December 19, 2024

Newsnap Kannada

The World at your finger tips!

rina

ಮೋದಿ ಸನೀಹದಲ್ಲೇ ನಿಂತು ಮಿಂಚಿದ ಬೆಂಗಳೂರಿನ ಲೇಡಿ ಪೊಲೀಸ್ ಯಾರು ಗೊತ್ತಾ?

Spread the love

ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಕದಲ್ಲೇ ನಿಂತು ಮಿಂಚಿದ್ದ ಬೆಂಗಳೂರಿನ ಖಾಕಿ ಲೇಡಿ ಯಾರು ಗೊತ್ತಾ? ಕೂಲಿಂಗ್ ಗ್ಲಾಸ್ ಧರಿಸಿ ಮೋದಿಗೆ ಮೂರು ಅಡಿ ಸಮೀಪದಲ್ಲೇ ನೀಂತಿದ್ದ ಈ ಅಧಿಕಾರಿಯ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.

ಮೋದಿ ಪಕ್ಕ ನಿಂತ ಅಧಿಕಾರಿ ಯಾರು ಎಂದು ಜನರು ಸಾಮಾಜಿಕ ಜಾಲ ತಾಣದಲ್ಲಿ ಹುಡುಕಾಡಲು ಶುರುವಾಗಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಬ್ರೈನ್ ಸೆಂಟರ್ ಉದ್ಘಾಟನೆ ವೇಳೆ ಪ್ರಧಾನಿ ಮೋದಿ ಪಕ್ಕದಲ್ಲಿ ನಿಂತಿದ್ದ ಕರ್ನಾಟಕ ಪೊಲೀಸ್ ಸೇವೆಯ ಭದ್ರತಾ ಅಧಿಕಾರಿ ಹೆಸರು ರೀಣಾ ರಘು ಸುವರ್ಣ. ಸದ್ಯ ಜೆಸಿ ನಗರದ ಎಸಿಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನು ಓದಿ : ನಾಡದೇವತೆ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆದ ಪ್ರಧಾನಿ ಮೋದಿ

ರೀನಾ ಸುವರ್ಣ 2014 ರಲ್ಲಿ ಕರ್ನಾಟಕ ಪೊಲೀಸ್ ಸೇವೆಗೆ ಸೇರಿದ್ದರು. ಪ್ರೊಬೇಷನರಿ ಅವಧಿಯಲ್ಲಿಯೇ ಹಿರಿಯ ಅಧಿಕಾರಿಗಳ ಗಮನ ಸೆಳೆದಿದ್ದ ರೀನಾ ರಘು ಸುವರ್ಣಾ ಇದೀಗ ಪ್ರಧಾನಿ ಪಕ್ಕದಲ್ಲೇ ನಿಂತು ಭದ್ರತೆ ಒದಗಿಸಿ ಭಾರೀ ಸುದ್ದಿಯಾಗಿದ್ದಾರೆ.

ಸೋಮವಾರ ಬಳಗ್ಗೆ ಮಲ್ಲೇಶ್ವರಂ ಬಳಿ ಇರುವ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಬ್ರೈನ್ ಸೆಂಟರ್ ಪ್ರಾರಂಭಕ್ಕೆ ಪ್ರಧಾನಿ ನರೇಂದ್ರ ಮೋದಿ ಅಡಿಗಲ್ಲು ಹಾಕುವ ಕಾರ್ಯಕ್ರಮವಿತ್ತು. ಈ ವೇಳೆ ಪ್ರಧಾನಿ ಅಕ್ಕ ಪಕ್ಕ ಇದ್ದಿದ್ದು ಎನ್‌ಎಸ್ ಜಿ ಪಡೆ.

ರಾಜ್ಯದಿಂದಲೂ ಸಾಕಷ್ಟು ಪೊಲೀಸ್ ಸಿಬ್ಬಂದಿಯನ್ನು ಪ್ರಧಾನಿ ಭದ್ರತೆಗಾಗಿ ನಿಯೋಜಿಸಲಾಗಿತ್ತು. ಆದರೆ, ಮೋದಿ ಅವರಿಂದ ಕೇವಲ ಎರಡು ಮೀಟರ್ ಅಂತರದಲ್ಲಿ ನಿಂತು ಗಮನ ಸೆಳೆದಿದ್ದು ಎಸಿಪಿ ರೀನಾ ಸುವರ್ಣಾ. ಪ್ರಧಾನಿಗಳಿಗೆ ಸಮೀಪ ಹೋಗಿ ಭದ್ರತೆ ಒದಗಿಸಿದ ಅವಕಾಶ ರೀನಾ ಅವರಿಗೆ ಸಿಕ್ಕಿದ್ದು ಇದೀಗ ಭಾರೀ ಚರ್ಚೆಗೆ ನಾಂದಿ ಹಾಡಿದೆ.

ಯಾರು ಈ ರೀನಾ ರಘು ಸುವರ್ಣ:

2014 ರಲ್ಲಿ ಕರ್ನಾಟಕ ರಾಜ್ಯ ಪೊಲೀಸ್ ಸೇವೆಗೆ ಆಯ್ಕೆಯಾಗಿದ್ದರು. ವ್ಯಾಸಂಗದ ಅವಧಿಯಲ್ಲಿ ಬೆಂಗಳೂರು ವಿವಿಯಲ್ಲಿ ಚಿನ್ನದ ಪದಕ ಗಿಟ್ಟಿಸಿದ್ದ ರೀನಾ ಸುವರ್ಣ ಅವರು, ರಾಜ್ಯ ಪೊಲೀಸ್ ಸೇವೆಗೆ ಆಯ್ಕೆಯಾಗಿದ್ದರು. ಪ್ರೊಬೆಷನರಿ ಅವಧಿಯಲ್ಲಿಯೇ ನಾನಾ ಅಪರಾಧ ಪ್ರಕರಣಗಳನ್ನು ಪತ್ತೆ ಮಾಡುವ ಮೂಲಕ ಬೆಂಗಳೂರಿನಲ್ಲಿ ಸದ್ದು ಮಾಡಿದ್ದಾರೆ.

ಇದನ್ನು ಓದಿ : ಮೈಸೂರಿನಲ್ಲಿ ಪಿಎಂ ಮೋದಿ ಊಟ – ಉಪಹಾರ ಏನು ? ಸಿದ್ದತೆ ಹೇಗಿದೆ ನೋಡಿ

ಬೆಂಗಳೂರು ಗ್ರಾಮಾಂತರ ಡಿವೈಎಸ್ಪಿಯಾಗಿ ಸೇವೆ:

ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ವಿಭಾಗದಲ್ಲಿ ಕಾರ್ಯ ನಿರ್ವಹಿಸಿದ ರೀನಾ ಸುವರ್ಣ ಅವರು ಸುಮಾರು ಹನ್ನೊಂದು ಮಿಸ್ಸಿಂಗ್ ಪ್ರಕರಣ ಪತ್ತೆ ಮಾಡುವ ಮೂಲಕ ಸುದ್ದಿಯಾಗಿದ್ದರು. ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಪೋಸ್ಕೋ ಪ್ರಕರಣವನ್ನು ಒಂದು ದಿನದಲ್ಲಿ ಪತ್ತೆ ಮಾಡುವ ಮೂಲಕ ರೀನಾ ಅವರ ತನಿಖಾ ಶೈಲಿ ಅಧಿಕಾರಿಗಳ ಗಮನ ಸೆಳೆಯಿತು. ಜಿಗಣಿ ಪೊಲೀಸ್ ಠಾಣೆಯಲ್ಲಿ ಪತ್ತೆಯಾಗದೇ ಉಳಿದಿದ್ದ ಅಪರಿಚಿತ ಶವ ಪ್ರಕರಣವನ್ನು ಬೇಧಿಸಿದ್ದರು. ಹೀಗೆ ಅಪರಾಧ ಪ್ರಕರಣಗಳನ್ನು ಕ್ಷಾಣಾಕ್ಷತೆಯಿಂದ ಪತ್ತೆ ಮಾಡುವ ಮೂಲಕ ರೀನಾ ಸುವರ್ಣ ಬೆಂಗಳೂರಿನಲ್ಲಿ ಸುದ್ದಿಯಾಗಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!