ಚಿತ್ರೀಕರಣದ ಸೆಟ್ ಅನ್ನು, ಕ್ಯಾಮೆರಾವನ್ನು ಹೆಚ್ಚಾಗಿ ಆರಾಧಿಸುವ, ಪ್ರೀತಿಸುವ ದರ್ಶನ್, ಚಿತ್ರೀಕರಣದ ಸೆಟ್‌ಗೆ ಬಂದು ಸರಿ ಸುಮಾರು ಎಂಟು ತಿಂಗಳಾಗುತ್ತಾ ಬಂತು.
ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಆಪ್ತ ಧ್ರುವನ್ ಸಿನಿಮಾ ಮುಹೂರ್ತ ದಲ್ಲಿ ಪಾಲ್ಗೊಂಡು ಮಾತನಾಡಿದರು.
ಎಂಟು ತಿಂಗಳ ಬಳಿಕ ಸಿನಿಮಾ ಕ್ಯಾಮೆರಾ ಮುಂದೆ ಹಾಜರಾಗಿದ್ದೇನೆ. ನಾನು ಶೂಟಿಂಗ್ ಜೊತೆ ಶೂಟಿಂಗ್ ಸೆಟ್‌ನಲ್ಲಿ ನೀಡಲಾಗುವ ‘ಇಡ್ಲಿ-ವಡೆ’ಯನ್ನು ಬಹಳವಾಗಿ ಮಿಸ್ ಮಾಡ್ಕೊಂಡಿದ್ದೇನೆ. ಸೆಟ್‌ನಲ್ಲಿ ನೀಡಲಾಗುವ ಇಡ್ಲಿ-ವಡೆ ಸಾಂಬಾರ್ ನನಗೆ ಬಹಳ ಇಷ್ಟ. ಬಹು ತಿಂಗಳ ಬಳಿಕ ಚಿತ್ರೀಕರಣಗಳು ನಿಧಾನಕ್ಕೆ ಆರಂಭವಾಗುತ್ತಿದೆ. ಇದು ನನಗೆ ಬಹಳ ಸಂತೋಷ ನೀಡಿದೆ ಎಂದಿದ್ದಾರೆ ದರ್ಶನ್.
ಇದೇ ಸಮಯದಲ್ಲಿ ‘ರಾಬರ್ಟ್’ ಸಿನಿಮಾ ಬಿಡುಗಡೆ ಬಗ್ಗೆಯೂ ಮಾತನಾಡಿರುವ ದರ್ಶನ್, ‘ರಾಬರ್ಟ್ ಸಿನಿಮಾ ಪೂರ್ಣವಾಗಿ ತಯಾರಾಗಿದೆ, ಪರಿಸ್ಥಿತಿ ಸರಿಹೋದ ಬಳಿಕ ಸಿನಿಮಾ ಬಿಡುಗಡೆ ಆಗಲಿದೆ ಎಂದಿದ್ದಾರೆ ದರ್ಶನ್.
More Stories
ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ವಿಧಿವಶ
ಹಾಲಿನ ದರ ಏರಿಕೆ? ಶೀಘ್ರದಲ್ಲೇ ಕೆಎಂಎಫ್ ನಿರ್ಣಯ
ಮೈಸೂರಿನ ಪ್ರಿನ್ಸೆಸ್ ರಸ್ತೆಗೆ ಸಿದ್ದರಾಮಯ್ಯ ಹೆಸರು: ಪ್ರತಾಪ್ ಸಿಂಹ-ಯದುವೀರ್ ನಡುವೆ ವಾಕ್ಸಮರ