ಪ್ರಧಾನಿ ಮೋದಿ ಹೇಳಿದ್ದರು ಕುಮಾರಸ್ವಾಮಿಯೇ ಐದು ವರ್ಷ ಸಿಎಂ ಅಂತ – ರೇವಣ್ಣ

Team Newsnap
1 Min Read

2018 ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದೇ ಪ್ರಧಾನಿ ಮೋದಿಯವರೇ ಕುಮಾರಸ್ವಾಮಿ ಜೊತೆ ಮಾತನಾಡಿ, ಬಿಜೆಪಿ ಜೊತೆ ಬನ್ನಿ. ನೀವೆ ಐದು ವರ್ಷ ಸಿಎಂ ಆಗಿ ಆಡಳಿತ ಮಾಡಿ ಎಂದು ಆಹ್ವಾನ ನೀಡಿದ್ರು ಎಂಬ ಅಂಶವನ್ನು ಮಾಜಿ ಸಚಿವ ರೇವಣ್ಣ ಹಾಸನದಲ್ಲಿ ಬಹಿರಂಗಗೊಳಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ರೇವಣ್ಣ ಪ್ರಧಾನಿ ಆಹ್ವಾನವನ್ನು ನಾವು ಪರಿಗಣಿಸದೇ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಮಾಡಿಕೊಂಡು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದರು. ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಉಭಯ ಪಕ್ಷಗಳ ಹಲವು ಶಾಸಕರು ರಾಜೀನಾಮೆ ನೀಡಿದ ಕಾರಣಕ್ಕೆ ಕುಮಾರಸ್ವಾಮಿಯವರ ಸರ್ಕಾರ ಪತನಗೊಂಡಿತ್ತು.

ನಂತರ ರಾಜ್ಯದಲ್ಲಿ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದ್ದು, ರಾಜೀನಾಮೆ ನೀಡಿದ ಕಾಂಗ್ರೆಸ್ – ಜೆಡಿಎಸ್ ಶಾಸಕರುಗಳು ಬಿಜೆಪಿ ಸೇರ್ಪಡೆಗೊಂಡು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮಂತ್ರಿಗಳಾಗಿದ್ದರು. ತಮ್ಮ ಸರ್ಕಾರ ಪತನಗೊಳ್ಳಲು ಸಿದ್ದರಾಮಯ್ಯನವರೇ ಕಾರಣ ಎಂದು ಕುಮಾರಸ್ವಾಮಿಯವರು ಪದೇ ಪದೇ ಆರೋಪಿಸುತ್ತಿದ್ದಾರೆ.

ಚುನಾವಣೆಗೆ ನಾಲ್ಕು ದಿನ ಮುನ್ನ ನರೇಂದ್ರ ಮೋದಿಯವರು ಕುಮಾರಸ್ವಾಮಿಯವರನ್ನು ದೆಹಲಿಗೆ ಕರೆಸಿಕೊಂಡು ನಾವು ನಿಮ್ಮ ಜೊತೆ ಇರುತ್ತೇವೆ. 5 ವರ್ಷಗಳ ಕಾಲ ನೀವೇ ಮುಖ್ಯಮಂತ್ರಿಗಳಾಗಿರಿ ಎಂದು ಹೇಳಿದ್ದರು. ಇದನ್ನು ಕುಮಾರಸ್ವಾಮಿ ಅಂದು ಒಪ್ಪಿಕೊಂಡಿದ್ದರೆ ಇಂದಿಗೂ ಅವರೇ ಮುಖ್ಯಮಂತ್ರಿಯಾಗಿರುತ್ತಿದ್ದರು ಎಂಬ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.

ನನಗೆ ಸಿಎಂ ಆಗೋ ಅರ್ಹತೆ ಇದೆ – ಸಚಿವ ಉಮೇಶ್ ಕತ್ತಿ

ಅಲ್ಲದೆ ಕಾಂಗ್ರೆಸ್ ನವರನ್ನು ನಂಬಬೇಡಿ ಎಂದು ನರೇಂದ್ರ ಮೋದಿಯವರು ಅಂದು ಹೇಳಿದ್ದರು. ಆದರೆ ಕುಮಾರಸ್ವಾಮಿ ಬಿಜೆಪಿ ಜೊತೆ ಕೈಜೋಡಿಸದೆ ಕಾಂಗ್ರೆಸ್ ಜೊತೆ ಹೋದರು ಎಂದು ರೇವಣ್ಣ ಹೇಳಿದ್ದಾರೆ.

Share This Article
Leave a comment