December 19, 2024

Newsnap Kannada

The World at your finger tips!

police 1

ಮಂಡ್ಯ – ಪಾಂಡವಪುರ, ಅರಕೆರೆಯಲ್ಲಿ ಇಬ್ಬರು ಮಹಿಳೆಯರ ಅರ್ಧ ದೇಹಗಳು ಪತ್ತೆ

Spread the love

ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಹಿಳೆಯರನ್ನು ಬೀಭತ್ಸವಾಗಿ ಕೊಲೆ ಮಾಡಿ ಅರ್ಧ ದೇಹ ಕತ್ತರಿಸಿರುವ ಶವಗಳು ಪತ್ತೆಯಾಗಿರುವ ಘಟನೆ ಪಾಂಡವಪುರ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ.

ಇದನ್ನು ಓದಿ –25 ಕೋಟಿ ರೂ.ಮೌಲ್ಯದ ಸರ್ಕಾರಿ ಗೋಮಾಳ ಕಬಳಿಕೆ ಪ್ರಕರಣ : ಸಿಓಡಿ ತನಿಖೆಗೆ ವಹಿಸಿ : ಯೋಗೀಶ್ವರ್ ಸಿ ಎಂ ಗೆ ಮನವಿ

ಪಾಂಡವಪುರ ತಾಲೂಕಿನ ಬೇಬಿಕೆರೆ ಹಾಗೂ ಕೆ.ಬೆಟ್ಟಹಳ್ಳಿ ಮಾರ್ಗ ಮಧ್ಯೆ ಇರುವ ಬೇಬಿ ಕೆರೆಯ ಬಳಿ 35 ವರ್ಷದ ಮಹಿಳೆಯ ಹೊಟ್ಟೆಯಿಂದ ಕೆಳಭಾಗದ ಶವ ಅರ್ಧ ಕತ್ತರಿಸಿರುವ ರೂಪದಲ್ಲಿ ಸಿಕ್ಕಿದೆ. ಮತ್ತೊಂದು ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಗ್ರಾಮದ ಸಿಡಿಎಸ್ ನಾಲೆಯಲ್ಲಿ ತೇಲಿ ಬಂದಿರುವ ಮಹಿಳೆಯ ಅರ್ಧ ಭಾಗದ ದೇಹ ರೈತನ ಜಮೀನಿನಲ್ಲಿ ಸಿಕ್ಕಿದೆ.

ಎರಡು ಪ್ರಕರಣಗಳಲ್ಲಿ ಮಹಿಳೆಯರ ಹೊಟ್ಟೆಯ ಕೆಳಭಾಗದ ದೇಹದ ಕತ್ತರಿಸಿದ ಭಾಗಗಳು ದೊರೆತಿದೆ. ಎರಡೂ ಶವಗಳ ಕಾಲುಗಳನ್ನು ಕಟ್ಟಿ ದೇಹದ ಅರ್ಧಭಾಗವನ್ನು ಕತ್ತರಿಸಿ ಚೀಲದಲ್ಲಿ ಹಾಕಿ ದುಷ್ಕರ್ಮಿಗಳು ನೀರಿಗೆ ಎಸೆದು ಹೋಗಿದ್ದಾರೆ.

ಎರಡು ಕಡೆ ಪ್ರತ್ಯೇಕವಾಗಿ ದೇಹದ ಅರ್ಧಭಾಗ ಪತ್ತೆಯಾಗಿರುವ ಮಾಹಿತಿ ಪಡೆದ ಪಾಂಡವಪುರ ಹಾಗೂ ಅರೆಕೆರೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

ಎರಡೂ ಕಡೆ ಸಿಕ್ಕಿರುವ ಅರ್ಧ ಕತ್ತರಿಸಿದ ಮೃತ ದೇಹಗಳ ಹೊಟ್ಟೆಯಿಂದ ಕೆಳಗಿನ ಭಾಗ ಮಾತ್ರ ಪತ್ತೆಯಾಗಿದೆ. ಉಳಿದ ಭಾಗ ಇನ್ನೂ ಸಿಕ್ಕಿಲ್ಲ. ಸಿಕ್ಕಿರುವ ಎರಡೂ ಶವಗಳ ಕಾಲುಗಳನ್ನು ಹಗ್ಗದಿಂದ ಕಟ್ಟಲಾಗಿದೆ ಬೇರೆ ಕಡೆ ಕೊಲೆ ಮಾಡಿ ಬಳಿಕ ದೇಹ ಕತ್ತರಿಸಿ ಸಾಕ್ಷ್ಯ ನಾಶಕ್ಕೆ ದುಷ್ಕರ್ಮಿಗಳು ಯತ್ನಿಸಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಈ ಎರಡು ಶವಗಳ ಉಳಿದರ್ಧ ದೇಹದ ಪತ್ತೆಗೆ ಶೋಧ ಕಾರ್ಯ ಆರಂಭಿಸಿದ್ದಾರೆ. ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರು ಮಹಿಳೆಯರ ಕತ್ತರಿಸಿದ ದೇಹ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಎರಡು ಸ್ಥಳಗಳಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತಂಡ ರಚಿಸಲಾಗಿದೆ.

Copyright © All rights reserved Newsnap | Newsever by AF themes.
error: Content is protected !!