December 19, 2024

Newsnap Kannada

The World at your finger tips!

WhatsApp Image 2022 06 09 at 9.27.42 AM

Shalini wrote death note to police, audio available

ಪೋಷಕರೇ ನನ್ನನ್ನು ಹತ್ಯೆ ಮಾಡುತ್ತಾರೆ – ಶಾಲಿನಿ ಪೊಲೀಸರಿಗೆ ಬರೆದ ಪತ್ರ, ಆಡಿಯೋ ಲಭ್ಯ

Spread the love

ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿ ಗ್ರಾಮದಲ್ಲಿ ನಡೆದ ಮರ್ಯಾದ ಹತ್ಯೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

ಇದನ್ನು ಓದಿ: ವ್ಯಕ್ತಿಯ ಮೇಲೆ ಚಿತ್ರನಟ ಜೈಜಗದೀಶ್ ಹಲ್ಲೆ? ಪೊಲೀಸರಿಗೆ ದೂರು

ಯುವತಿಗೆ ತನ್ನ ಸಾವು ಯಾರಿಂದ ಬರುತ್ತದೆ ಎಂಬ ವಿಚಾರ ಮೊದಲೇ ತಿಳಿದಿತ್ತು. ತನ್ನ ಸಾವಿಗೆ ಕಾರಣ ಯಾರೆಂದು ಬಹಿರಂಗ ಪಡಿಸಿರುವ ಆಡಿಯೋ ಕೂಡ ಲಭ್ಯವಾಗಿದೆ.

ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ ಅಪ್ರಾಪ್ತ ಮಗಳನ್ನು ತಂದೆ ಮತ್ತು ತಾಯಿ ಇಬ್ಬರು ಸೇರಿ ಕೊಲೆ ಮಾಡಿದ್ದರು.

ದ್ವಿತೀಯ ಪಿಯು ವಿದ್ಯಾರ್ಥಿನಿ ಶಾಲಿನಿ (17) ಮಂಜುನಾಥ್ ಅವರನ್ನು ಪ್ರೀತಿಸುತ್ತಿದ್ದಳು. ಈ ವಿಚಾರ ತಿಳಿದು ತಂದೆ ಸುರೇಶ್ ಹಾಗೂ ತಾಯಿ ಬೇಬಿ ಮಗಳನ್ನು ಹತ್ಯೆಗೈದಿದ್ದರು. ನಂತರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.

ಆಡಿಯೋ ಲಭ್ಯ :

ಶಾಲಿನಿ ಹತ್ಯೆಗೂ ಮುನ್ನ ತನ್ನ ಪ್ರಿಯಕರ ಮಂಜುನಾಥ್ ನೊಂದಿಗೆ ಮಾತನಾಡಿರುವ ಆಡಿಯೋ ಪೊಲೀಸರಿಗೆ ಲಭ್ಯವಾಗಿದೆ ನಾನೇನಾದರೂ ಸತ್ತರೆ ಅದಕ್ಕೆ ನಮ್ಮ ಅಪ್ಪ, ಅಮ್ಮನೇ ಕಾರಣ. ನನ್ನನ್ನು ಕಿಡ್ನಾಪ್ ಮಾಡಿಸುವ ಪ್ಲ್ಯಾನ್ ಮಾಡಿದ್ದಾರೆ. ಬಾಲ ಮಂದಿರದಿಂದ ನೀನು ನಿನ್ನಷ್ಟದ ಹಾಗೇ ಇರು ಎಂದು ಕರೆದುಕೊಂಡು ಬಂದರು.

ಆದರೆ ಪಾಂಡವಪುರದಲ್ಲಿ ಕೆಲಸಕ್ಕೆ ಕಳುಹಿಸುತ್ತಿದ್ದಾರೆ ಎಂದು ಈ ಕುರಿತಂತೆ ಪಿರಿಯಾಪಟ್ಟಣ ಪೊಲೀಸರಿಗೆ ಮೂರು ಪುಟಗಳ ಸುದೀರ್ಘ ಪತ್ರವನ್ನು ಯುವತಿ ಬರೆದಿದ್ದಾಳೆ. ಅಲ್ಲದೇ ತಾನು ಮಾತನಾಡಿರುವುದನ್ನು ರೆಕಾರ್ಡ್ ಮಾಡಿ ಪಿರಿಯಾಪಟ್ಟಣ ಪೊಲೀಸರಿಗೆ ಕೊಡುವಂತೆ ಪ್ರಿಯಕರ ಮಂಜುನಾಥ್‍ಗೂ ಕೂಡ ತಿಳಿಸಿದ್ದಾಳೆ.

WhatsApp Image 2022 06 09 at 9.26.55 AM
death note
WhatsApp Image 2022 06 09 at 9.27.08 AM
death note
WhatsApp Image 2022 06 09 at 9.27.28 AM
death note
Copyright © All rights reserved Newsnap | Newsever by AF themes.
error: Content is protected !!