ಐಪಿಎಲ್ 20-20ಯ 40ನೇ ಪಂದ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧ 59 ರನ್‌ಗಳ ಜಯ ಗಳಿಸಿತು.
ದುಬೈನ ಶೇಕ್ ಜಯೇದ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಡಿಸಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡು ಪಂದ್ಯದಲ್ಲಿ ಮುಗ್ಗರಿಸಿತು.
ಕೆಕೆಆರ್ ತಂಡದಿಂದ ಎಸ್. ಗಿಲ್ ಹಾಗೂ ಎನ್. ರಾಣಾ ಆರಂಭಿಕ ಆಟಗಾರರಾಗಿ ಮೈದಾನಕ್ಕೆ ಬಂದರು. ಗಿಲ್ ಕೇವಲ 9 ರನ್ ಗಳಿಕೆ ಮಾಡಿ ಪೆವಿಲಿಯನ್ ಸೇರಿದರು. ಆದರೆ ರಾಣಾ ಅವರು ತಂಡದ ಗೆಲುವಿಗೆ ಟೊಂಕ ಕಟ್ಟಿ ಮೈದಾನಲ್ಲೇ ಆದಷ್ಟು ಹೊತ್ತು ನಿಂತು ಆಟವಾಡಿದರು. ರಾಣಾ 53 ಎಸೆತಗಳಿಗೆ 81 ರನ್‌ಗಳ ಮೊತ್ತವನ್ನು ತಂಡಕ್ಕೆ ನೀಡಿದರು. ನಂತರ ಬಂದ ನರೈನ್ ಕೂಡ 32 ಎಸೆತಗಳಿಗೆ 64 ರನ್‌ಗಳ ಕೊಡುಗೆಯನ್ನು ತಂಡಕ್ಕಿತ್ತರು. ಕೆಕೆಆರ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 194 ರನ್ ಗಳಿಸಿತು.
ಇತ್ತ ಡಿಸಿ ತಂಡದಿಂದ ಅಜಿಂಕ್ಯ ರಹಾಬೆ ಮತ್ತು ಶಿಖರ್ ಧವನ್ ಮೈದಾನಕ್ಕಿಳಿದರು. ಆದರೆ ಆರಂಭ ಪೇಲವವಾಗಿತ್ತು. ಈ ಹಿಂದಿನ ಆಟಗಳಲ್ಲಿದ್ದ ಧವನ್ ಅವರ ಹಿಡಿತ ಇಂದು ಸಡಿಲಿಸಿತ್ತು. ರಹಾನೆ ಶೂನ್ಯಕ್ಕೆ ಹಾಗೂ ಧವನ್ 6 ರನ್‌ಗಳಿಗೆ ಒಎವಿಲಿಯನ್ ಸೇರಿದರು. ತಂಡದ ನಾಯಕ ಎಸ್. ಐಯ್ಯರ್ 38 ಎಸೆತಗಳಿಗೆ 47 ರನ್ ಗಳಿಕೆ ಮಾಡಿದರಾದರೂ ತಂಡ ಪಂದ್ಯದಲ್ಲಿ ಪರಾಭವಗೊಳ್ಳಲೇ ಬೇಕಾಯಿತು. ಉಳಿದ ಆಟಗಾರರೂ ಸಹ ತಂಡಕ್ಕೆ ಸರಿಯಾದ ಸಹಕಾರ ನೀಡಲಿಲ್ಲ. ಡಿಸಿ ತಂಡ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 135 ರನ್ ಗಳಿಸಿ ಪಂದದಲ್ಲಿ ಪಲಾಯನಗೈಯಿತು.
More Stories
ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ