ಬಹುತೇಕ ಹೀರೋಯಿನ್ಗಳಿಗೆ ಇಷ್ಟವಿಲ್ಲದ ವಿಚಾರ ಎಂದರೆ ಮದುವೆ. ಡೇಟಿಂಗ್ ನಡೆಸುತ್ತಿದ್ದರೂ ಮದುವೆ ಬಗ್ಗೆ ಅವರು ಎಂದಿಗೂ ಮಾತನಾಡುವುದಿಲ್ಲ. ಮಾಧ್ಯಮದವರಾಗಲೀ ಅಭಿಮಾನಿಗಳಾಗಲೀ ಮದುವೆ ಬಗ್ಗೆ ಕೇಳಿದರೆ ಸಾಕು ಆ ಪ್ರಶ್ನೆಗೆ ಉತ್ತರ ಕೊಡದೆ ಪಾದರಸದಂತೆ ನುಣುಚಿಕೊಳ್ಳುತ್ತಾರೆ.
ಈಗ ಪೂಜಾ ಹೆಗ್ಡೆ ಮದುವೆ ವಿಚಾರದ ಬಗ್ಗೆ ಮಾತನಾಡಿದ್ದಾರೆ. ತಾವು ಮದುವೆ ಆಗೋ ಹುಡುಗ ನನ್ನನ್ನು ತುಂಬಾನೇ ಕೇರ್ ಮಾಡಬೇಕು ಎಂದಿದ್ದಾರೆ.
ನಟಿ ಪೂಜಾ ಹೆಗ್ಡೆ ಬಾಲಿವುಡ್ಗಿಂತ ಹೆಚ್ಚಾಗಿ ದಕ್ಷಿಣ ಭಾರತದಲ್ಲಿ ಮಿಂಚುತ್ತಿದ್ದಾರೆ. ಒಕ ಲೈಲಾ ಕೋಸಂ ಸಿನಿಮಾ ಮೂಲಕ ಟಾಲಿವುಡ್ಗೆ ಕಾಲಿಟ್ಟ ಅವರಿಗೆ ಹಿಟ್ ತಂದುಕೊಟ್ಟಿದ್ದು ಅಲ್ಲು ಅರ್ಜುನ್ ನಟನೆಯ ಡಿಜೆ ಸಿನಿಮಾ. ಅದಾದ ನಂತರದಲ್ಲಿ ಅರವಿಂದ ಸಮೇತ ವೀರ ರಾಘವ, ಮಹರ್ಷಿ, ಅಲಾ ವೈಂಕುಂಟಪುರಂಲೋದಂಥ ಚಿತ್ರಗಳಲ್ಲಿ ನಟಿಸಿದರು ನಟಿ ಪೂಜಾ ಹೆಗ್ಡೆ.
ಈಗ ಅವರು ಮದುವೆ ಬಗ್ಗೆ ಮಾತನಾಡಿದ್ದಾರೆ. ಹಾಗಂತ ನಿಜ ಜೀವನದಲಲ್ಲ. ಬದಲಿಗೆ ಮೋಸ್ಟ್ ಬ್ಯಾಚುಲರ್ಸ್ ಸಿನಿಮಾದ ಟ್ರೈಲರ್ನಲ್ಲಿ.
ಮೋಸ್ಟ್ ಬ್ಯಾಚುಲರ್ಸ್ ಸಿನಿಮಾದಲ್ಲಿ ಅಕಿಲ್ ಅಕ್ಕಿನೇನಿ ಹೀರೋ ಆಗಿ ನಟಿಸಿದ್ದಾರೆ. ಈ ಚಿತ್ರಕ್ಕೆ ಪೂಜಾ ಹೆಗ್ಡೆ ನಾಯಕಿ. ಅವರು ತಾವು ಮದುವೆ ಆಗೋ ಹುಡುಗ ಯಾವ ರೀತಿ ಇರಬೇಕು ಎನ್ನುವ ಬಗ್ಗೆ ಟೀಸರ್ನಲ್ಲಿ ಹೇಳಿಕೊಂಡಿದ್ದಾರೆ
More Stories
ಎಲೆಕ್ಟ್ರಿಕ್ ಸ್ಕೂಟರ್ ಶೋರೂಮ್ ಬೆಂಕಿಗೆ ಆಹುತಿ – ಯುವತಿ ಸಜೀವ ದಹನ
100 ಕೋಟಿ ವಂಚನೆ ಪ್ರಕರಣ: ದೆಹಲಿಯಲ್ಲಿ ಚೀನಾ ಪ್ರಜೆ ಬಂಧನ
ರೈತರ ಕೃಷಿ ಪಂಪ್ಸೆಟ್ಗಳಿಗೆ ಉಚಿತ ವಿದ್ಯುತ್ : ಸಚಿವ ಜಾರ್ಜ್ ಪ್ರಕಟ