December 19, 2024

Newsnap Kannada

The World at your finger tips!

WhatsApp Image 2022 06 08 at 9.26.55 AM

Open Offer on social network

ಮುತಾಲಿಕ್‌, ಯಶ್‌ ಪಾಲ್‌ ತಲೆ ತೆಗೆದರೆ 20 ಲಕ್ಷ ರು – ಸಾಮಾಜಿಕ ಜಾಲತಾಣದಲ್ಲಿ ಓಪನ್‌ ಅಫರ್

Spread the love

ಪ್ರಮೋದ್‌ ಮುತಾಲಿಕ್‌ ಹಾಗೂ ಯಶ್‌ ಪಾಲ್‌ ಸುವರ್ಣ ಇವರಿಬ್ಬರ ತಲೆ ಕಡಿದರೆ 20 ಲಕ್ಷ ನೀಡುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಆಫರ್ ನೀಡಿ‌ ಬೆದರಿಕೆ ಹಾಕಿರುವ ಪೋಸ್ಟ್‌ ವೈರಲ್‌ ಆಗಿದೆ.

ಇದನ್ನು ಓದಿ –ಆಂಜನೇಯಸ್ವಾಮಿ ದೇವಾಲಯ ಧ್ವಂಸ : ವಿಗ್ರಹವನ್ನು ಕಾವೇರಿಗೆ ಎಸೆಯಲಾಗಿತ್ತು – ಪುರಾತತ್ವ ಇಲಾಖೆಯ ದಾಖಲೆಯಲ್ಲಿ ಉಲ್ಲೇಖ

ʻಈ ಎರಡು ತಲೆ ಕಡಿದರೆ 20 ಲಕ್ಷ..! ಒಂದು ತಲೆಗೆ 10 ಲಕ್ಷ, ಇನ್ನೊಂದು ತಲೆಗೆ 10 ಲಕ್ಷ. ಕೂಡಲೇ ನಿಮ್ಮ ಖಾತೆಗೆ ಜಮಾ ಆಗುತ್ತದೆʼ

ಹೀಗಂತ ಹಂದಿಗೆ ಹೋಲಿಕೆ ಮಾಡಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಮತ್ತು ಉಡುಪಿಯ ಸರ್ಕಾರಿ ಮಹಿಳಾ ಪದವಿಪೂರ್ವ ಕಾಲೇಜಿನ ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಕೊಲೆ ಬೆದರಿಕೆ ಬಂದಿದೆ.

ಈ ಎರಡು ತಲೆ ಉರುಳೋದು ಖಚಿತ ಎಂದು ಮಾರಿಗುಡಿ ಎಂಬ ಪೇಜ್‌ನಲ್ಲಿ ಧಮ್ಕಿ ಕೊಡಲಾಗಿದೆ.
ಉಡುಪಿಯಲ್ಲಿ ಹಿಜಬ್ ಸಂಘರ್ಷ ನಡೆದಾಗ ಯಶ್ ಪಾಲ್, ಸಿಎಫ್‌ಐ, ವಿದ್ಯಾರ್ಥಿಗಳನ್ನು ಟೆರರಿಸ್ಟ್‌ಗಳು ಎಂದಿದ್ದರು.

ಕಾನೂನು ಹೋರಾಟದ ನೇತೃತ್ವ ವಹಿಸಿದ್ದರು. ರಾಜ್ಯದ ಧರ್ಮ ದಂಗಲ್‌ನಲ್ಲಿ ಪ್ರಮೋದ್ ಮುತಾಲಿಕ್ ಸಂಪೂರ್ಣವಾಗಿ ತೊಡಗಿಸಿಕೊಂಡಿರುವುದು ಈ ಧಮ್ಕಿಗೆ ಕಾರಣ ಎನ್ನಲಾಗಿದೆ. ಈ ವಿಚಾರವನ್ನು ಕಾಪು ಬಿಜೆಪಿ ಯುವ ಮೋರ್ಚಾ ಲಿಖಿತ ರೂಪದಲ್ಲಿ ಪೋಲಿಸರ ಗಮನಕ್ಕೆ ತಂದಿದೆ.

Copyright © All rights reserved Newsnap | Newsever by AF themes.
error: Content is protected !!