February 22, 2026

Newsnap Kannada

The World at your finger tips!

ips

ರಾಜ್ಯದ 16 ಐಪಿಎಸ್ ಅಧಿಕಾರಿಗಳ ವರ್ಗಾವಣೆ

Spread the love

ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿಯಾಗಿದೆ. 16 ಐಪಿಎಸ್ ಅಧಿಕಾರಿಗಳ ವರ್ಗಾವಣೆಯನ್ನು ಮಾಡಿ ರಾಜ್ಯ ಸರ್ಕಾರ ಆದೇಶವನ್ನು ಮಾಡಿದೆ.

  1. ಶ್ರೀನಾಥ್ ಮಹದೇವ ಜೋಶಿ- ಲೋಕಾಯುಕ್ತಾ SP
  2. ಶಾಂತರಾಜು- ಬೆಸ್ಕಾಂ
  3. ಸಿ.ಕೆ ಬಾಬಾ- ಆಗ್ನೇಯ ವಿಭಾಗ ಡಿಸಿಪಿ
  4. ಸಂಜೀವ್ ಪಾಟೀಲ್- ಬೆಳಗಾವಿ ಎಸ್ಪಿ
  5. ಕಲಾ ಕೃಷ್ಣಸ್ವಾಮಿ- ಪೂರ್ವ ಸಂಚಾರಿ ವಿಭಾಗ ಡಿಸಿಪಿ
  6. ಹರೀಶ್ ಪಾಂಡೆ- ಎಸಿಬಿ SP
  7. ಲಕ್ಷ್ಮಣ್ ನಿಂಬರಗಿ- ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ
  8. ನಾಗೇಶ್ ಡಿ.ಎಲ್.- ಚಿಕ್ಕಬಳ್ಳಾಪುರ SP,
  9. ಶ್ರೀನಿವಾಸ್ ಗೌಡ – ಕೇಂದ್ರ ವಿಭಾಗ ಡಿಸಿಪಿ
  10. ಸಿ.ಕೆ. ಮಿಥುನ್ ಕುಮಾರ್ – ಸಿಐಡಿ SP,
  11. ಪಿ ಕೃಷ್ಣಕಾಂತ್- ಬೆಂಗಳೂರು ದಕ್ಷಿಣ ವಿಭಾಗ ಡಿಸಿಪಿ
  12. ಹರಿರಾಂ ಶಂಕರ್- ಹಾಸನ SP
  13. ಜೈಪ್ರಕಾಶ್- ಬಾಗಲಕೋಟೆ SP
  14. ಶೋಭಾರಾಣಿ – ಎಸಿಬಿ SP
  15. ಶಿವಾಂಶು ರಾಜಪೂತ್ – ASP ಹುಮ್ನಾಬಾದ್ ಉಪ ವಿಭಾಗಕ್ಕೆ ವರ್ಗಾವಣೆಯನ್ನು ಮಾಡಿ ಆದೇಶಿಸಲಾಗಿದೆ.

ಕೇಂದ್ರ ವಿಭಾಗದ ಡಿಸಿಪಿಯಾಗಿದ್ದ ಎಂಎನ್ ಅನುಚೇತ್‌ರನ್ನು ವರ್ಗಾವಣೆ ಮಾಡಿ ಎರಡು ತಿಂಗಳು ಕಳೆದಿದ್ದರು ಆ ಜಾಗಕ್ಕೆ ಯಾರನ್ನು ವರ್ಗಾಯಿಸಿರಲಿಲ್ಲ. ಅಪರಾಧ ವಿಭಾಗದ ಡಿಸಿಪಿ ಶರಣಪ್ಪರವರನ್ನು ಪ್ರಭಾರ ಡಿಸಿಪಿಯನ್ನಾಗಿ ನೇಮಿಸಿತ್ತು. ಇದೀಗ ಕೇಂದ್ರ ವಿಭಾಗಕ್ಕೆ ಹಾಸನದಲ್ಲಿ ಎಸ್ಪಿಯಾಗಿದ್ದ ಶ್ರೀನಿವಾಸ್ ಗೌಡರನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶವನ್ನು ಮಾಡಿದೆ. ವಿಧಾನಸೌಧದ ಆವರಣದಲ್ಲೇ ಕೆಂಪೇಗೌಡ ಪ್ರತಿಮೆ ಸ್ಥಾಪನೆ: ಸಿಎಂ ಪ್ರಕಟ- ಮೂವರಿಗೆ ಪ್ರಶಸ್ತಿ ಪ್ರದಾನ

ಬೆಂಗಳೂರಿಗೆ ಮೂವರು ಹೊಸ DCP

ಬೆಂಗಳೂರಿನ ನಾಲ್ವರು ಡಿಸಿಪಿಗಳು ವರ್ಗಾವಣೆಯಾಗಿದ್ದಾರೆ. ಈ ಪೈಕಿ ಮೂವರು ಬೆಂಗಳೂರಿಗೆ ಹೊಸ ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಬೆಂಗಳೂರು ಪಶ್ಚಿಮ ವಿಭಾಗಕ್ಕೆ ಸಂಜೀವ್ ಪಾಟೀಲ್ ಬದಲಿಗೆ ಲಕ್ಷ್ಮಣ್ ಹಿಬರಗಿ , ಬೆಂಗಳೂರು ದಕ್ಷಿಣ ವಿಭಾಗಕ್ಕೆ ಹರೀಶ್ ಪಾಂಡೆ ಬದಲಾಗಿ ಪಿ. ಕೃಷ್ಣಕಾಂತ್ ರನ್ನು, ಬೆಂಗಳೂರು ಆಗ್ನೇಯ ವಿಭಾಗಕ್ಕೆ ಶ್ರೀನಾಥ್ ಮಹದೇವ್ ಜೋಶಿ ಬದಲಾಗಿ ಸಿ.ಕೆ ಬಾಬರನ್ನು ನೇಮಕ ಮಾಡಲಾಗಿದೆ. ಇದರಲ್ಲಿ ಸಿ.ಕೆ ಬಾಬರವರು ಈ ಹಿಂದೆ ಈಶಾನ್ಯ ವಿಭಾಗದ ಡಿಸಿಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಅನುಭವವಿದೆ. ಕೇಂದ್ರ ವಿಭಾಗಕ್ಕೆ ಶ್ರೀನಿವಾಸ್ ಗೌಡರನ್ನು ವರ್ಗಾವಣೆರನ್ನು ವರ್ಗಾವಣೆ ಮಾಡಲಾಗಿದೆ.

error: Content is protected !!