ನಾಳೆ ವಿಧಾನ ಪರಿಷತ್ ನ 4 ಸ್ಥಾನಗಳಿಗೆ ಚುನಾವಣೆಗೆ ಸಿದ್ದತೆಗಳು ಪೂರ್ಣಗೊಂಡಿವೆ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಶನಿವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ ನಾಳೆ ಮತದಾನ ನಡೆಯಲಿದೆ.
ಚುನಾವಣೆಯ ಮಾಹಿತಿ :
- ಚುನಾವಣೆ ನಡೆಯುವ 48 ಗಂಟೆ ಮೊದಲು ಶೂನ್ಯ ಅವಧಿ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಬಹಿರಂಗ ಪ್ರಚಾರಕ್ಕೆ ಅವಕಾಶ ಇರುವುದಿಲ್ಲ.
- ಇಂದು ಸಂಜೆಯವರೆಗೆ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಕೈಗೊಳ್ಳಲು ಅವಕಾಶ ಇದೆ.
- ಸೋಮವಾರ ಬೆಳಗ್ಗೆ 8 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಮತದಾನ ಪ್ರಕ್ರಿಯೆ ನಡೆಯಲಿದೆ.
- ಜೂನ್ 15 ರ ಬುಧವಾರ ಮತ ಎಣಿಕೆ ನಡೆದು, ಫಲಿತಾಂಶ ಪ್ರಕಟವಾಗಲಿದೆ.
- ವಾಯುವ್ಯ ಪದವೀಧರ ಕ್ಷೇತ್ರ, ಪಶ್ಚಿಮ ಶಿಕ್ಷಕರ ಕ್ಷೇತ್ರ, ವಾಯುವ್ಯ ಶಿಕ್ಷಕರ ಕ್ಷೇತ್ರ, ದಕ್ಷಿಣ ಪದವೀಧರರ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ಪ್ರಕ್ರಿಯೆ ನಡೆಸಲು ಚುನಾವಣಾ ಆಯೋಗ ಸಕಲ ಸಿದ್ದತೆ ಕೈಗೊಂಡಿದೆ.
ಎಲ್ಲೆಲ್ಲಿ ಯಾರು ಯಾರು ಸ್ಪರ್ಧೆ?
ಪಶ್ಚಿಮ ಶಿಕ್ಷಕರ ಕ್ಷೇತ್ರ
- ಬಿಜೆಪಿ-ಬಸವರಾಜ ಹೊರಟ್ಟಿ
- ಕಾಂಗ್ರೆಸ್-ಬಸವರಾಜ ಗುರಿಕಾರ
- ಜೆಡಿಎಸ್ -ಶ್ರೀಶೈಲ ಗಡದಿನ್ನಿ
ವಾಯುವ್ಯ ಪದವೀಧರ ಕ್ಷೇತ್ರ
- ಬಿಜೆಪಿ-ಹಣಮಂತ ನಿರಾಣಿ
- ಕಾಂಗ್ರೆಸ್-ಸುನೀಲ ಸಂಕ
ದಕ್ಷಿಣ ಪದವೀಧರ ಕ್ಷೇತ್ರ
- ಬಿಜೆಪಿ-ಎಂ.ವಿ. ರವಿಶಂಕರ್
- ಕಾಂಗ್ರೆಸ್-ಜಿ.ಎಂ. ಮಧು
- ಜೆಡಿಎಸ್-ಎಚ್.ಕೆ. ರಾಮು
ವಾಯುವ್ಯ ಶಿಕ್ಷಕರ ಕ್ಷೇತ್ರ
- ಬಿಜೆಪಿ- ಅರುಣ್ ಶಹಾಪುರ
- ಕಾಂಗ್ರೆಸ್-ಪ್ರಕಾಶ್ ಹುಕ್ಕೇರಿ
- ಜೆಡಿಎಸ್-ಚಂದ್ರಶೇಖರ್ ಲೋಣಿ
ಕನ್ನಡ ಚಳವಳಿ ಪಕ್ಷ-ವಾಟಾಳ್ ನಾಗರಾಜ್
ಇದನ್ನು ಓದಿ – ಅಪಘಾತದಲ್ಲಿ ಮೆದುಳು ನಿಷ್ಕ್ರಿಯಗೊಂಡ ಯುವಕನ ಅಂಗಾಂಗ ದಾನ
ಮತದಾನಕ್ಕೆ ಗುರುತಿನ ಚೀಟಿ:
- ಭಾರತ ಚುನಾವಣಾ ಆಯೋಗದ ನಿರ್ದೇಶನಗಳಂತೆ ಮತದಾನ ದಿನದಂದು ಅರ್ಹ ಮತದಾರರು ತಮ್ಮ ಮತವನ್ನು ಚಲಾಯಿಸಲು ಚುನಾವಣಾ ಗುರುತಿನ ಚೀಟಿ ಅಥವಾ ಚುನಾವಣಾ ಆಯೋಗ ನಿಗದಿಪಡಿಸಿರುವ ದಾಖಲೆಗಳನ್ನು ಸಹ ಬಳಸಿ ಮತ ಚಲಾಯಿಸಬಹುದು.
- ಆಧಾರ ಗುರುತಿನ ಚೀಟಿ, ವಾಹನ ಚಾಲನಾಪತ್ರ, ಪ್ಯಾನ್ ಕಾರ್ಡ್, ಇಂಡಿಯನ್ ಪಾಸ್‌ಪೊರ್ಟ, ಸೇವಾ ಗುರುತಿನ ಪತ್ರ,ಎಂ.ಪಿ.,ಎ.ಎಲ್.ಎ.,ಎ.ಎಲ್.ಸಿ ಕಚೇರಿ ಗುರುತಿನಪತ್ರ, ಅರ್ಹ ಮತದಾರರಾಗಿರುವ ಶಿಕ್ಷಕರಿಗೆ ಅವರ ಶೈಕ್ಷಣಿಕ ಸಂಸ್ಥೆಗಳು ನೀಡಿರುವ ಸೇವಾ ಗುರುತಿನಪತ್ರ, ವಿಶ್ವವಿದ್ಯಾಲಯಗಳು ನೀಡಿರುವ ಪದವಿ, ಡಿಪ್ಲೊಮಾ ಪ್ರಮಾಣಪತ್ರಗಳ ಮೂಲಪ್ರತಿ ಹಾಗೂ ಸಕ್ಷಮ ಪ್ರಾಧಿಕಾರ ನೀಡಿರುವ ದೈಹಿಕ ಅಂಗವಿಕಲ ಪ್ರಮಾಣಪತ್ರವನ್ನು ಮತಗಟ್ಟ ಅಧಿಕಾರಿಗಳಿಗೆ ತೊರಿಸಿ, ಮತ ಚಲಾಯಿಸಬಹುದು.
ಎಷ್ಟು ದೂರು ದಾಖಲು :
ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಆರೋಪದಡಿ ಈವರೆಗೆ 516 ಪ್ರಕರಣಗಳು ದಾಖಲಾಗಿವೆ. ಚಾಮರಾಜನಗರದಲ್ಲಿ 162, ಹಾಸನದಲ್ಲಿ 63, ಮಂಡ್ಯದಲ್ಲಿ 178, ಮೈಸೂರಿನಲ್ಲಿ 113 ಪ್ರಕರಣ ದಾಖಲಾಗಿವೆ.
- ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )
- ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
- ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
- ಎಪಿಗಾಮಿಯಾ ಸಹ-ಸಂಸ್ಥಾಪಕ ರೋಹನ್ ಮಿರ್ಚಂದಾನಿ ನಿಧನ
- ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
More Stories
ಹೊರರಾಜ್ಯದ ಯುವತಿಯರನ್ನ ಕರೆಸಿ ಹೈಟೆಕ್ ವೇಶ್ಯಾವಾಟಿಕೆ ದಂಧೆ: ಆರೋಪಿ ಬಂಧನ
ಬೆಂಗಳೂರಿನಲ್ಲಿ ಮಹಿಳೆಗೆ 30 ಲಕ್ಷ ರೂ. ವಂಚನೆ!
ಜನವರಿ 23, 24, 25 ರಂದು ಅಂತರಾಷ್ಟ್ರೀಯ ಸಿರಿಧಾನ್ಯ ಮೇಳ ಜರುಗಲಿದೆ: ಎನ್ ಚಲುವರಾಯಸ್ವಾಮಿ