December 19, 2024

Newsnap Kannada

The World at your finger tips!

drinks,alcohol,price

Council elections: money and bribe

ಪರಿಷತ್ ಚುನಾವಣೆ: ಮತದಾರರ ಸೆಳೆಯಲು ಹಣ, ಹೆಂಡ, ಬಾಡೂಟದ್ದೇ ದರ್ಬಾರು !

Spread the love

ಈ ಕಾಲದಲ್ಲಿ ನಡೆಯುವ ಯಾವುದೇ ಚುನಾವಣೆಗಳೂ ಆಮಿಷಗಳಿಲ್ಲದೇ ನಡೆಯುವುದಿಲ್ಲ.
ವಿಧಾನ ಪರಿಷತ್ ನ ಪದವೀಧರ ಕ್ಷೇತ್ರಕ್ಕೆ ಚುನಾವಣೆ ಜೂನ್ 13 ರಂದು ನಡೆಯಲಿದೆ. ಮತದಾರರನ್ನು ಸೆಳೆಯಲು ಹಣ, ಮದ್ಯ , ಬಾಡೂಟ ಮತ್ತು ಔತಣಕೂಟಗಳು ತೀರಾ ಮಾಮೂಲಿಯಾಗಿವೆ

ಅಷ್ಟು ಮಾತ್ರವಲ್ಲದೆ ಅಭ್ಯರ್ಥಿಗಳು GooglePay, PayTM ಅಥವಾ ಮತದಾರರ ಇತರ ಡಿಜಿಟಲ್ ವ್ಯಾಲೆಟ್ ಖಾತೆಗಳನ್ನು ಹುಡುಕುತ್ತಿದ್ದಾರೆ.ಕಾರಣ ಮತದಾರನ ಖಾತೆಗೆ ಹಣವನ್ನು ನೇರವಾಗಿ ವರ್ಗಾಯಿಸಿ ಮತ ಭಿಕ್ಷೆ ಬೇಡುವ ಸಂಪ್ರದಾಯ ಜಾರಿ ಬಂದಿದೆ. ಇದನ್ನು ಓದಿ –ಹಾಸ್ಯ ನಟ ನರಸಿಂಹರಾಜು ಹಿರಿಯ ಪುತ್ರಿ ಧರ್ಮವತಿ ಇನ್ನಿಲ್ಲ

ಈ ಪರಿಷತ್ ಚುನಾವಣೆಯಲ್ಲಿ ಬುದ್ದಿ ಜೀವಿಗಳು, ಮತ್ತು ವಿದ್ಯಾವಂತರು ಆಯ್ಕೆಯಾಗಿ ಬರುವ ಸದನ ಎಂಬ ಹೆಗ್ಗಳಿಕೆಯಿತ್ತು. ಆದರೆ ಪರಿಷತ್ ಚುನಾವಣೆ ಕೂಡ ತನ್ನ ಘನತೆ ಕಳೆದುಕೊಳ್ಳುತ್ತಿದೆ

ಆಮಿಷಗಳ ಪಟ್ಟಿ :

  1. 500 – 2000 ರು ಪೇ – ಬಸ್ ಛಾರ್ಜಿಗೂ ಕಾಸು ! ಈಗ ಮತದಾರರಿಗೆ ಸುಮಾರು 500 ರಿಂದ 2000 ರು ಹಣ ವರ್ಗಾವಣೆ ಮಾಡಲಾಗುತ್ತಿದೆ .
  2. ಮತದಾರರು ತಮ್ಮ ಊರಿಗೆ ಬಂದು ಮತ ಚಲಾಯಿಸಲು ಅವರಿಗೆ ಸಾರಿಗೆ ವೆಚ್ಚ ಕೂಡ ನೀಡಲಾಗುತ್ತಿದೆ.
  3. ಅಭ್ಯರ್ಥಿಗಳು ವಿಶೇಷವಾಗಿ ನಿರುದ್ಯೋಗಿಗಳು,
    ವಿದ್ಯಾರ್ಥಿಗಳು ಮತ್ತು ಖಾಸಗಿ ವಲಯದಲ್ಲಿ ಕೆಲಸ ಮಾಡುವ ಯುವ ಪದವೀಧರರನ್ನು ಅಭ್ಯರ್ಥಿಗಳು ಗುರಿಯಾಗಿಸಿಕೊಂಡಿದ್ದಾರೆ.
  4. ಅಭ್ಯರ್ಥಿಗಳು ವೀಡಿಯೊ ಮತ್ತು ಆಡಿಯೊ ಸಂದೇಶಗಳನ್ನು ಅಪ್‌ಲೋಡ್ ಮಾಡಲು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಸಹ ಬಳಸುತ್ತಿದ್ದಾರೆ.
  5. ಮತದಾರರಿಗೆ ವಿಮೆ ಸೌಲಭ್ಯ ಕಲ್ಪಿಸುವುದಾಗಿ ಸ್ವತಂತ್ರ ಅಭ್ಯರ್ಥಿಯೊಬ್ಬರು ಭರವಸೆ ನೀಡಿದ್ದಾರೆ ಎನ್ನಲಾಗಿದೆ
  6. ಅತಿ ಹೆಚ್ಚು ಮತದಾರರನ್ನು ಹೊಂದಿರುವ, ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ ಜಿಲ್ಲೆಯ, ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿಯೂ ಮತದಾರರಿಗೆ ಅದ್ದೂರಿ ಭೋಜನ ಏರ್ಪಡಿಸಲಾಗುತ್ತಿದೆ.
  7. 1 ಲಕ್ಷ 33 ಸಾವಿರ ಮತದಾರರ ಪೈಕಿ ಮೈಸೂರಿನಲ್ಲಿ ಅತಿ ಹೆಚ್ಚು ಅಂದರೆ 54,039, ಮಂಡ್ಯ 44,370, ಹಾಸನ 23,038 ಮತ್ತು ಚಾಮರಾಜನಗರ 11,626 ಮತದಾರರಿದ್ದಾರೆ.
  8. ಪರಿಷತ್ ಚುನಾವಣೆಯಲ್ಲಿ ಖರ್ಚಿಗೆ ಮಿತಿ ಇಲ್ಲದ ಕಾರಣ ಅಭ್ಯರ್ಥಿಗಳು ಹೆಚ್ಚಿನ ಹಣ ಖರ್ಚು ಮಾಡುತ್ತಿದ್ದಾರೆ. ದೊಡ್ಡ ಪಕ್ಷಗಳ ಅಭ್ಯರ್ಥಿಗಳಂತೆ ಪಕ್ಷೇತರರೂ ಪ್ರಣಾಳಿಕೆಗಳನ್ನು ಹೊರತಂದಿದ್ದಾರೆ.
  9. ನಿರುದ್ಯೋಗಿ ಪದವೀಧರರಿಗೆ ಗೌರವಧನ, ಅತಿಥಿ ಅಧ್ಯಾಪಕರ ಕಾಯಂಗೊಳಿಸುವಿಕೆ, ಶಿಕ್ಷಕರ ನೇಮಕಾತಿ ಭರವಸೆ ನೀಡಿದ್ದಾರೆ.
Copyright © All rights reserved Newsnap | Newsever by AF themes.
error: Content is protected !!