December 19, 2024

Newsnap Kannada

The World at your finger tips!

araga

ಬಂಧಿತ ಡಿಸಿ ಮಂಜುನಾಥ್, ಎಡಿಜಿಪಿ ಅಮೃತ್ ಪೌಲ್ ಸಸ್ಪೆಂಡ್

Spread the love

ಒಂದೇ ದಿನ ರಾಜ್ಯದ ಇಬ್ಬರು ಅಧಿಕಾರಿಗಳನ್ನು ಅಮಾನತು ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಡಿಸಿ ಮಂಜುನಾಥ್ ಹಾಗೂ ಎಡಿಜಿಪಿ ಅಮೃತ್ ಪೌಲ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ.

ಒಂದೇ ದಿನ ಭ್ರಷ್ಟಾಚಾರದ ಆರೋಪ ಮೇಲೆ IAS, IPS ಅಧಿಕಾರಿಗಳನ್ನು ಬಂಧಿಸಲಾಗಿತ್ತು. ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಅರಗ ಜ್ಞಾನೇಂದ್ರ, IPS ಅಧಿಕಾರಿ ಅಮೃತ್ ಪೌಲ್ ಅವರನ್ನು ಬಂಧಿಸಲಾಗಿದೆ.

ಅಕ್ರಮದ ಆರೋಪ ಹಿನ್ನೆಲೆ ತನಿಖೆ ನಡೆಸಿದ್ದೇವೆ. ಸಿಐಡಿ ತಂಡ 2 ಗಂಟೆಯಲ್ಲಿ ಒಬ್ಬರನ್ನು ಅರೆಸ್ಟ್. ಮಾಡಿತ್ತು. ಕಲಬುರಗಿಗೆ ತೆರಳಿ ಬಂಧಿಸಿತ್ತು ಬ್ರೋಕರ್ ಹಾಗೂ ಹಣ ಕೊಟ್ಟವರನ್ನು ಬಂಧಿಸಲಾಗಿದೆ.

ಐದು ಲಕ್ಷ ರು ಲಂಚ ಪಡೆದ ಆರೋಪ : ಬೆಂಗಳೂರು ನಗರ ಡಿಸಿ ಮಂಜುನಾಥ್ ಬಂಧನ

ಪ್ರಕರಣದ ಬಗ್ಗೆ ಪಾರದರ್ಶಕವಾಗಿ ವಿಚಾರಣೆ ನಡೆದಿದೆ. ಇದರಲ್ಲಿ ಸರ್ಕಾರದ ಹಸ್ತಕ್ಷೇಪವಿರಲಿಲ್ಲ ಎಂದು ಅರಗ ಜ್ಞಾನೇಂದ್ರ ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!