December 19, 2024

Newsnap Kannada

The World at your finger tips!

crime

27 DMK leaders have more than 2 lakh crore assets: Annamalai alleges ಡಿಎಂಕೆ 27 ನಾಯಕರ ಬಳಿ 2 ಲಕ್ಷ ಕೋಟಿಗೂ ಅಧಿಕ ಆಸ್ತಿ : ಅಣ್ಣಾಮಲೈ ಆರೋಪ

ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈಗೆ ಸಚಿವರಿಂದಲೇ ಜೀವ ಬೆದರಿಕೆ

Spread the love

ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈಗೆ ಸಚಿವ ಟಿ.ಎಂ.ಅನ್ಬರಸನ್ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಮಿಳುನಾಡು ಬಿಜೆಪಿ ಘಟಕ ಆರೋಪ ಮಾಡಿದೆ.

ತಮಿಳುನಾಡಿನ ಬಿಜೆಪಿ ಉಪಾಧ್ಯಕ್ಷ ನಾರಾಯಣ್ ತಿರುಪತಿ ಗಂಭೀರ ಆರೋಪ ಹೊರಿಸಿ ಇನ್ಮುಂದೆ ನಮ್ಮ ಸರ್ಕಾರದ ವಿರುದ್ಧ ಮಾತನಾಡಿದರೆ ನಿಮ್ಮನ್ನ ಮುಗಿಸಿ ಹಾಕುತ್ತೇವೆ ಎಂದು ಡಿಎಂಕೆ ಸಚಿವ ಬೆದರಿಕೆ ಹಾಕಿದ್ದಾರೆ. ಮಾತ್ರವಲ್ಲ ದೇಶದ ಪ್ರಧಾನಿ ನರೇಂದ್ರ ಮೋದಿ ಹಾಗೂ ನಮ್ಮ ಪಕ್ಷದ ರಾಜ್ಯಾಧ್ಯಕ್ಷರ ಮೇಲೆ ಆಕ್ಷೇಪಾರ್ಹ ಪದಗಳನ್ನ ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.

ಎಂಕೆ ಸ್ಟಾಲೀನ್ ನೇತೃತ್ವದ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮತ್ತು ಹಿಂದೂ ವಿರೋಧಿಯಾಗಿ ಕೆಲಸ ಮಾಡುತ್ತಿದೆ ಎಂದು ಈ ಹಿಂದೆ ತಮಿಳುನಾಡು ಬಿಜೆಪಿ ಆರೋಪ ಮಾಡಿತ್ತು. ಇದನ್ನು ಓದಿ – ಮೇಕೆದಾಟು ಅಣೆಕಟ್ಟು ನಿರ್ಮಾಣ ವಿಚಾರ – ತಮಿಳುನಾಡಿನಿಂದ ಸುಪ್ರೀಂನಲ್ಲಿ ಮತ್ತೆ ತಕರಾರು

ಅಂದಿನಿಂದ ಡಿಎಂಕೆ ಮತ್ತು ಬಿಜೆಪಿ ನಡುವಿನ ವಾಕ್ಸಮರಗಳು ಜೋರಾಗಿ ನಡೆಯುತ್ತಿವೆ.
ರಾಜ್ಯಾಧಕ್ಷರಿಗೆ ಜೀವ ಬೆದರಿಕೆ ಹಾಕಿರುವ ಸಚಿವರನ್ನು ಈ ಕೂಡಲೇ ಸಚಿವ ಸ್ಥಾನದಿಂದ ಉಚ್ಛಾಟಿಸಬೇಕು ಎಂದು ನಾವು ಆಗ್ರಹಿಸುತ್ತಿದ್ದೇವೆ.

Copyright © All rights reserved Newsnap | Newsever by AF themes.
error: Content is protected !!