December 23, 2024

Newsnap Kannada

The World at your finger tips!

thief,temple,arrest

Nagamangala: Three thieves arrested for stealing Naga coins from Dandina Devi village temple - ASP ನಾಗಮಂಗಲ : ದಂಡಿನ ದೇವಿ ಗ್ರಾಮದ ದೇವಸ್ಥಾನದ ನಗ ನಾಣ್ಯ ದೋಚಿದ್ದ ಮೂವರು ಕಳ್ಳರ ಬಂಧನ - ಎಎಸ್ಪಿ #Thenewsnap #Crime #latestnews #Nagamangala #Mandya #thief #Temple #India

ನಾಗಮಂಗಲ : ದಂಡಿನ ದೇವಿ ಗ್ರಾಮದ ದೇವಸ್ಥಾನದ ನಗ ನಾಣ್ಯ ದೋಚಿದ್ದ ಮೂವರು ಕಳ್ಳರ ಬಂಧನ – ಎಎಸ್ಪಿ

Spread the love

ಜುಲೈ 6 ರಂದು ತಾಲ್ಲೂಕಿನ ಮುದ್ದಲಿಂಗಮಕೊಪ್ಪಲು ಗ್ರಾಮದ ದಂಡಿನದೇವಿ ದೇವಸ್ಥಾನದ ಬಾಗಿಲನ್ನು ಕಳ್ಳರು ಮುರಿದುಚಿನ್ನದ ತಾಳಿ, ಹುಂಡಿಯಲ್ಲಿದ್ದ ಹಣವನ್ನು ದೋಚಿದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ.

ಡಿವೈಎಸ್ಪಿ ಹೆಚ್. ಲಕ್ಷ್ಮೀನಾರಾಯಣ ಪ್ರಸಾದ್ , ಸಿಪಿಐ ಸುಧಾಕರ್ ಮತ್ತು ಪಿಎಸ್ ಐ ಸತೀಶ್ ಅವರ ಮುಂದಾಳತ್ವದಲ್ಲಿನ ತಂಡವು ಜುಲೈ12 ರಂದು ಮುಂಜಾನೆ 5.30 ರ ಸಮಯದಲ್ಲಿ ನಾಗಮಂಗಲ ತಾಲೂಕಿನ ಕರಿಕ್ಯಾತನಹಳ್ಳಿ ಬಳಿ ನಾಗಮಂಗಲದಿಂದ ಕೆ.ಆರ್.ಪೇಟೆ ಕಡೆಗೆ ಸ್ಕೂಟರ್ ನಲ್ಲಿ ಸಂಚಾರ ಮಾಡುತ್ತಿದ್ದ ಜಕ್ಕನಹಳ್ಳಿ ಗ್ರಾಮದ ಪ್ರದೀಪ್, ಕೆ.ಆರ್.ಪೇಟೆಯ ಅಕ್ಕಿಹೆಬ್ಬಾಳು ಗ್ರಾಮದ ರವಿ ಮತ್ತು ಕೋಲಾರದ ರೊಣನೂರು ಗ್ರಾಮದ ಅನಿಲ ಎಂಬ ಆರೋಪಿಗಳು ಬಂಧಿಸಿರು.ಇದನ್ನು ಓದಿ –ಚನ್ನಪಟ್ಟಣದಲ್ಲಿ ಮಹಿಳೆಯನ್ನು ಭೀಕರ ಹತ್ಯೆಗೈದು ಚಿನ್ನ, ನಗದು ಲೂಟಿ

ಈ ಮೂವರ ವಿರುದ್ದ ತಾಲ್ಲೂಕಿನ ಗ್ರಾಮಾಂತರ ಠಾಣೆಯ ವ್ಯಾಪ್ತಿಯಲ್ಲಿ 03, ಕೆ.ಆರ್.ಪೇಟೆ , ಬಿಂಡಿಗನವಿಲೆ ಠಾಣೆಯಲ್ಲಿ ಒಂದು ಪ್ರಕರಣವು ಸೇರಿ ಐದು ಪ್ರಕರಣಗಳಲ್ಲಿ ಭಾಗಿಯಾಗಿರುವ ಮಾಹಿತಿ ಬೆಳಕಿಗೆ ಬಂದಿದೆ.

ಬಂಧಿತ ಆರೋಪಿಗಳಿಂದ ಸುಮಾರು 125 ಗ್ರಾಂ ಚಿನ್ನದ ಮತ್ತು ಸುಮಾರು 3.5 ಕೆ.ಜಿ ಬೆಳ್ಳಿ ಯ 8 ಲಕ್ಷ ಮೌಲ್ಯದ ವಸ್ತುಗಳು ಮತ್ತು ಸ್ಕೂಟರ್ ಅನ್ನು ವಶಕ್ಕೆ ಪಡೆಯಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿಯನ್ನುಎಎಸ್ಪಿ ವೇಣುಗೋಪಾಲ್ ಹಾಗೂ ಡಿವೈಎಸ್ಪಿ ಲಕ್ಷ್ಮೀನಾರಾಯಣ ಪ್ರಸಾದ್ ತಿಳಿಸಿದರು.

ಈ ಕಳ್ಳರನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಸಿಪಿಐ ಸುಧಾಕರ್, ಗ್ರಾಮಾಂತರ ಪಿಎಸ್ ಐ ಸತೀಶ್, ಬಿಂಡಿಗನವಿಲೆ ಠಾಣೆಯ ಪಿಎಸ್ ಐ ಶ್ರೀಧರ್, ಎಎಸ್ ಐ ಲಿಂಗರಾಜು, ಸಿಬ್ಬಂದಿಗಳಾದ ಪ್ರಶಾಂತ್, ಗುರುಪ್ರಸಾದ್, ಚನ್ನಕೇಶವ, ಸಿದ್ಧಪ್ಪ,ರಮೇಶ್, ಉಮೇಶ್ ಅವರುಗಳನ್ನು ಎಎಸ್ಪಿ ವೇಣುಗೋಪಾಲ್ ಹಾಗೂ ಡಿವೈಎಸ್ಪಿ ಅಭಿನಂದಿಸಿದರು.ಮೈಸೂರು : ಕಾರಿನಲ್ಲೇ ಬೆಂಕಿ ಹಚ್ಚಿಕೊಂಡು ನಿವೃತ್ತ ನೌಕರ ಸಜೀವ ದಹನ 

ಇಬ್ಬರು ಸರಗಳ್ಳರ ಬಂಧನ

ನಾಗಮಂಗಲ ತಾಲೂಕಿನಬಿಂಡಿಗನವಿಲೆ ಪೋಲಿಸ್ ಠಾಣೆಯಲ್ಲಿ ತಾಲ್ಲೂಕಿನ ಶಿಖರನಹಳ್ಳಿ ಗ್ರಾಮದ ಕವಿತ ಎಂಬ ಮಹಿಳೆಯ ಸರಗಳ್ಳತನ ಮಾಡಿದ ಇಬ್ಬರು ಖದೀಮರನ್ನು ಬಂಧಿಸಲಾಗಿದೆ

ಅದ್ದಿಹಳ್ಳಿ ಸರ್ಕಲ್ ಬಳಿ ಬೈಕಿನಲ್ಲಿ ಹೋಗುತ್ತಿದ್ದ ಅನುಮಾನಾಸ್ಪದವಾಗಿ‌ ಕಾಣಿಸಿಕೊಂಡ ಬೆಳ್ಳೂರು ಪಟ್ಟಣದ ಸಯ್ಯದ್ ಮತ್ತು ತುರುವೇಕೆರೆಯ ಯಶವಂತನಾಯಕ ಎಂಬುವರನ್ನು ವಿಚಾರಣೆ ಮಾಡಿದಾಗ ಸುಮಾರು ಎರಡು ಲಕ್ಷ ಮೌಲ್ಯದ 70 ಗ್ರಾಂ ಚಿನ್ನದ ಸರವನ್ನು ಕಳ್ಳತನದ ಮಾಹಿತಿ ತಿಳಿದು ಬಂದಿದೆ.

ಪೋಲಿಸರು ಆರೋಪಿಗಳಿಂದ ಚಿನ್ನದ ಸರವನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರು ಪಡಿಸಿದರು.

Copyright © All rights reserved Newsnap | Newsever by AF themes.
error: Content is protected !!