March 11, 2026

Newsnap Kannada

The World at your finger tips!

modi

ನಾಡದೇವತೆ ಚಾಮುಂಡೇಶ್ವರಿ ತಾಯಿಯ ಆಶೀರ್ವಾದ ಪಡೆದ ಪ್ರಧಾನಿ ಮೋದಿ

Spread the love

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ರಾತ್ರಿ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ, ತಾಯಿ ಚಾಮುಂಡೇಶ್ವರಿಯ ದರ್ಶನ ಮಾಡಿ ಆಶೀರ್ವಾದ ಬೇಡಿದರು.

ಸತ್ತೂರು ಮಠದಿಂದ ನೇರವಾಗಿ ಚಾಮುಂಡಿ ಬೆಟ್ಟಕ್ಕೆ ಬಂದ ಪ್ರಧಾನಮಂತ್ರಿಗಳು, ವಿಶೇಷ ಪೂಜೆ ಸಲ್ಲಿಸಿದರು. ಇನ್ನೊಂದು ವಿಶೇಷ ಅಂದ್ರೆ ಮೋದಿ ಅವರು ನಾಡದೇವತೆಗೆ ಶ್ವೇತವರ್ಣದ ಸೀರೆಯನ್ನು ಕಳುಹಿಸಿದ್ದರು. ಪ್ರಧಾನಿಗಳು ನೀಡಿದ್ದ ಸೀರೆಯನ್ನೇ ದೇವಿಗೆ ಉಡಿಸಿ ಸಿಂಗಾರ ಮಾಡಲಾಗಿತ್ತು.

ದೇವಿಯ ಗರ್ಭಗುಡಿಯ ಮುಂದೆ ತಾಯಿಯ ಎದುರಿನಲ್ಲಿ ಕುಳಿತು ಪ್ರಧಾನಿ ಮೋದಿ ಧ್ಯಾನ ಮಾಡಿದರು.

ಇದನ್ನು ಓದಿ : ಮೈಸೂರಿನಲ್ಲಿ ಪಿಎಂ ಮೋದಿ ಊಟ – ಉಪಹಾರ ಏನು ? ಸಿದ್ದತೆ ಹೇಗಿದೆ ನೋಡಿ

ದೇವರ ದರ್ಶನದ ವಿಡಿಯೋ ಇಲ್ಲಿದೆ ನೋಡಿ:

ನಾಳೆ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಕಳೆದ 8 ವರ್ಷಗಳಿಂದ ಯೋಗ ದಿನವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಗುತ್ತಿದೆ. 8ನೇ ಅಂತಾರಾಷ್ಟ್ಟೀಯ ಯೋಗದಿನಕ್ಕೆ ಮೈಸೂರು ಸಾಕ್ಷಿಯಾಗಲಿದೆ.

error: Content is protected !!