December 19, 2024

Newsnap Kannada

The World at your finger tips!

high court , Masjid , dispute

ಜಾಮಿಯಾ ವಿವಾದ : ಟಿಪ್ಪು ಕಾಲದಲ್ಲೇ ಅರ್ಚಕರ ಕೈ ಕತ್ತರಿಸಿ, ಆಂಜನೇಯ ವಿಗ್ರಹವನ್ನು ನದಿಗೆ ಎಸೆದ ಅಂಶ ಬಯಲಿಗೆ

Spread the love
WhatsApp Image 2022 06 06 at 1.50.07 PM

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದ ದಿನಕ್ಕೊಂದು ಮಹತ್ವದ ತಿರುವನ್ನು ಪಡೆದುಕೊಳ್ಳುತ್ತಿದೆ. ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದಕ್ಕೆ ಬಾಲಗಣಪತಿಭಟ್ಟ ಅವರ ಪುಸ್ತಕದಿಂದ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಇದನ್ನು ಓದಿ –ಬೈಕ್ ರೈಡ್ ರ್ ಜೊತೆ ಜಗಳ – ಬೈಕ್ ಸವಾರನಿಗೆ ಸ್ಕಾರ್ಪಿಯೋ ಡಿಕ್ಕಿ; ವೀಡಿಯೊ ಇಲ್ಲಿದೆ

ಬಾಲಗಣಪತಿಭಟ್ಟ ಎಂಬವರು ಬರೆದಿರುವ ಮೂಡಲ ಬಾಗಿಲು ಶ್ರೀ ಆಂಜನೇಯಸ್ವಾಮಿ ಸುಪ್ರಭಾತ ಎಂಬ ಪುಸ್ತಕದಲ್ಲಿ ಜಾಮಿಯಾ ಮಸೀದಿಯನ್ನು ಟಿಪ್ಪು ಸುಲ್ತಾನ್ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ನಾಶಮಾಡಿ ನಿರ್ಮಾಣ ಮಾಡಿದ್ದಾನೆ ಎಂದು ಉಲ್ಲೇಖ ಮಾಡಲಾಗಿದೆ.

ಜಾಮಿಯಾ ಮಸೀದಿಗೂ ಮೊದಲೇ ಅಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವಿತ್ತು. ಆ ದೇವಾಸ್ಥಾನ ನಾಶ ಮಾಡಿ ಟಿಪ್ಪು ಜಾಮಿಯಾ ಮಸೀದಿಯನ್ನು ನಿರ್ಮಾಣ ಮಾಡಿದ್ದಾನೆ. ಇಲ್ಲಿ ದೇವಸ್ಥಾನ ಇತ್ತು ಎಂಬ ಹಿಂದೂ ಸಂಘಟನೆಗಳ ಆರೋಪಕ್ಕೆ ಪೂರಕ ಎಂಬಂತೆ ಹಿಂದೆ ಪ್ರಕಟವಾದ ಬಾಲಗಣಪತಿಭಟ್ಟ ಅವರ ಪುಸ್ತಕ ಸಿಕ್ಕಿದೆ.

ಬಾಲಗಣಪತಿಭಟ್ಟ ಅವರು ಬರೆದಿರುವ ಪುಸ್ತಕದಲ್ಲಿ ಏನಿದೆ?

ಶ್ರೀರಂಗಪಟ್ಟಣ ಈ ಹಿಂದೆ ದಟ್ಟ ಅರಣ್ಯ ಪ್ರದೇಶವಾಗಿತ್ತು. ಗೋಹತ್ಯೆಯ ಪಾಪಕ್ಕೊಳಗಾದ ಗೌತಮ ಋಷಿಗಳು ಇಲ್ಲಿಗೆ ಬಂದು ದೇವಸ್ಥಾನಗಳನ್ನು ಸ್ಥಾಪಿಸಿ ಪೂಜಿಸಿದ್ದರು. ಆ ವೇಳೆ ಶ್ರೀರಂಗಪಟ್ಟಣವನ್ನು ಗೌತಮ ಕ್ಷೇತ್ರ ಎಂದು ಕರೆಯಲಾಗುತ್ತಿತ್ತು. ಆ ವೇಳೆ ಮೂಡಲ ದಿಕ್ಕಿಗೆ ಗೌತಮ ಋಷಿಗಳೇ ಆಂಜನೇಯಸ್ವಾಮಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಆರಾಧನೆ ಮಾಡುತ್ತಿದ್ದರು.

ಶ್ರೀರಂಗಪಟ್ಟಣದ ಸುತ್ತ ಇರುವ ಕೋಟೆ ವಿಜಯನಗರದ ದಂಡನಾಯಕ ತಿಮ್ಮಣ್ಣ ಹೆಬ್ಬಾರನಿಂದ ನಿರ್ಮಿತವಾಗಿದೆ. ತಿಮ್ಮಣ್ಣ ಹೆಬ್ಬಾರ ಕೇವಲ ಆಂಜನೇಯಸ್ವಾಮಿ ಮೂರ್ತಿ ಇದ್ದ ಜಾಗದಲ್ಲಿ ಭವ್ಯವಾದ ಮಂದಿರವೊಂದನ್ನು ಕಟ್ಟಿಸಿದ್ದರು. ಬಳಿಕ ಇಲ್ಲಿ ಪ್ರತಿನಿತ್ಯ ಆಂಜನೇಯಸ್ವಾಮಿಯನ್ನು ಜನರು ಆರಾಧನೆ ಮಾಡುತ್ತಿದ್ದರು.

ಅರ್ಚಕರಾಗಿದ್ದ ನಾರಾಯಣಸ್ವಾಮಿ ಅವರ ಕೈ ಕತ್ತರಿಸಲಾಗಿತ್ತು

ಟಿಪ್ಪು ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ನಾಶ ಮಾಡಿ ಅರ್ಚಕರಾಗಿದ್ದ ನಾರಾಯಣಸ್ವಾಮಿ ಅವರ ಕೈಯನ್ನು ಕತ್ತರಿಸಿ, ದೇವಸ್ಥಾನದ ಒಳಭಾಗದಲ್ಲಿ ಇದ್ದ ಏಳು ಕೊಪ್ಪರಿಗೆ ಹಣ ಹಾಗೂ ಅಮೂಲ್ಯವಾದ ರತ್ನಾಭರಣಗಳನ್ನು ದೋಚಲಾಗಿದೆ. ಆ ಹಣದಿಂದಲೇ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಇಲ್ಲಿದ್ದ ಮೂಡಲಬಾಗಿಲು ಆಂಜನೇಯಸ್ವಾಮಿ ಮೂಲ ವಿಗ್ರಹವನ್ನು ಕಾವೇರಿ ನದಿಗೆ ಎಸೆದಿದ್ದಾನೆ.

ಆಂಜನೇಯಸ್ವಾಮಿ ಮೂಲ ವಿಗ್ರಹ ಪೇಟೆ ಬೀದಿಯಲ್ಲಿ ಮರುಪ್ರತಿಷ್ಠಾಪನೆ

ಅರ್ಚಕರಾದ ನಾರಾಯಣಸ್ವಾಮಿ ಅವರು ಕಾವೇರಿ ನದಿಯಲ್ಲಿ ಹೋಗುವ ವೇಳೆ ದಿವ್ಯವಾಣಿಯೊಂದು ‘ನಾನು ನಿನ್ನ ಜೊತೆ ಬರುತ್ತೇನೆ’ ಎಂದು ಕೇಳಿಬಂದಿದೆ. ಅದೇನೂ ಎಂದು ನೋಡಿದ ವೇಳೆ ಅಲ್ಲಿ ಮೂಡಲಬಾಗಿಲು ಆಂಜನೇಯಸ್ವಾಮಿಯ ಮೂಲ ವಿಗ್ರಹ ಪತ್ತೆಯಾಗುತ್ತೆ. ನಂತರ ಶ್ರೀರಂಗಪಟ್ಟಣದ ಪೇಟೆ ಬೀದಿಯಲ್ಲಿ ಮರುಪ್ರತಿಷ್ಠಾಪನೆ ಮಾಡಿ ಆರಾಧನೆ ಮಾಡಿದರು ಎಂದು ಬಾಲಗಣಪತಿಭಟ್ಟ ಅವರು ಈ ಪುಸ್ತಕದಲ್ಲಿ ಬರೆದಿದ್ದಾರೆ.

ಇಲ್ಲಿರುವ ದೇವಸ್ಥಾನದ ಮಾದರಿಯ ಕಂಬಗಳು, ಕೆತ್ತನೆಗಳು, ಕಲ್ಯಾಣಿ, ಬಾವಿ, ಗೋಪುರದ ಕಳಶಗಳನ್ನು ನೋಡಿ ಇದು ದೇವಸ್ಥಾನ ಎಂದು ತಿಳಿಯುತ್ತದೆ. ಹೀಗಾಗಿ ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನಮಗೆ ಮತ್ತೆ ಜಾಮಿಯಾ ಬಳಿ ಮೂಡಲಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ಪ್ರತಿಷ್ಠಾಪನೆ ಮಾಡಬೇಕೆಂದು ಹಿಂದೂಪರ ಸಂಘಟನೆಗಳು ಹೋರಾಟಗಳನ್ನು ಆರಂಭಿಸಿದೆ.

ಜಾಮಿಯಾ ಮಸೀದಿಯಲ್ಲಾ, ಮಂದಿರಾ ಎಂದು ಹೋರಾಟ ನಡೆಸುತ್ತಿರುವ ವೇಳೆ ಬಾಲಗಣಪತಿಭಟ್ಟ ಅವರ ಪುಸ್ತಕ ದೊರೆತಿರುವುದು ಸಂಚಲನ ಮೂಡಿಸಿದೆ. ದೊರೆತಿರುವ ಪುಸ್ತಕವಾದ್ರು ಯಾವ ಕಾಲ ಘಟ್ಟದ್ದೂ, ಆ ಪುಸ್ತಕದಲ್ಲಿ ಬರೆದಿರುವ ವಿಚಾರಗಳ ಸತ್ಯ ಸತ್ಯತೆಗಳ ಬಗ್ಗೆ ಸರ್ಕಾರ ಪರಿಶೀಲಿಸಬೇಕಿದೆ.

Copyright © All rights reserved Newsnap | Newsever by AF themes.
error: Content is protected !!