October 18, 2024

Newsnap Kannada

The World at your finger tips!

WhatsApp Image 2022 06 15 at 2.32.31 PM

5G ನೆಟ್ ವರ್ಕ್ ಹರಾಜಿಗೆ ಕೇಂದ್ರ ಸಂಪುಟ ಅಸ್ತು : 10 ಪಟ್ಟು ನೆಟ್ ವರ್ಕ್ ಸ್ಪೀಡ್ !

Spread the love

5G ನೆಟ್​​ವರ್ಕ್​ ಹರಾಜಿಗೆ ಬುಧವಾರ ಕೇಂದ್ರ ಕ್ಯಾಬಿನೆಟ್ ಅಸ್ತು ಎಂದಿದೆ ಶೀಘ್ರದಲ್ಲೇ ದೇಶದಲ್ಲಿ 5G ನೆಟ್ವರ್ಕ್ ಸೇವೆಗಳು ಆರಂಭವಾಗುವ ಮುನ್ಸೂಚನೆ ಸಿಕ್ಕಿದೆ. ಇದು 4G ಗಿಂತ ಸುಮಾರು 10 ಪಟ್ಟು ವೇಗವಾಗಿರಲಿದೆ. ಟೆಲಿಕಾಂ ಸೇವಾ ಪೂರೈಕೆದಾರರಿಗೆ ವ್ಯಾಪಾರ ವೆಚ್ಚವನ್ನು ಕಡಿಮೆ ಮಾಡಲು 5G ನೆಟ್​​ವರ್ಕ್ ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ.

72 GHz ಗಿಂತ ಹೆಚ್ಚಿನ 5G ಸೇವೆಯನ್ನ 20 ವರ್ಷಗಳ ಅವಧಿಗೆ ಹರಾಜು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ದೂರಸಂಪರ್ಕ ಇಲಾಖೆಯು 5G ಸ್ಪೆಕ್ಟ್ರಮ್ ಹರಾಜು ಪ್ರಸ್ತಾಪಿಸಿತ್ತು.

. ಕೇಂದ್ರ ಸಂಪುಟದ ನಿರ್ಧಾರದಂತೆ ಹರಾಜು ಪ್ರಕ್ರಿಯೆ ಜುಲೈನಲ್ಲಿ ಶುರುವಾಗಲಿದೆ. ಒಟ್ಟು 72097.85 MHz ಸ್ಪೆಕ್ಟ್ರಮ್ ಅನ್ನು ಕೇಂದ್ರ ಸರ್ಕಾರ ಹರಾಜು ಮಾಡಲಿದೆ. ಜುಲೈ ಅಂತ್ಯದ ವೇಳೆಗೆ 5G ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಪೂರ್ಣಗೊಳ್ಳಲಿದೆ.

ಇದನ್ನು ಓದಿ – MGM ಕಂಪನಿ ಮೇಲೆ ಐಟಿ ದಾಳಿ; ಬೆಂಗಳೂರು ಸೇರಿ ಒಟ್ಟು 50 ಕಡೆ ಶೋಧ

ಯಾವ ಕಂಪನಿ ಪಾಲಾಗುತ್ತೆ..?
ಮೂರು ಪ್ರಮುಖ ಕಂಪನಿಗಳಾದ ವೊಡಾಫೋನ್ ಐಡಿಯಾ, ಭಾರ್ತಿ ಏರ್‌ಟೆಲ್ ಲಿಮಿಟೆಡ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹರಾಜಿನಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಯಶಸ್ವಿ ಬಿಡ್‌ದಾರರು 5G ಸ್ಪೆಕ್ಟ್ರಮ್ ಅನ್ನು 20 ವರ್ಷಕ್ಕೆ ಇಎಂಐ ಮೂಲಕ ಖರೀದಿಸಲಿದ್ದಾರೆ. 5G ಸೇವೆಯು ಸಂಪೂರ್ಣ ಇಕೋ ಸಿಸ್ಟಮ್ ಆಗಿರಲಿದೆ.

Copyright © All rights reserved Newsnap | Newsever by AF themes.
error: Content is protected !!