December 19, 2024

Newsnap Kannada

The World at your finger tips!

nadal

ಫ್ರೆಂಚ್​ ಓಪನ್​​: ನಡಾಲ್​ಗೆ ದಾಖಲೆಯ ಗ್ರ್ಯಾನ್​ಸ್ಲಾಮ್​ ಕಿರೀಟ!

Spread the love

ಟೆನ್ನಿಸ್​ ದಿಗ್ಗಜ ಸ್ಪೇನ್​​ನ ರಾಫೆಲ್​ ನಡಾಲ್​​​​ ಮತ್ತೊಂದು ಗ್ರ್ಯಾನ್​ಸ್ಲಾಮ್​ ಕಿರೀಟ ತೊಟ್ಟಿದ್ದಾರೆ. 22ನೇ ಗ್ಯಾನ್​ಸ್ಲಾಮ್​ ಗೆದ್ದು ಚರಿತ್ರೆ ಸೃಷ್ಟಿಸಿ 14ನೇ ಫ್ರೆಂಚ್​ ಓಪನ್​​​​ ಟೈಟಲ್​​ ಗೆದ್ದು ಇತಿಹಾಸ ನಿರ್ಮಿಸಿದ್ದಾರೆ.

2022ರ ಫ್ರೆಂಚ್​ ಓಪನ್​​ ಪುರುಷರ ಸಿಂಗಲ್ಸ್‌ ಫೈನಲ್​​​ ಪಂದ್ಯದಲ್ಲಿ ಗೆದ್ದ ರಾಫೆಲ್​ ನಡಾಲ್​, 6-3, 6-3, 6-0 ನೇರ ಸೆಟ್​​​ಗಳಿಂದ ಭರ್ಜರಿ ಗೆಲುವು ದಾಖಲಿಸಿದರು.

ಇದೇ ಮೊದಲ ಬಾರಿಗೆ ಫೈನಲ್​ ಪ್ರವೇಶ ಪಡೆದಿದ್ದ ಕಾಸ್ಪರ್​ ರೂಡ್​ ಸೋತು ನಿರಾಸೆ ಅನುಭವಿಸಿದರು. ಫಿಲಿಪ್ ಚಾಟ್ರಿಯರ್ ಅಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಆಟ ಆರಂಭದಿಂದಲೂ ನಡಾಲ್​ ಮೇಲುಗೈ ಸಾಧಿಸಿದರು. ಇದನ್ನು ಓದಿ : ಬೈಡನ್ ನಿವಾಸದ ಮೇಲೆ ವಿಮಾನ ಹಾರಾಟ – ದಾಳಿ ಭೀತಿ: ಸ್ಥಳಾಂತರ

ಮೊದಲ ಸೆಟ್​​ನಲ್ಲಿ ಹೀನಾಯ ಹಿನ್ನಡೆ ಅನುಭವಿಸಿದ್ದ ರೂಡ್​, 2ನೇ ಸೆಟ್​​ನಲ್ಲಿ ಕೊಂಚ ಹೋರಾಟ ನಡೆಸಿದರು. ಕೊನೆಗೆ ಆ ಸೆಟ್​ ಕೂಡ ನಡಾಲ್​ ಪಾಲಾಯಿತು.

ಇನ್ನು ಮೂರನೇ ಸೆಟ್​​​ನಲ್ಲಿ ಕಾಸ್ಪರ್​​ ರೂಡ್​​​, ಯಾವುದೇ ಹಂತದಲ್ಲೂ ಪ್ರತಿರೋಧ ನೀಡಲೇ ಇಲ್ಲ. 22ನೇ ಗ್ರ್ಯಾನ್​ಸ್ಲಾಮ್​ಗೆ ಮುತ್ತಿಕ್ಕಿರುವ ನಡಾಲ್​, ಹೆಚ್ಚು ಗ್ರ್ಯಾನ್​​ಸ್ಲಾಮ್​ ಗೆದ್ದ ಟೆನ್ನಿಸ್​ ಕಿಂಗ್​ ಎನಿಸಿಕೊಂಡಿದ್ದಾರೆ. ರೋಜರ್​​ ಫೆಡರರ್​​​ ಮತ್ತು ನೋವಾಕ್​ ಜೋಕೋವಿಚ್​ ತಲಾ 20 ಗ್ರ್ಯಾನ್​ಸ್ಲಾಮ್​ ಗೆದ್ದು 2ನೇ ಸ್ಥಾನದಲ್ಲಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!