್ಕಳಿಗೆ ಮಾಸ್ಕ್ ಬೇಕಾಗಿಲ್ಲ. ಹೋಟೆಲ್ ನಲ್ಲಿ ತಿಂಡಿ, ಟೀ , ಕಾಫಿ ಕುಡಿಯುವಾಗ ಮಾಸ್ಕ್ ಬೇಕಿಲ್ಲ. ಈಜುಕೊಳದಲ್ಲಿ ಈಜುವಾಗ ಮಾಸ್ಕ್ ಬೇಕಿಲ್ಲ. ಶ್ರವಣ ದೋಷ ಸಾಧನ ಅಳವಡಿಕೆಗೆ ತೊಂದರೆ ಆದರೆ ಮಾಸ್ಕ್ ಬೇಕಿಲ್ಲ. ತೀವ್ರ ಉಸಿರಾಟದ ತೊಂದರೆ, ಹಲ್ಲಿನ ತೊಂದರೆ ಇದ್ದರೆ ಮಾಸ್ಕ್ ಬೇಕಿಲ್ಲ, ಆದರೆ ಇದಕ್ಕೆ ವೈದ್ಯರ ಸಲಹಾ ಚೀಟಿ ಜೊತೆಯಲ್ಲೇ ಇರಬೇಕು.

Copyright © All rights reserved Newsnap | Newsever by AF themes.
error: Content is protected !!