December 25, 2024

Newsnap Kannada

The World at your finger tips!

film

ತೆರೆಗೆ ಬರಲಿರುವ ಕಾಫಿ ಡೇ ಸಿದ್ಧಾರ್ಥ್‌ ಬದುಕಿನ ಚಿತ್ರ 

Spread the love

ಸಿದ್ಧಾರ್ಥ ಕಾಫಿ ಕಿಂಗ್ ಎಂದೇ ಜನಪ್ರಿಯ. ವಿಶ್ವದಾದ್ಯಂತ ಕೆಫೆ ಕಾಫಿ ಡೇ ಮೂಲಕ ಭಾರತೀಯ ಕಾಫಿ ಕಂಪು ಪಸರಿಸಿದ ಕೀರ್ತಿ ವಿ.ಜಿ. ಸಿದ್ಧಾರ್ಥ ಅವರದ್ದು. ಕಾಫಿ ಡೇ ಸ್ಥಾಪಿಸುವ ಮೂಲಕ ಚಿಕ್ಕಮಗಳೂರು ಜಿಲ್ಲೆಯ ಕಾಫಿ ಘಮವನ್ನು ವಿಶ್ವದ ಹಲವೆಡೆ ಪಸರಿಸಿದ ಕಾಫಿ ದೊರೆ ಸಿದ್ಧಾರ್ಥ. ಈ ಮೂಲಕ ಒಂದು ಉದ್ಯಮವನ್ನೇ ಹುಟ್ಟು ಹಾಕಿ ಅನೇಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸಿದವರು.

1996ರಲ್ಲಿ ಕೆಫೆ ಕಾಫಿ ಡೇ ಪರಿಚಯಿಸಿದ ಸಿದ್ಧಾರ್ಥ್‌ ವಿವಿಧ ರಾಷ್ಟ್ರಗಳಿಗೆ ಕಾಫಿಯ ಪರಿಮಳ ಹಬ್ಬಿಸಿದ್ದರು. ವಿಯೆನ್ನಾ, ಮಲೇಷ್ಯಾ, ಸಿಂಗಪುರ, ಝಕೊಸ್ಲೊವಾಕಿಯ ಸಹಿತ 7 ರಾಷ್ಟ್ರಗಳಲ್ಲಿ 1,800ಕ್ಕೂ ಹೆಚ್ಚು ಕಾಫಿ ಡೇ ಕೆಫೆಗಳಿವೆ.

ಅವರು ಉದ್ಯಮ ಕಟ್ಟಿದ ಪರಿ, ಅವರ ಜೀವನ ಹಲವರಿಗೆ ಇಂದಿಗೂ ಮಾದರಿ.ಅಷ್ಟೆಲ್ಲಾ ಸಾಧನೆ ಮಾಡಿ ಸಾಧಕ ಎನಿಸಿಕೊಂಡ ಸಿದ್ಧಾರ್ಥ ದುರಾದೃಷ್ಟವಶಾತ್ ನಮ್ಮೊಂದಿಗೆ ಇಲ್ಲ, ಈ ಕಾರಣಕ್ಕೆ ವಿ ಜಿ ಸಿದ್ಧಾರ್ಥ್ ಅವರ ಕಥೆ ಸಿನಿಮಾ ರೂಪದಲ್ಲಿ ತೆರೆಯ ಮೇಲೆ ಬರಲಿದೆ. ವಿ.ಜಿ.ಸಿದ್ಧಾರ್ಥ ಜೀವನವನ್ನ ಸಿನಿಮಾ ಮಾಡಲು ಟೀ ಸೀರೀಸ್ ಸಂಸ್ಥೆ ಮುಂದಾಗಿದೆ. ಇದನ್ನು ಓದಿ – ಸೇನೆಗೆ ಪುಂಡರ ಅಗತ್ಯವಿಲ್ಲ, ರೈಲು ಸುಡುವವರು ಸೇನೆಗೆ ಸೂಕ್ತರಲ್ಲ: ಮಾಜಿ ಜನರಲ್ ವಿಪಿ ಮಲೀಕ್

ತನಿಖಾ ಪತ್ರಕರ್ತರಾದ ರುಕ್ಮಿಣಿ ರಾವ್‌ ಮತ್ತು ಪ್ರೋಸೆನ್‌ಜಿತ್‌ ದತ್ತಾ ಅವರು ಬರೆದ ‘ಕಾಫಿ ಕಿಂಗ್‌- ದಿ ಸ್ವಿಫ್ಟ್‌ ರೈಸ್‌ ಆಯಂಡ್‌ ಸಡನ್‌ ಡೆತ್‌ ಆಫ್‌ ಕೆಫೆ ಕಾಫಿ ಡೇ ಫೌಂಡರ್‌ ವಿ.ಜಿ. ಸಿದ್ಧಾರ್ಥ್‌’ ಕೃತಿ ಆಧರಿಸಿ ಈ ಚಿತ್ರ ತೆರೆಗೆ ಬರಲಿದೆ. ಕೃತಿಯ ಆಡಿಯೋ ಹಕ್ಕುಗಳನ್ನು ಚಿತ್ರ ನಿರ್ಮಾಣ ಸಂಸ್ಥೆಗಳು ಈಗಾಗಲೇ ಪಡೆದಿವೆ.

ಸಿದ್ಧಾರ್ಥ ಜೀವನ, ಉದ್ಯಮಿಯಾಗಿ ಅವರು ಬೆಳೆದ ರೀತಿ, ಉದ್ಯಮದಲ್ಲಿ ಅವರಿಗಾದ ನಷ್ಟ, ಆರ್ಥಿಕ ಬಿಕ್ಕಟ್ಟು, ಕೊನೆಗೆ ಅವರ ಸಾವಿನ ಕಾರಣಗಳನ್ನು ಬಿಚ್ಚಿಡಲಿದೆ. ಇದೇ ಅಂಶಗಳನ್ನು ಮುಖ್ಯವಾಗಿ ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತದೆ. ಮುಖ್ಯವಾಗಿ ಅವರ ನಷ್ಟ ಮತ್ತು ಸಾವಿನ ವಿಷಯ ಸಿನಿಮಾದಲ್ಲಿ ಹೈಲೈಟ್‌ ಆಗಿರಲಿದೆ. ಇದನ್ನು ಓದಿ – ಸ್ಯಾಂಡಲ್​ವುಡ್ ನಟಿಗೆ ವಿಲನ್ ಆದ ವೈದ್ಯೆ- ಗೊಂಬೆಯಂತಿದ್ದ ಮುಖ ಗೂಬೆಯಂತೆ ಮಾಡಿದಳು ವೈದ್ಯೆ !

ಸಿದ್ಧಾರ್ಥ ಒಬ್ಬ ಯಶಸ್ವಿ ಉದ್ಯಮಿ ಆಗಿದ್ದರು. ಕಾಫಿ ಡೇ ಎನ್ನುವ ಸಾಮ್ರಾಜ್ಯ ಕಟ್ಟಿಕೊಂಡು ಕಿಂಗ್ ಆಗಿದ್ದರು. ಅನೇಕರಿಗೆ ಉದ್ಯಮ ನೀಡುವ ಮೂಲಕ ಆಸರೆಯಾಗಿದ್ದರು. ಆದರೂ ಅವರ ಬದುಕು ದುರಂತ ಅಂತ್ಯ ಕಂಡಿದೆ.

ಉದ್ಯಮದಲ್ಲಿ ಸಿದ್ಧಾರ್ಥ ನಷ್ಟ ಅನುಭವಿಸಿದ್ದು ,2019ರ ಜುಲೈ 29ರಂದು ಸಿದ್ಧಾರ್ಥ್‌ ಅವರು ಮಂಗಳೂರು ಸಮೀಪ ನೇತ್ರಾವತಿ ನದಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದರು. ಹಾಗಾಗಿ ಸಿನಿಮಾದಲ್ಲಿ ಅವರ ಬದುಕಿನ ಪ್ರಮುಖ ಘಟ್ಟಗಳು ತೆರೆಮೇಲೆ ಮೂಡಲಿವೆ.

Copyright © All rights reserved Newsnap | Newsever by AF themes.
error: Content is protected !!