ಮಂಡ್ಯ ಸಂಸದೆ ಆದ ಬಳಿಕ ಸುಮಲತಾ ಸಿನಿಮಾ ಮಾಡುವುದು ಕಡಿಮೆಯಾಗಿತ್ತು. ಅಲ್ಲೊಂದು ಇಲ್ಲೊಂದು ಚಿತ್ರಗಳಲ್ಲಿ ಮಾತ್ರ ಕಾಣಿಸಿಕೊಳ್ಳುವುದೂ ಸಹ ನಿಂತು ಹೋಗಿತ್ತು. ಈಗ ಮತ್ತೆ ಬಣ್ಣ ಹಚ್ಚಿ ಕೊಂಡು ನಟನೆಗೆ ಬರಲು ಸಿದ್ದತೆ ನಡೆಸಿದ್ದಾರೆ.
ಕ್ರೇಜಿಸ್ಟಾರ್ ರವಿಚಂದ್ರನ್ ನಟಿಸುತ್ತಿರುವ ದೊಡ್ಡ ಪ್ರಾಜೆಕ್ಟ್‌ನಲ್ಲಿ ಸುಮಲತಾ ವಿಶೇಷ ಪಾತ್ರ ನಿರ್ವಹಿಸಲಿದ್ದಾರೆ.
ಕ್ರೇಜಿಸ್ಟಾರ್ ಮತ್ತು ‘ಜಟ್ಟ’ ಖ್ಯಾತಿಯ ಗಿರಿರಾಜ್ ನಿರ್ದೇಶನದಲ್ಲಿ ಮೂಡಿಬರಲಿರುವ ‘ಕನ್ನಡಿಗ’ ಎಂಬ ಐತಿಹಾಸಿಕ ಕಥೆ ಹೊಂದಿರುವ ಚಿತ್ರದಲ್ಲಿ ಸುಮಲತಾ ಅಭಿನಯಿಸಲಿದ್ದಾರೆ.
ರವಿಚಂದ್ರನ್ ಇದೇ ಮೊದಲ ಬಾರಿಗೆ ಇಂತಹದೊಂದು ಸ್ಕ್ರಿಪ್ಟ್ ಕೈಗೆತ್ತಿಕೊಂಡಿರುವುದು ಸಹಜವಾಗಿ ಕುತೂಹಲ ಮೂಡಿಸಿದೆ.
ಕನ್ನಡ – ಇಂಗ್ಲಿಷ್ ಮೊದಲ ನಿಘಂಟು ರಚಿಸಿದ ಪಾದ್ರಿ ಮತ್ತು ಇಂಡಾಲಜಿಸ್ಟ್ ರೆವರೆಂಡ್ ಫರ್ಡಿನ್ಯಾಂಡ್ ಕಿಟ್ಟೆಲ್ ಕಾಲಾವಧಿಯ ಕಥೆ ಇದು. ಕನ್ನಡ ವಿದ್ವಾಂಸನ ಪಾತ್ರದಲ್ಲಿ ರವಿಚಂದ್ರನ್ ನಟಿಸಲಿದ್ದಾರೆ. ಆದ್ರೆ, ಸುಮಲತಾ ಅವರ ಪಾತ್ರ ಏನು ಎಂಬುದು ಸದ್ಯಕ್ಕೆ ಕುತೂಹಲ.
More Stories
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!