ಮೈಸೂರು ದಸರಾದಲ್ಲಿ ಕೊಡಗಿನ ಗಜ ಪಡೆಗಳದ್ದೇ ದಬಾ೯ರ್.

Team Newsnap
8 Min Read
ನಾಡಹಬ್ಬದಲ್ಲಿ ಮೆರೆಯಲಿದ್ದಾನೆ. ಕೊಡಗಿನ ವೀರ ಅಭಿಮನ್ಯು!
ಅನಿಲ್ ಎಚ್.ಟಿ.

ಹೆಸರು – ಅಭಿಮನ್ಯು

ವಯಸ್ಸು – 54

ವಾಸ – ಮತ್ತಿಗೋಡು ಕ್ಯಾಂಪ್, ಕೊಡಗು.

ತೂಕ- 5,290 ಕೆ.ಜಿ.

ಸಾಧನೆ – 125 ಕ್ಕೂ ಅಧಿಕ ಕಾಡಾನೆಗಳು, 12 ಧಾಳಿಕೋರ ಹುಲಿಗಳ ಸೆರೆ ಕಾಯಾ೯ಚರಣೆಯ ನೇತೖತ್ವ

ಗುಣ – ನಡತೆ – ಅತ್ಯಂತ ವಿಧೇಯ. ಬಲಿಷ್ಟತೆಯೊಂದಿಗೆ , ಎದುರಾಳಿಗಳ ಪಾಲಿಗೆ ನಡುಕ ಹುಟ್ಟಿಸಬಲ್ಲ ಕಿಚ್ಚಿನ ಸ್ವಭಾವ. ಸ್ವಯಂತೀಮಾ೯ನ ಕೈಗೊಳ್ಳುವ ವಿಶೇಷ ಗುಣ. ದಟ್ಟ ಕಾಡಿನೊಳಗೆ ಈತನೇ ಮಹಾರಾಜ.

ಹಿರಿಮೆ – ಕನ್ನಡ ನಾಡಿನ ಕಾಡುಗಳಲ್ಲಿನ ಯಶಸ್ವಿ ಕಾಯಾ೯ಚರಣೆಗೆ ಈತನಿಗೆ ಈತನೇ ಸಾಟಿ. ಇತಿಹಾಸದಲ್ಲಿ ಬಲರಾಮನ ಬಳಿಕ ಕೊಡಗಿನಿಂದ ಅಂಬಾರಿ ಹೊರುವ ಎರಡನೇ ಆನೆಯಾಗಿ ಸೋಮವಾರ ಅಭಿಮನ್ಯು ನಾಡಹಬ್ಬದ ದಾಖಲೆಯ ಪುಟಕ್ಕೆ ಸೇಪ೯ಡೆಯಾಗಲಿದ್ದಾನೆ. ಈ ಮೂಲಕ ಕೊಡಗಿನ ಹಿರಿಮೆಯನ್ನು ವಿಶ್ವವ್ಯಾಪಿ ಅಭಿಮನ್ಯು ಸಾರಲಿದ್ದಾನೆ.
ಬಲಿಷ್ಠನಾಗಿರುವ ಅಭಿಮನ್ಯು ಪಾಲಿಗೆ ತಾನು ಬೆಳೆದ ವೀರಪರಂಪರೆಯ ಕೊಡಗಿನ ಮಣ್ಣಿನ ಗುಣ, ಹೆಸರಿಗೆ ತಕ್ಕಂತೆ ಮಹಾಭಾರತದ ಪಾತ್ರದಂತೆ ಕೆಚ್ಚಿನ ಜೀವಿ. ಸವಾಲಿನ ಚಕ್ರವ್ಯೂಹವನ್ನು ಭೇದಿಸುವುದರಲ್ಲಿ ಅಭಿಮನ್ಯುಗೆ ಈತನೇ ಸರಿಸಾಟಿ. ಹೀಗಾಗಿಯೇ ಅರಣ್ಯ ಇಲಾಖೆಯ ಅಧಿಕಾರಗಳಿಗೆ ಅಭಿಮನ್ಯುವಿನ ಧೈಯ೯ ಕಂಡರೆ ಬಹಳ ಅಭಿಮಾನ. ಅಭಿಮನ್ಯು ಎಂದರೆ ಕನ್ನಡಿಗರ ಅಚ್ಚುಮೆಚ್ಚು, ಪರರಾಜ್ಯದವರಿಗೆ ಹೊಟ್ಟೆಕಿಚ್ಚು.!

ದೇಶದ ಯಾವುದೇ ಪ್ರದೇಶದಲ್ಲಿ ಕಾಡಾನೆ ದಾಳಿಯ ಪ್ರಕರಣಗಳಲ್ಲಿ ದಾಂಧಲೆ ನಿರತ ಆನೆಗಳ ಸೆರೆಗೆ ಕನಾ೯ಟಕದಿಂದ ತೆರಳುವ ಸಾಕಾನೆಗಳ ಪಟ್ಟಿಯಲ್ಲಿ ಮೊದಲ ಹೆಸರೇ ಅಭಿಮನ್ಯು.

ಹೀಗಾಗಿಯೇ ಛತ್ತೀಸ್ ಗಡ್ ನ ಸಗ೯ಜಿ ಎಂಬ ಗ್ರಾಮದಲ್ಲಿ ದಾಂಧಲೆಕೋರರಾಗಿ ಗ್ರಾಮಸ್ಥರು ಜೀವಭಯ ಎದುರಿಸಿದ್ದ 22 ಧಾಳಿಕೋರ ಕಾಡಾನೆಗಳ ಸೆರೆ ಕಾಯಾ೯ಚರಣೆಯಲ್ಲಿಯೂ ಕನ್ನಡ ನಾಡಿನ ಹೆಮ್ಮೆಯ ಅಭಿಮನ್ಯು ಮುಂಚೂಣಿಯಲ್ಲಿದ್ದು ಅಷ್ಟೂ ಕಾಡಾನೆಗಳನ್ನು ಸೆರೆಹಿಡಿದಿದ್ದ. ಗೋವಾ, ಓರಿಸ್ಸಾ, ಮಹಾರಾಷ್ಟ್ರ ಸೇರಿದಂತೆ ದೇಶದ ಹಲವೆಡೆ ಕಾಡಾನೆ ಸೆರೆ ಕಾಯಾ೯ಚರಣೆಯಲ್ಲಿ ಕೊಡಗಿನ ಈ ವೀರ ಪ್ರಮುಖ ಪಾತ್ರ ವಹಿಸಿದ್ದ. ಸಾಕಾನೆಗಳ ಪೈಕಿ ಕೊಡುವುದಿದ್ದರೆ ಅಭಿಮನ್ಯುವನ್ನೇ ಕೊಡಿ ಎಂದು ಕೆಲವು ರಾಜ್ಯಗಳು ಬೇಡಿಕೆಯಿಟ್ಟಿದ್ದವು.. ಹೀಗಿದೆ ನಮ್ಮ ನೆಲದ ಅಭಿಮನ್ಯುವಿನ ಕೀರುತಿ.

1977ರಲ್ಲಿ ಕೊಡಗು ಜಿಲ್ಲೆಯ ಕಲ್ಲಳ್ಳ ಎಂಬಲ್ಲಿ ದಾಂಧಲೆನಿರತನಾಗಿದ್ದ ಈ ಪುಂಡಾನೆಯನ್ನು ಖೆಡ್ಡಾ ಕಾಯಾ೯ಚರಣೆ ಮೂಲಕ ಸೆರೆ ಹಿಡಿಯಬೇಕಾದರೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಪಟ್ಟ ಪಾಡು ಅಷ್ಟಿಷ್ಟಲ್ಲ. ಅಷ್ಟೊಂದು ಕೋಟಲೆ ಕೊಟ್ಟಿದ್ದ ಈ ಧಾಳಿಕೋರನನ್ನು ಹಳೇ ಶಿಬಿರವಾಗಿದ್ದ ಹೆಬ್ಬಾಲಕ್ಕೆ ಕರೆತಂದು ಕಟ್ಟಿಹಾಕಿದ್ದ ಮಾವುತ, ಕಾವಾಡಿಗಳಿಗೆ ಆಗಲೇ ಗೊತ್ತಾಗಿಬಿಟ್ಟಿತು. ಇವನು ಅಸಮಾನ್ಯ, ಮುಂದೊಂದು ದಿನ ಆನೆಗಳಲ್ಲಿಯೇ ಅಗ್ರಮಾನ್ಯನಾಗುತ್ತಾನೆಂದು.

ಅಭಿಮನ್ಯು ಹೆಸರು ಏಕೆ?

ಮೂಕ೯ಲ್ ಶಿಬಿರದಲ್ಲಿ ತರಬೇತಿ ನೀಡಿ 8 ವಷ೯ದ ಹಿಂದೆ ತಿತಿಮತಿ ಅರಣ್ಯ ವಲಯದ ಮತ್ತಿಗೋಡು ಸಾಕಾನೆ ತರಬೇತಿ ಕೇಂದ್ರಕ್ಕೆ ಅಭಿಮನ್ಯುವನ್ನು ಕರೆತರಲಾಯಿತು. .

ಹೀಗಾಗಿಯೇ ಇವನಿಗೆ ಅಭಿಮನ್ಯು ಎಂಬ ನಾಮಕರಣ ಮಾಡಲಾಯಿತು. ಸಣ್ಣಪ್ಪ ಎಂಬ ಮತ್ತಿಗೋಡು ಮಾವುತ ಅಭಿಮನ್ಯುವಿನ ತರಬೇತುದಾರನಾಗಿದ್ದರು.
ವಷ೯ಗಳ ಬಳಿಕ ತಂದೆ ಸಣ್ಣಪ್ಪ ಅಗಲಿಕೆಯ ತರುವಾಯ ಅಭಿಮನ್ಯು ಉಸ್ತುವಾರಿ ತನ್ನ ಹೆಗಲಿಗೆ ಬಂತು ಎಂದು ಹೇಳಿದ ಈಗಿನ ಮಾವುತ ಜೆ.ಎಸ್.ವಸಂತ, ಅಭಿಮನ್ಯು ನನ್ನ ಕುಟುಂಬದ ಸದಸ್ಯನಂತೆಯೇ ಆಗಿದ್ದಾನೆ. ಅವನ ಮೂಕ ಭಾವನೆ ನನಗೆ ಅಥ೯ವಾಗುತ್ತದೆ. ನನ್ನ ಮಾತು ಅವನಿಗೆ ಅಥ೯ವಾಗುತ್ತದೆ.
ನಮ್ಮಿಬ್ಬರ ಸಂಬಂಧ ಯಾರ ಊಹೆಗೂ ನಿಲುಕದ್ದು ಎಂದು ವಸಂತ ಭಾವುಕರಾಗಿ ಹೇಳುತ್ತಾರೆ. ಬೇರೆ ಆನೆಗಳಂತೆ ಹತ್ತಿರ ಹೋಗಿ ಆದೇಶ ನೀಡುವ ಬದಲಿಗೆ ದೂರದಲ್ಲಿಯೇ ಸಂದೇಶ ನೀಡಿದರೆ ಆ ಆದೇಶ ಪಾಲಿಸುವ ಸೂಕ್ಷ್ಯತೆ ಅಭಿಮನ್ಯುವಿನಲ್ಲಿದೆ.

125 ಕಾಡಾನೆ ಸೆರೆ

ಅಭಿಮನ್ಯು ಈವರೆಗೆ 125 ಕಾಡಾನೆಗಳನ್ನು ಸೆರೆಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. 12 ಹುಲಿಗಳ ಸೆರೆ ಕಾಯಾ೯ಚರಣೆಯಲ್ಲಿಯೂ ಈತನದ್ದೇ ಮುಂದಾಳತ್ವ. ದಟ್ಟ ಕಾಡಿನ ಸವಾಲಿನ ಕಾಯಾ೯ಚರಣೆಯಲ್ಲಿಯೂ ಸಾಹಸಮಯ ಚಕ್ರವ್ಯೂಹ ಭೇದಿಸಿ ಕಾಯಾ೯ಚರಣೆಯನ್ನು ಯಶಸ್ನಿಗೊಳಿಸಿ ಘೀಳಿಟ್ಟರೇ ಅಭಿಮನ್ಯುವಿಗೆ ತೖಪ್ತಿ. 23 ಸಾಕಾನೆಗಳಿರುವ ಮತ್ತಿಗೋಡಿನ ಸಾಕಾನೆ ತರಬೇತಿ ಕೇಂದ್ರದ ಅಗ್ರಗಣ್ಯ ಎಂಬ ಹಿರಿಮೆಯೂ ಆತನದ್ದು.

ಇಂಥ ಧೀರನಿಗೆ ಈಗ ನಾಡಹಬ್ಬದಲ್ಲಿ ನಾಡದೇವಿಯ ಅಂಬಾರಿ ಹೊರುವ ಪ್ರತಿಷ್ಚಿತ ಗೌರವ ಈ ಬಾರಿಯಿಂದ ದೊರಕುತ್ತಿದೆ.

760 ತೂಕ ಹೊರುವ ಅಭಿಮನ್ಯು

ಮೈಸೂರು ದಸರಾದಲ್ಲಿ ಶ್ರೀ ಮಾತೆ ಚಾಮುಂಡೇಶ್ವರಿಯ ವಿಗ್ರಹವಿರುವ 760 ಕೆ.ಜಿ. ತೂಕದ ಸಂಪೂಣ೯ ಚಿನ್ನದಿಂದಲೇ ಮಾಡಿದ ಅಂಬಾರಿ ಹೊರುವುದೆಂದರೆ ತಮಾಷೆ ಮಾತಲ್ಲ. ವಿಶ್ವವಿಖ್ಯಾತವಾಗಿರುವ ಕನ್ನಡ ನಾಡಿನ ನಾಡಹಬ್ಬ ಮೈಸೂರಿನ ಐತಿಹಾಸಿಕ ದಸರಾದ ಕೇಂದ್ರಬಿಂದುವೆ ಅಂಬಾರಿ ಮೆರವಣಿಗೆ. ಕೊಂಚ ಎಡವಿದರೂ ತಲೆ ತಗ್ಗಿಸುವಂತಾಗುತ್ತದೆ. ಹೀಗಾಗಿಯೇ ಅಂಬಾರಿ ಹೊರಲು ಅತ್ಯಂತ ಸೂಕ್ತ ಗಜರಾಜನನ್ನೇ ಆಯ್ಕೆ ಮಾಡಲಾಗುತ್ತದೆ.

ಅರ್ಜುನ‌ ನಿವೃತ್ತಿ

ಅಜು೯ನ 8 ವಷ೯ಗಳ ಕಾಲ ಪಾರಂಪರಿಕ ಅಂಬಾರಿ ಹೊತ್ತು 60 ವಷ೯ ತಲುಪುತ್ತಿರುವಂತೆಯೇ ನಿಯಮಾವಳಿ ಪ್ರಕಾರ ನಿವೖತ್ತನಾದ. ಕಳೆದ ವಷ೯ವೇ ಅಭಿಮನ್ಯು ಮೇಲೆ ಅಂಬಾರಿ ಹೊರಿಸಿ ತರಬೇತಿ ನೀಡಲಾಗಿತ್ತು. ಹೀಗಾಗಿ ಎಲ್ಲರ ಆಯ್ಕೆಯಂತೆ ಅಭಿಮನ್ಯು ಈ ವಷ೯ ಮೊದಲ ಬಾರಿಗೆ ರಾಜಪರಂಪರೆಯ ನಾಡಹಬ್ಬದಲ್ಲಿ ನಾಡದೇವಿಯಿರುವ ಚಿನ್ನದ ಅಂಬಾರಿ ಹೊರುತ್ತಿದ್ದಾನೆ.

ವಿಪಯಾ೯ಸ ಎಂದರೆ ಕಳೆದ ವಷ೯ದವರೆಗೂ ದಸರಾದಲ್ಲಿ ಮೈಸೂರು ಪೊಲೀಸರ ವಾದ್ಯಗೋಷ್ಟಿಯ ವಾದ್ಯಗಾರರನ್ನು ಹೊತ್ತೊಯ್ಯುವ ಗಾಡಿಯಾದ ಆನೆಗಾಡಿಯನ್ನು ಎಳೆಯುತ್ತಿದ್ದ ಅಭಿಮನ್ಯು. ಆದರೆ ಕಟ್ಟುಮಸ್ತಾದ ಅಭಿಮನ್ಯು ಸಣ್ಣದಾಗಿರುವ ಆನೆಗಾಡಿ ಎಳೆಯುವುದು ಎಳ್ಳಷ್ಟು ಸರಿಕಾಣುತ್ತಿರಲಿಲ್ಲ. ಇದೀಗ ಅಭಿಮನ್ಯು ಅಂಬಾರಿಯನ್ನೇ ತನ್ನ ಮೈಮೇಲೆ ಹೊರುತ್ತಿರುವುದು ಈತನಿಗೆ ಕೊನೆಗೂ ದೊರಕಿದ ಪ್ರತಿಷ್ಟಿತ ಗೌರವವಾಗಿದೆ. 18 ವಷ೯ಗಳ ಕಾಲ ನಾಡಹಬ್ಬದಲ್ಲಿ ಪಾಲ್ಗೊಂಡಿದ್ದ ಕೊಡಗಿನ ವೀರ ಅಭಿಮನ್ಯುವಿಗೆ ಕೊನೆಗೂ ಅಂಬಾರಿ ಹೊರುವ ಭಾಗ್ಯ ದೊರಕುತ್ತಿದೆ.

ಮೈಸೂರು ದಸರಾದಲ್ಲಿ ಬಿಳಿಗಿರಿರಂಗ ಎಂಬ ಪಟ್ಟದಾನೆ ಮೂವರು ರಾಜರನ್ನು ಅಂಬಾರಿಯಲ್ಲಿ ಕೂರಿಸಿಕೊಂಡು ಮೆರವಣಿಗೆ ನಡೆಸಿದ ದಾಖಲೆ ಹೊಂದಿದೆ. ಮೈಸೂರಿನ ಕೊನೇ ಅರಸ ಶ್ರೀ ಜಯಚಾಮರಾಜರನ್ನೂ ಇದೇ ಆನೆ ಅಂಬಾರಿಯಲ್ಲಿ ಹೊತ್ತುಕೊಂಡಿತ್ತು. ಚಾಮುಂಡಿ ಪ್ರಸಾದ್, ರಾಜೇಂದ್ರ, ದ್ರೋಣ, ಬಲರಾಮ, ಅಜು೯ನ ಈವರೆಗೆ ಮೈಸೂರು ದಸರಾದಲ್ಲಿ ಅಂಬಾರಿ ಹೊತ್ತ ಆನೆಗಳು. ಮತ್ತಿಗೋಡಿನ ಬಲರಾಮ ಹೊರತು ಪಡಿಸಿದಂತೆ ಇದೀಗ ಇದೇ ಶಿಬಿರದ ಅಭಿಮನ್ಯು ಇದೀಗ ಅಂಬಾರಿ ಹೊರುವ ಆನೆಯಾಗಿ ದಾಖಲೆ ಮಾಡುತ್ತಿದ್ದಾನೆ. ಕೊಡಗಿನಿಂದ ಎರಡನೇ ಆನೆಯಾಗಿ ದಸರಾ ಅಂಬಾರಿ ಹೊರುವ ಅವಕಾಶ ಅಭಿಮನ್ಯುವಿಗೆ ದೊರಕಿದೆ.

ಅಭಿಮನ್ಯು ಜತೆ ಈ ಬಾರಿ ಮೈಸೂರಿನ ಅರಮನೆ ಅಂಗಣಕ್ಕೆ ಮಾತ್ರ ಸೀಮಿತವಾಗಿರುವ ದಸರಾ ಮಹೋತ್ಸವದಲ್ಲಿ ಕಾವೇರಿ, ವಿಕ್ರಮ, ಗೋಪಿ.. ಜತೆಗೂಡುತ್ತಿದ್ದಾರೆ. ಗಮನಾಹ೯ ಎಂದರೆ ಈ ನಾಲ್ಕೂ ಆನೆಗಳು ಕೂಡ ಕೊಡಗಿನ ಆನೆಗಳಾಗಿದೆ ಎಂಬುದು.

ಸಾಕಾನೆ ಕೇಂದ್ರದ ವಿಧೇಯ‌ ಸದಸ್ಯರು

ಅಭಿಮನ್ಯು ಸೇರಿ ದಸರಾದಲ್ಲಿ ಪಾಲ್ಗೊಳ್ಳುವ ಎಲ್ಲಾ ಐದೂ ಆನೆಗಳು ಕೊಡಗಿನ ಕಾಡಿನಲ್ಲಿ ಸೆರೆಸಿಕ್ಕಿ, ಕೊಡಗಿನ ಸಾಕಾನೆ ಕೇಂದ್ರದ ವಿಧೇಯ ಸದಸ್ಯರಾಗಿವೆ. ಇದೇ ಮೊದಲ ಬಾರಿಗೆ ದಸರಾದಲ್ಲಿ ಪ್ರಮುಖ ಪಾತ್ರ ವಹಿಸುವ ಅವಕಾಶ ಕೊಡಗಿನ ಸಾಕಾನೆಗಳಿಗೆ ಮಾತ್ರವೇ ಸಿಗುತ್ತಿದೆ. ಪ್ರತೀವಷ೯ ಕೆ.ಗುಡಿ. ಎಚ್.ಡಿ.ಕೋಟೆ, ಬಂಡೀಪುರ ಮುಂತಾದ ಸಾಕಾನೆ ಶಿಬಿರದಿಂದ ಪಾಲ್ಗೊಳ್ಳುತ್ತಿದ್ದ ಸಾಕಾನೆ ಬದಲಿಗೆ ಕೊಡಗಿನ ಸಾಕಾನೆ ಶಿಬಿರದ ಆನೆಗಳನ್ನು ಮಾತ್ರ ದಸರಾಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ.

ದಸರಾದಲ್ಲಿ ಪಾಲ್ಗೊಳ್ಳುತ್ತಿರುವ ಕೊಡಗಿನ ಇತರ ಆನೆಗಳು

ಕಾವೇರಿ -44 ವಷ೯, 2,820 ಕೆ.ಜಿ. ಮಾತ್ರವಲ್ಲದೇ ಬಳಿಯ ಆಡಿನಾಡೂರು ಕಾಡಿನಲ್ಲಿ 2009 ರಲ್ಲಿ ಸೆರೆಸಿಕ್ಕಿದ ಆನೆ. ಜೆ.ಕೆ.ಡೋಬಿ, ರಾಘು ಹಾಲಿ ಮಾವುತ ಮತ್ತು ಕಾವಾಡಿಗಳು. ದುಬಾರೆ ಸಾಕಾನೆ ಶಿಬಿರದ ನಿವಾಸಿ ಈಕೆ.

ವಿಜಯ – 61 ವಷ೯ದ ಈ ಆನೆಯ ತೂಕ 2,770 ಕೆ.ಜಿ.. ಆನೆಕಾಡು ಶಿಬಿರದ ನಿವಾಸಿಯಾಗಿರುವ ವಿಜಯ 1963 ರಲ್ಲಿ ದುಬಾರೆ ಕಾಡಿನಲ್ಲಿ ಸೆರೆಹಿಡಿಯಲಾಗಿತ್ತು. ಬೋಜಪ್ಪ ಮತ್ತು ಅಣ್ಣಯ್ಯ ಮಾವುತ, ಕಾವಾಡಿ.

ಗೋಪಿ, – 37 ವಷ೯. 3,710 ಕೆ.ಜಿ.ತೂಕ. 1993 ರಲ್ಲಿ ಕಾರೆಕೊಪ್ಪದಲ್ಲಿ ಸೆರೆಸಿಕ್ಕ ಗೋಪಿ ದುಬಾರೆ ಶಿಬಿರದ ನಿವಾಸಿ. ಸರಿ ಮಾವುತನಾಗಿದ್ದರೆ ಅಪ್ಪಯ್ಯ ಕಾವಾಡಿ.

ವಿಕ್ರಮ – 46 ವಷ೯ದ ಆನೆಯ ತೂಕ 3,820 ಕೆ.ಜಿ. ಆನೆಕಾಡು ನಿವಾಸಿಯಾಗಿರುವ ವಿಕ್ರಮನನ್ನು 1970 ರಲ್ಲಿ ದೊಡ್ಡಬೆಟ್ಟ ಕಾಡಿನಲ್ಲಿ ಸೆರೆಹಿಡಿಯಲಾಗಿತ್ತು. ರಾಜಮಣಿ ಮತ್ತು ಹೇಮಂತ್ ಮಾವುತ, ಕಾವಾಡಿ,.

ಕೊಡಗಿನ ಆನೆಗಳಿಗೆ ರಾಜ್ಯದಲ್ಲಿಯೇ ಉತ್ತಮ ಹೆಸರಿದೆ. ಇದೀಗ ನಾಡಹಬ್ಬವಾಗಿ ವಿಶ್ವದಲ್ಲಿಯೇ ಗುರುತಿಸಲ್ಪಟ್ಟಿರುವ ಮೈಸೂರು ದಸರಾದಲ್ಲಿಯೂ ಕೊಡಗಿನ ಗಜಪಡೆ ವಿಜೖಂಭಿಸುತ್ತಿರುವುದು ಜಿಲ್ಲೆಗೆ ಅತ್ಯಂತ ಹೆಮ್ಮೆಯ ವಿಚಾರ.

dasaraelephant 1

ನಂಬಿದವರನ್ನು ಎಂದಿಗೂ ಕೈಬಿಡದ ಅಪರೂಪದ ಗುಣ!
….
ಮಹಾಭಾರತದ ಪಾತ್ರಧಾರಿಯಂತೆ ಆನೆಯಾಗಿದ್ದರೂ ಈ ಅಭಿಮನ್ಯು ತನ್ನನ್ನು ನಂಬಿದವರನ್ನು ಎಂದಿಗೂ ಕೈಬಿಡದ ಅಪರೂಪದ ಗುಣದವನು. ಕಾಯಾ೯ಚರಣೆಯೊಂದರಲ್ಲಿ ಎರಡು ಕಾಡಾನೆಗಳು ಒಂದೇ ಬಾರಿಗೆ ಅಭಿಮನ್ಯು ಮೇಲೆ ಎರಗಿದರೂ ಈತ ಕಿಂಚಿತ್ತೂ ಹಿಂಜರಿಯದೇ ಧೈಯ೯ದಿಂದ ಧಾಳಿಕೋರ ಆನೆಗಳನ್ನು ಎದುರಿಸಿದ್ದ . ಕೇವಲ ಐದೇ ನಿಮಿಷದಲ್ಲಿ ದಾಂಧಲೆಕೋರ ಆನೆಗಳನ್ನು ನಿಯಂತ್ರಣಕ್ಕೆ ತಂದು ತನ್ನ ಹತೋಟಿಯಲ್ಲಿರಿಸಿದ ದೀರ ಈತ. ಯಾವುದೇ ಕಾಯಾ೯ಚರಣೆಯಿರಲಿ, ಕೊಡಗಿನ ಧೀರತೆಯ ಗುಣ ಈತನಲ್ಲಿಯೂ ರಕ್ತಗತವಾಗಿರಬೇಕು. ಮಾಡು ಇಲ್ಲವೇ ಮಡಿ ಎಂಬ ಧೋರಣೆಯ ಅಭಿಮನ್ಯುವಿಗೆ ಈವರೆಗೆ ನಿರಾಶೆಯಾಗಿಲ್ಲ. ಸೋಲಿಲ್ಲದ ಸರದಾರ ಈತ. ಹೀಗಾಗಿಯೇ ಅರಣ್ಯ ಇಲಾಖೆಯವರು ಎ.ಕೆ.47 ಅಂದರೆ ಎಲ್ಲಾ ಧೈಯ೯ದ ಗುಣಗಳೂ ಇರುವ ಆನೆ ಎಂದು ಅಭಿಮನ್ಯುವಿಗೆ ಹೆಸರಿಟ್ಟಿದ್ದಾರೆ.

ಎಚ್.ಡಿ.ಕೋಟೆ ಕಾಡಿನಲ್ಲಿ ವನ್ಯಜೀವಿ ಬೇಟೆಕೋರರು ಇಟ್ಟಿದ್ದ ಕತ್ತರಿಗೆ ಕಾಲು ಸಿಲುಕಿ ಗಾಯಗೊಂಡಿದ್ದ ಹುಲಿಯೊಂದು ಬೇಟೆಯಾಡುವ ಸಾಮಥ್ಯ೯ವನ್ನೇ ಕಳೆದುಕೊಂಡಿತ್ತು. ಹೀಗೇ ಬಿಟ್ಟರೆ ಈ ಹುಲಿ ಆಹಾರಕ್ಕಾಗಿ ಆದಿವಾಸಿಗಳನ್ನು, ಗ್ರಾಮಸ್ಥರನ್ನು ಬಲಿಪಡೆಯುವುದು ಖಂಡಿತಾ ಎಂದು ತಿಳಿದು ಗಾಯಾಳು ಹುಲಿ ಸೆರೆಗೆ ಕಾಯಾ೯ಚರಣೆ ಕೈಗೊಳ್ಳಲಾಯಿತು. ಈ ಸಂದಭ೯ ಅಭಿಮನ್ಯುವನ್ನೇ ಮುಂಚೂಣಿಗೆ ಬಿಡಲಾಯಿತು. ಈತನ ಆಗಮನದ ವಾಸನೆ ಗ್ರಹಿಸಿ ಹುಲಿ ಘಜಿ೯ಸುತ್ತಿರುವಂತೆಯೇ ಅಭಿಮನ್ಯು ಜತೆಗಿದ್ದು ಅಜು೯ನ, ಭರತ ಜತೆಗೆ ಎರಡು ಹೆಣ್ಣಾನೆಗಳು .. ಸ್ಥಳದಿಂದ ಓಟಕಿತ್ತರೆ ನಮ್ಮ ಅಭಿಮನ್ಯು ಮಾತ್ರ ಕಿಂಚಿತ್ತೂ ವಿಚಲಿತನಾಗದೇ ಹುಲಿಯ ಹತ್ತಿರವೇ ಸಾಗಿದ್ದ. ಅಭಿಮನ್ಯು ಮೇಲಿದ್ದ ಅರವಳಿಕೆ ತಜ್ಞರು. ವೈದ್ಯರು ಹುಲಿಗೆ ಗುಂಡು ಹೊಡೆದು ಪ್ರಜ್ಞೆ ತಪ್ಪಿಸಿ ಸೆರೆಹಿಡಿಯುವಲ್ಲಿ ಅಭಿಮನ್ಯುವಿನ ದಿಟ್ಟತನ. ಸಮಯ ಪ್ರಜ್ಞೆ ಅವಿಸ್ಮರಣೀಯ ಎಂದು ಸ್ಮರಿಸಿಕೊಳ್ಳುತ್ತಾರೆ ಹಿರಿಯ ಅರಣ್ಯಾಧಿಕಾರಿಗಳು. .

ಅಭಿಮನ್ಯುವಿನ ವಿಶೇಷ ಗುಣವೇ ಆತನ ಸಮಯ ಪ್ರಜ್ಞೆ, ಯಾರ ಆದೇಶಕ್ಕೂ ಕಾಯದೇ ಆ ಕ್ಷಣದಲ್ಲಿ ಯಾವ ನಿಧಾ೯ರ ಕೈಗೊಳ್ಳಬೇಕೋ ಅಂಥ ದಿಟ್ಟ ತೀಮಾ೯ನವನ್ನು ಸ್ವಯಂ ಕೈಗೊಳ್ಳುವ ಸಾಮಥ್ಯ೯ ಆತನಲ್ಲಿದೆ. ಒಮ್ಮೆ ಮತ್ತಿಗೋಡು ಕ್ಯಾಂಪ್ ನ ದ್ರೋಣ ಆನೆ ಮೇಲೆ ಕಾಡಾನೆಯೊಂದು ಧಾಳಿ ಮಾಡಲಾರಂಭಿಸಿತು. ತನ್ನ ಗೆಳೆಯನ ಮೇಲಿನ ಧಾಳಿ ಕಂಡ ಅಭಿಮನ್ಯು ಯಾರ ಆದೇಶಕ್ಕೂ ಕಾಯದೇ ಏಕಾಏಕಿ ಅತ್ತ ಸಾಗಿ ಕಾಡಾನೆಯನ್ನು ಸೊಂಡಿಲಿನಿಂದ ಬಗ್ಗು ಬಡಿದು ದ್ರೋಣನನ್ನು ರಕ್ಷಿಸಿದ. ಗೆಳೆತನ ಎಂದರೆ ಹೀಗಿರಬೇಕು ಎಂಬುದಕ್ಕೆ ಸಾಕ್ಷಿಯಾದ ಎಂದು ಸ್ಮರಿಸಿಕೊಂಡವರು ಮತ್ತಿಗೋಡಿನ ಅರಣ್ಯಾಧಿಕಾರಿ ಸತೀಶ್.

ಬಲರಾಮ, ಅಜು೯ನನಿಗೆ ಹೋಲಿಸಿದರೆ ಅಭಿಮನ್ಯುವಿನ ದಂತಗಳು ತೀಕ್ಷ್ಮವಾಗಿಲ್ಲ. ಆದರೆ, ಇತರ ಆನೆ, ಹುಲಿ ಜತೆ ಕಾದಾಡಲು ಈ ದಂತ ಅತ್ಯಂತ ಸೂಕ್ತವಾಗಿದೆ. ಹೀಗಾಗಿ ತನ್ನ ಕೋರೆಯನ್ನೂ ಅಭಿಮನ್ಯು ಬೇಕು ಬೇಕಾದಾಗಲೆಲ್ಲಾ ಉಪಯೋಗಿಸಿಕೊಳ್ಳುತ್ತಾನೆ ಎಂದು ಸತೀಶ್ ತಿಳಿಸಿದರು..

ಎಂಥ ಕಾಡೇ ಇರಲಿ, ಆ ಕಾಡಿಗೆ ತಾನೇ ರಾಜ ಎಂಬಂತೆ ಅದರೊಳಗೆ ನುಗ್ಗಿ ನಿದಿ೯ಷ್ಟ ಗುರಿ ತಲುಪಿ ಕಾಯಾ೯ಚರಣೆಯ ಯಶಸ್ವಿಗೆ ಕಾರಣನಾಗುವ ನಮ್ಮ ಅಭಿಮನ್ಯು ತಿಂಗಳಲ್ಲಿ ಬಹುಪಾಲು ದಿನ ಒಂದಲ್ಲ ಒಂದು ಕಾಯಾ೯ಚರಣೆಯಲ್ಲಿಯೇ ಸಕ್ರಿಯನಾಗಿರುತ್ತಾನೆ. ಮತ್ತಿಗೋಡಿನಲ್ಲಿದ್ದಾಗ ಇವನನ್ನು ನಾಗರಹೊಳೆ ರಕ್ಷಿತಾರಣ್ಯ ವ್ಯಾಪ್ತಿಯ ಕಾಲು ಹಾದಿಯಲ್ಲಿ ಪಹರಗೆ ಬಳಸಿಕೊಳ್ಳಲಾಗುತ್ತದೆ. ನಾಗರಹೊಳೆ ಕಾಡು ತನ್ನದು ಎಂಬಂತೆ ಅಭಿಮನ್ಯು ಸರಾಗವಾಗಿ ಇಲ್ಲಿ ಹೆಜ್ಜೆ ಹಾಕುವುದನ್ನು ನೋಡುವುದೇ ಸೊಗಸಾದ ಅನುಭವ ಎಂದೂ ಸತೀಶ್ ಹೇಳಿದರು.

Share This Article
Leave a comment