March 13, 2026

Newsnap Kannada

The World at your finger tips!

death

ಕೃಷಿಹೊಂಡದಲ್ಲಿ ಈಜಲು ಹೋಗಿ ಬೆಂಗಳೂರಿನ ಯುವಕರಿಬ್ಬರು ಜಲ ಸಮಾಧಿ

Spread the love

ಕೃಷಿಹೊಂಡಕ್ಕೆ ಈಜಲು ಹೋಗಿ ಇಬ್ಬರು ಯುವಕರು ಸಾವನ್ನಪ್ಪಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ತೌಟನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಬೆಂಗಳೂರಿನ ಹರೀಶ್(21) ಹಾಗೂ ಶೃತೀಪ್ (30)​ ಮೃತ ದುರ್ದೈವಿಗಳು. ರಜೆಯ ಕಾರಣ ತೌಟನಹಳ್ಳಿಯ ಹರೀಶ್ ಸಂಬಂಧಿಕರ ಮನೆಗೆ ಬಂದ ಐವರು ಸ್ನೇಹಿತರು ತೋಟದಲ್ಲಿದ್ದ ಕೃಷಿಹೊಂಡದಲ್ಲಿ ಈಜಲು ಹೋದಾಗ ದುರ್ಘಟನೆ ನಡೆದಿದೆ. ಇದನ್ನು ಓದಿ – ಜಯಲಲಿತಾ ಸೀರೆ, ಚಪ್ಪಲಿ ಹರಾಜಿಗೆ ಕೊಡಿ – ವಕೀಲ ನರಸಿಂಹ ಮೂರ್ತಿ ಮನವಿ

ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದು ಮಾರ್ಟಿನ್, ಅಜಿಮ್, ಸ್ಟ್ಯಾಲಿನ್ ಅಪಾಯದಿಂದ ಪಾರಾಗಿದ್ದಾರೆ. ಘಟನೆ ಕುರಿತು ಚನ್ನಪಟ್ಟಣದ ಎಂ.ಕೆ ದೊಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಮೃತದೇಹಗಳನ್ನು ಚನ್ನಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

error: Content is protected !!