January 29, 2026

Newsnap Kannada

The World at your finger tips!

hathras incident

ಪಂಜಾಬ್ ನಲ್ಲಿ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಕೊಲೆ

Spread the love

ಪಂಜಾಬ್​ನಲ್ಲಿ ಭಯಾನಕ ಘಟನೆಯೊಂದು ನಡೆದಿದೆ. 6 ವರ್ಷದ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಲಾಗಿದೆ. ಆ ಬಾಲಕಿಯ ಅರೆಬರೆ ಸುಟ್ಟ ಮೃತದೇಹ ಆರೋಪಿಯ ಮನೆಯಲ್ಲಿ ಪತ್ತೆಯಾಗಿದೆ!

ಪಂಜಾಬ್​ನ ಹೋಶಿಯಾರ್​ಪುರದ ಜಲಾಲ್ಪುರ ಗ್ರಾಮದಲ್ಲಿ ಈ ಹೀನ ಕೃತ್ಯ ನಡೆದಿದೆ. ವಲಸೆ ಕಾರ್ಮಿಕನ ಮಗಳಾಗಿದ್ದ 6 ವರ್ಷದ ಬಾಲಕಿಯನ್ನು ಆಕೆಯ ತಂದೆ-ತಾಯಿ ಕೆಲಸಕ್ಕೆ ಹೋಗುವಾಗ ಮನೆಯಲ್ಲೇ ಬಿಟ್ಟು ಹೋಗುತ್ತಿದ್ದರು. ಈ ವೇಳೆ ಗುರಪ್ರೀತ್ ಸಿಂಗ್ ಆಕೆಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ, ಅತ್ಯಾಚಾರವೆಸಗಿದ್ದಾನೆ ಎಂದು ಬಾಲಕಿಯ ತಂದೆ ದೂರು ನೀಡಿದ್ದಾರೆ

ಆ ದೂರಿನ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು ಗುರಪ್ರೀತ್ ಸಿಂಗ್ ಮನೆಗೆ ತೆರಳಿದಾಗ ಆತನ ಮನೆಯಲ್ಲಿ ಅರ್ಧಂಬರ್ಧ ಸುಟ್ಟುಹೋಗಿದ್ದ ಬಾಲಕಿಯ ಶವ ಪತ್ತೆಯಾಗಿತ್ತು.

ಕೊಲೆ ಆರೋಪಿಗಳಾದ ಗುರಪ್ರೀತ್ ಸಿಂಗ್ ಮತ್ತು ಆತನ ಅಜ್ಜ ಸುರ್ಜೀತ್ ಸಿಂಗ್ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ. ಬಾಲಕಿಯನ್ನು ಮನೆಗೆ ಕರೆದುಕೊಂಡು ಹೋಗಿದ್ದ ಗುರಪ್ರೀತ್ ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ನಂತರ ತನ್ನ ಅಜ್ಜ ಸುರ್ಜೀತ್ ಸಿಂಗ್ ಜೊತೆ ಸೇರಿ ಆಕೆಯನ್ನು ಕೊಲೆ ಮಾಡಿದ್ದ.

ಕೊಲೆಯ ವಿಷಯ ಗೊತ್ತಾಗಬಹುದು ಎಂಬ ಭೀತಿಯಲ್ಲಿ ಆಕೆಯ ಶವವನ್ನು ಮನೆಯಲ್ಲೇ ಸುಟ್ಟುಹಾಕಿದ್ದ. ಪೂರ್ತಿ ಸುಟ್ಟಿರದ ಮೃತದೇಹ ಪೊಲೀಸ್ ವಿಚಾರಣೆ ವೇಳೆ ಸಿಕ್ಕಿತ್ತು. ಮೃತ ಬಾಲಕಿಯ ತಂದೆ ನೀಡಿದ ದೂರಿನ ಆಧಾರದಲ್ಲಿ ಗುರಪ್ರೀತ್ ಸಿಂಗ್ ಮತ್ತು ಸುರ್ಜೀತ್ ಸಿಂಗ್ ಅವರ ಮೇಲೆ ಪೋಕ್ಸೋ ಕಾಯ್ದೆ ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಲಾಗಿದೆ. ಜೊತೆಗೆ ಅತ್ಯಾಚಾರ ಮತ್ತು ಕೊಲೆಯ ಕೇಸನ್ನೂ ದಾಖಲಿಸಲಾಗಿದೆ.

error: Content is protected !!